• July 4, 2025
  • Last Update July 2, 2025 6:09 pm
  • Brahmavara

ಕುಂಜಾಲಿನಲ್ಲಿ ದನದ ರುಂಡ ಪತ್ತೆ ; ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೋಲೀಸರಿಗೆ ದೂರು

ಕುಂಜಾಲಿನಲ್ಲಿ ದನದ ರುಂಡ ಪತ್ತೆ ; ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೋಲೀಸರಿಗೆ ದೂರು

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿ ಮಿತ್ರ ಪತ್ರಿಕೆ ಸುದ್ಧಿ :

ಬ್ರಹ್ಮಾವರ,ಜೂ.29: ಬ್ರಹ್ಮಾವರ ತಾಲೂಕು ಕುಂಜಾಲಿನಲ್ಲಿ ದುಷ್ಕರ್ಮಿಗಳು ಕಡಿದ ದನದ ತಲೆಯನ್ನು ಎಸೆದು ಹೋಗಿರುವುದು ಕಂಡು ಬಂದಿದೆ. ಇದನ್ನು ಗಮನಿಸಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಲಾಗಿದೆ.
ದೂರು ನೀಡುವ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಪ್ರಮುಖರಾದ ರಾಜೇಶ್ ಶೆಟ್ಟಿ ಕುಮ್ರಗೋಡು, ಹಾರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಮಾರ್ ಸುವರ್ಣ, ಉದಯ ಆಚಾರ್ ಹೇರೂರು, ಪ್ರಶಾಂತ್ ಮಾಯಾಡಿ, ವಿಜಯ ನಾಯರಿ ಬ್ರಹ್ಮಾವರ, ಹರೀಶ್ ಶೆಟ್ಟಿ ಕರ್ಜೆ, ಭುವನೇಶ್ ನಾಯ್ಕ್ ಕರ್ಜೆ, ಗುರುರಾಜ್ ಶೆಟ್ಟಿ ಹೇರೂರು, ಅರ್ಜುನ್ ನಾಯರಿ ಬ್ರಹ್ಮಾವರ, ನವೀನ್ ಪೇತ್ರಿ, ಉಮೇಶ್ ಪೂಜಾರಿ ಬ್ರಹ್ಮಾವರ ಇನ್ನಿತರರಿದ್ದರು.
ಇದು ಕೋಮು ಸೌಹಾರ್ದವನ್ನು ಹಾಳುಮಾಡಲು ಎಸಗಿದ ದುಷ್ಕೃತ್ಯವಾಗಿದ್ದು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *