• May 10, 2026
  • Last Update May 7, 2026 4:06 pm
  • Brahmavara

ಬ್ರಹ್ಮಾವರದಲ್ಲಿ ಅಭಿಮತ ಸಂಭ್ರಮ ಕಚೇರಿ ಉದ್ಘಾಟನೆ

ಬ್ರಹ್ಮಾವರದಲ್ಲಿ ಅಭಿಮತ ಸಂಭ್ರಮ ಕಚೇರಿ ಉದ್ಘಾಟನೆ

ಬ್ರಹ್ಮಾವರ: ವಿಶಿಷ್ಟವಾದ ಹಾಗೂ ಅತ್ಯಂತ ಅರ್ಥಪೂರ್ಣವಾಗಿ ಕಾರ್ಯಕ್ರಮಗಳಿಗೆ ವೇದಿಕೆಯಾಗುವ ಅಭಿಮತ ಸಂಭ್ರಮ ಈ ಬಾರಿ ಬ್ರಹ್ಮಾವರದಲ್ಲಿ ಅನಾವರಣಗೊಳ್ಳುತ್ತಿರುವುದು ಸಂತೋಷವನ್ನು ತಂದಿದೆ ಎಂದು ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.
ಇಲ್ಲಿನ ಸ್ವರ್ಣ ನಗರದಲ್ಲಿ ಭಾನುವಾರ ನಡೆದ ಅಭಿಮತ ಸಂಭ್ರಮದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಿಂದ ತಾಲ್ಲೂಕು ಕೇಂದ್ರಕ್ಕೆ ಬಂದಿರುವ ಅಭಿಮತ ಸಂಭ್ರಮ ಇನ್ನಷ್ಟು ವಿಸ್ತಾರಗೊಂಡು, ರಾಜ್ಯ ಹಾಗೂ ದೇಶ ಮಟ್ಟದಲ್ಲಿಯೂ ಪಸರಿಸಲಿ ಎಂದು ಹಾರೈಸಿದರು.
ಹೆದ್ದಾರಿ ಮಠದ ವೇದಮೂರ್ತಿ ಗುರುಮೂರ್ತಿ ಅಡಿಗ ಅವರು ವೇದ ಮಂತ್ರ ಘೋಷದ ಪಠಣದೊಂದಿಗೆ ಅಭಿಮತ ಸಂಭ್ರಮ ಕಚೇರಿ ಉದ್ಘಾಟಿಸಿದರು.


ಉದ್ಯಮಿಗಳಾದ ಕುಶಲ ಶೆಟ್ಟಿ ಮಣೂರು ಹಾಗೂ ಅಚ್ಯುತ ಪೂಜಾರಿ ಬ್ರಹ್ಮಾವರ, ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಪ್ರಮುಖರಾದ ಉದಯ ಶೆಟ್ಟಿ ಪಡುಕರೆ, ಪ್ರವೀಣ ಯಕ್ಷಿಮಠ, ಶರತ್‌ಕುಮಾರ ಶೆಟ್ಟಿ ಉಪ್ಪುಂದ, ಅರುಣ್‌ಕುಮಾರ ಶೆಟ್ಟಿ ಗಿಳಿಯಾರ್, ದಿನೇಶ ಶೆಟ್ಟಿ ಬೇಳೂರು, ಗುರುಕಾರ್ತಿಕ್ ಶೆಟ್ಟಿ ಉಪ್ಪುಂದ, ಸುದೇಶ್ ಶೆಟ್ಟಿ ಬ್ರಹ್ಮಾವರ, ಅಶೋಕ್ ಶೆಟ್ಟಿ ಬನ್ನಾಡಿ,ಪ್ರವೀರ ಆಚಾರ್ಯ ಬಾರ್ಕೂರು,ಅಶ್ವಿತ ಶೆಟ್ಟಿ ಕೊಡ್ಲಾಡಿ ಇದ್ದರು.
ರಾಘವೇಂದ್ರರಾಜ್ ಸಾಸ್ತಾನ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page