ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ : ಬ್ರಹ್ಮಾವರ,ನ.೧ : ಯಾರೇ ಆಗಲಿ ವೃತ್ತಿಯಿಂದ ನಿವೃತ್ತಿಯ ಬಳಿಕ ಮನೆಯಲ್ಲಿ ಕುಳಿತುಕೊಳ್ಳದೆ ಸಾಮಾಜಿಕ ಚಟುಚಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಹಾರಾಡಿ ನಿತ್ಯಾನಂದ ಶೆಟ್ಟಿ ಹೇಳಿದರು. ಅವರು ಬ್ರಹ್ಮಾವರ ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಅಜಪುರ ಕರ್ನಾಟಕ ಸಂಘ(ರಿ.)ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮಾತನಾಡಿ ಮನೆಯಲ್ಲಿ ನಾವು ಬಳಸುವ ಭಾಷೆ ಯಾವುದೇ ಇರಲಿ ಮನೆಯಿಂದ ಹೊರಗೆ ಬಂದಾಗ ನಮಗೆ ಬೇಕಾಗುವುದು ಕನ್ನಡ. ನಮ್ಮ ಕನ್ನಡ ಭಾಷೆಯನ್ನು ಮರೆಯಬಾರದು. ಪೋಷಕರು ಮಕ್ಕಳಿಗೆ ಶಿಕ್ಷಣಕ್ಕೆ ಮಾತ್ರ ಪ್ರಾತಿನಿದ್ಯ ನೀಡದೆ ನಮ್ಮ ಕಲೆಯ ಬಗ್ಗೆ, ಸಂಸ್ಕೃತಿಯ ಬಗ್ಗೆಯೂ ತಿಳಿ ಹೇಳಬೇಕು. ರಂಗಭೂಮಿ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಮೊಬೈಲ್‌ನಲ್ಲಿ ಮಕ್ಕಳು ಮುಳುಗಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ನಡೂರು ಶ್ರೀ ವಾಣಿ ವಿದ್ಯಾಭಿವೃದ್ಧಿ ಸಂಘ(ರಿ.)ದ ಗೌರವ ಮಾರ್ಗದರ್ಶಕರಾದ ಪ್ರೊ.ಸಖಾರಾಮ ಸೋಮಯಾಜಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಭಾಸ್ಕರ ಎಮ್.ಶೆಟ್ಟಿ, ಅಜಪುರ ಕರ್ನಾಟಕ ಸಂಘದ ಕಾರ್ಯದರ್ಶಿ ದಿನಕರ ಶೆಟ್ಟಿ ಬೈಕಾಡಿ ಉಪಸ್ಥಿತರಿದ್ದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಕೆ. ಹಾಗೂ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ವೀಣಾ ಶೆಟ್ಟಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಅಲ್ಫೋನ್ಸ್‌ಸ್ ಡಿಸೋಜರ ಮೂರು ಕವನ ಸಂಕಲನವನ್ನು ಹಿರಿಯ ನಾಗರಿಕರ ವೇದಿಕೆಯ ಭಾಸ್ಕರ ರೈ, ಜಯರಾಮ ಶೆಟ್ಟಿ , ಹಾರಾಡಿ ನಿತ್ಯಾನಂದ ಶೆಟ್ಟಿ, ನಿವೃತ್ತ ಪೋಸ್ಟ್ ಮಾಸ್ಟರ್ ಮಾಧವ ಖಾರ್ವಿ, ಕೆ.ಕೃಷ್ಣಮೂರ್ತಿ, ಭಾಸ್ಕರ ಎಂ.ಶೆಟ್ಟಿ ಯವರು ಬಿಡುಗಡೆಗೊಳಿಸಿದರು.
ನಿಶಿತಾ ಡಿಸೋಜ ಕವನ ಸಂಕಲನ ಬಿಡುಗಡೆಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಭಾಸ್ಕರ ಶೆಟ್ಟಿ ಚಾಂತಾರು ಹಾಗೂ ಕೆ. ಕೃಷ್ಣಮೂರ್ತಿ ಸನ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷ ಬಲರಾಮ ಕಲ್ಕೂರ ಸ್ವಾಗತಿಸಿದ್ದು ಆರ್.ಎಮ್. ಸಾಮಗ ನಿರೂಪಿಸಿದರು. ಕೋಶಾಧಿಕಾರಿ ಆರ್.ಟಿ.ಭಟ್, ಸಹಕಾರ್ಯದರ್ಶಿ ಗಿರೀಶ್ ಅಡಿಗ ಹಾಗೂ ಶ್ರೀಮತಿ ಗಾಯತ್ರಿ ದಿನಮಣಿ ಶಾಸ್ತ್ರಿ ಮತ್ತು ಸಮಿತಿಯ ಸದಸ್ಯರು ಸಹಕಾರಿಸಿದರು.
ನಂತರ ಅಭಿನಯ ಕಲಾವಿದರು ಉಡುಪಿ ಇವರಿಂದ ಶಾಂಭವಿ ನಾಟಕ ಪ್ರದರ್ಶನಗೊಂಡಿತು.



