• February 16, 2026
  • Last Update February 16, 2026 5:57 pm
  • Brahmavara

ಕಟಪಾಡಿ ಜಂಕ್ಷನ್ ವಾಹನ ಮೇಲ್ಸೆತುವೆ, ಅಂಡರ್‌ಪಾಸ್ ರಸ್ತೆ11ತಿಂಗಳಲ್ಲಿ ಮುಕ್ತಾಯ – ಸಂಸದ ಕೋಟ

ಕಟಪಾಡಿ ಜಂಕ್ಷನ್ ವಾಹನ ಮೇಲ್ಸೆತುವೆ, ಅಂಡರ್‌ಪಾಸ್ ರಸ್ತೆ11ತಿಂಗಳಲ್ಲಿ ಮುಕ್ತಾಯ – ಸಂಸದ ಕೋಟ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಉಡುಪಿ, ಫೆ.೧೬: ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಜಂಕ್ಷನ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್‌ಪಾಸ್ ರಸ್ತೆ ಹಾಗೂ ವಾಹನ ಮೇಲ್ಸೆತುವೆ ಗುತ್ತಿಗೆದಾರರಿಗೆ ನಿಗದಿಪಡಿಸಿದ ಅವಧಿಯೊಳಗೆ ಮುಕ್ತಾಯಗೊಳ್ಳಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಫೆ.೧೬ರಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರೊಂದಿಗೆ ತೆರಳಿ ಕಾಮಗಾರಿ ಪ್ರಗತಿಯನ್ನು ವೀಕ್ಷಿಸುತ್ತಾ ಮಾಹಿತಿ ನೀಡಿದರು.


ಮಾರ್ಚ್ ಕೊನೇಯ ವಾರದಲ್ಲಿ ಒಂದು ಬದಿರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ರಸ್ತೆ ನಿರ್ಮಿಸಿ ವಾಹನಗಳ ಸಂಚಾರಕ್ಕೆ ಬಿಟ್ಟು ಕೊಡಲಿದ್ದಾರೆ. ಆ ನಂತರ ಮತ್ತೊಂದು ಭಾಗವನ್ನು ಆರಂಭಿಸಿ ಮೇಲ್ಸೆತುವೆ ಮುಗಿಸಲಿದ್ದಾರೆ. ಕಾಮಗಾರಿಯನ್ನು ಕೈಗೆತ್ತಿಗೊಂಡ ೧೧ ತಿಂಗಳೊಳಗೆ ಕೆಲಸ ಮುಗಿಸಲಿದ್ದಾರೆ. ಕಾಮಗಾರಿ ವೇಗದಲ್ಲಿದ್ದು ತೃಪ್ತಿಕರವಾಗಿದೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಹಾಗೂ ಪ್ರಮುಖರು ಕಾಮಗಾರಿಯನ್ನು ನಿರಂತರ ಗಮನಿಸುತ್ತಿದ್ದಾರೆ. ನಿಗದಿಪಡಿಸಿದ ಸಮಯದೊಳಗೆ ಕೆಲಸ ಮುಗಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಸಂಸದರು ಹೇಳಿದರು.


ಸಂಸದರೊಂದಿಗೆ ಆಗಮಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಕಾಮಗಾರಿಗಳ ಕುರಿತು ಅಧಿಕಾರಿಗಳಲ್ಲಿ ಚರ್ಚಿಸುತ್ತಾ ಜನರಿಗೆ ತೊಂದರೆಯಾಗದಂತೆ ಅತಿ ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಿದರು.


ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಗೀತಾಂಜಲಿ ಎಂ.ಸುವರ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪವಿತ್ರಾ ಶೆಟ್ಟಿ, ಶ್ರೀಮತಿ ಸವಿತಾ ಅಶೋಕ್ ಶೆಟ್ಟಿ, ಸುಭಾಸ್ ಬಲ್ಲಾಳ್, ಮೊಯ್ಗಿನ್ ಸಾಹೇಬ್, ಕಾಪು ಹೊರಠಾಣಾ (ಕಟಪಾಡಿ) ಸಬ್ ಇನ್ಸ್‌ಪೆಕ್ಟರ್ ದಯಾನಂದ್, ಪ್ರಮುಖರಾದ ಮುರಳೀಧರ ಪೈ, ಸಂತೋಷ್, ಹರ್ಷಿತ್, ನಿತಿನ್ ವಿ.ಶೇರೆಗಾರ್, ಅಶೋಕ್ ಶೆಟ್ಟಿ, ಪ್ರಸನ್ನ ಭಟ್, ನಾಗೇಶ್ ಭಂಡಾರಿ, ಪಾಂಚಜನ್ಯ ಪ್ರಭಾಕರ್ ಇದ್ದರು.

administrator

Related Articles

Leave a Reply

Your email address will not be published. Required fields are marked *