• February 9, 2026
  • Last Update February 2, 2026 6:06 pm
  • Brahmavara

ಕೊಕ್ಕರ್ಣೆ : ಕಡಿಮೆ ಗುಣಮಟ್ಟದ ಚಿನ್ನವಿಟ್ಟು ವಂಚನೆ

ಕೊಕ್ಕರ್ಣೆ : ಕಡಿಮೆ ಗುಣಮಟ್ಟದ ಚಿನ್ನವಿಟ್ಟು ವಂಚನೆ

ಉಡುಪಿ ಮಿತ್ರ ಪತ್ರಿಕೆ ಸುದ್ದಿ :
ಬ್ರಹ್ಮಾವರ, ಅ.೨೯: ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ(ನಿ.)ದಲ್ಲಿ ಕಡಿಮೆ ಗುಣಮಟ್ಟದ ಚಿನ್ನ ಅಡವಿಟ್ಟು ವಂಚಿಸಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದಿನಾಂಕ 24/07/2025 ರಂದು ಯಶವಂತ ಕುಮಾರ್ ಎಂಬವನು ಶಾಖೆಗೆ ಬಂದು 69.400 ಗ್ರಾಂ ತೂಕದ ೦4 ಬಳೆ, 1 ಎಳೆ ಚೈನ್‌ನ್ನು ನೀಡಿ ಗರಿಷ್ಠ ಸಾಲ ನೀಡಲು ಕೇಳಿಕೊಂಡಿದ್ದ. ಅದರಂತೆ ಸಂಘದ ಅಪ್ರೈಸರ್ ಆದ ಕೆ. ಭಾಸ್ಕರ ಆಚಾರ್ಯ ಚಿನ್ನಾಭರಣಗಳನ್ನು ಪರೀಕ್ಷಿಸಿ 5,20,400/- ರೂ ಸಾಲ ನೀಡಬಹುದೆಂದು ದೃಢಿಕರಣ ನೀಡಿದ್ದರು. ಅದರ ಆಧಾರದ ಮೇಲೆ 4,60,000/- ಸಾಲ ನೀಡಿದ್ದು, ಕೆಲವೊಂದು ದಿನಗಳ ಬಳಿಕ ಆರೋಪಿಯು ಅಡವಿರಿಸಿದ ಚಿನ್ನಾಭರಣಗಳನ್ನು ಪರೀಕ್ಷಿಸಿದಾಗ ಅಲ್ಪ ಗುಣಮಟ್ಟದೆಂದು ಅಪ್ರೈಸರ್ ತಿಳಿಸಿದ್ದು, ನಂತರ ಯಶವಂತ ಕುಮಾರ್ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಆತ ಕಡಿಮೆ ಗುಣಮಟ್ಟದ ಚಿನ್ನಾಭರಣಗಳನ್ನು ಸಂಘದಲ್ಲಿ ಅಡವಿಟ್ಟು ಸಾಲ ಪಡೆದು ಸಂಘಕ್ಕೆ ಆರ್ಥಿಕ ನಷ್ಟ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ. ಆರೋಪಿಯೊಂದಿಗೆ ಉಮಾನಾಥ ಶೆಟ್ಟಿ ಎಂಬಾತನು ಶಾಮೀಲು ಇರುವ ಬಗ್ಗೆ ಸಂದೇಹವಿರುವುದಾಗಿ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ (ನಿ), ಕೊಕ್ಕರ್ಣೆ ಶಾಖೆಯ ಶಾಖಾ ವ್ಯವಸ್ಥಾಪಕರಾದ ಸುರೇಖಾ ಕುಮಾರಿ (೩೯) ಇವರು ದೂರು ನೀಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

administrator

Related Articles

Leave a Reply

Your email address will not be published. Required fields are marked *