• February 9, 2026
  • Last Update February 2, 2026 6:06 pm
  • Brahmavara

ಕರಾವಳಿಯಲ್ಲಿ ಎನ್‌ಐಎ ಘಟಕ ಸ್ಥಾಪನೆಯಾಲಿ- ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ

ಕರಾವಳಿಯಲ್ಲಿ ಎನ್‌ಐಎ ಘಟಕ ಸ್ಥಾಪನೆಯಾಲಿ- ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರಿಕೆ ಸುದ್ಧಿ :
ಬ್ರಹ್ಮಾವರ, ಮೇ3:

ಭಾರತದ ಪಶ್ಚಿಮ ಕರಾವಳಿಯು ರಾಷ್ಠವಿರೋಧಿ ಚಟುವಟಿಕೆಗಳ ತಾಣವಾಗುತ್ತಿದ್ದು ಕೇರಳ ಮತ್ತು ಭಟ್ಕಳದಲ್ಲಿ ಈಗಾಗಲೇ ಭಯೋತ್ಪಾದಕರ ದೊಡ್ಡ ಜಾಲವೇ ಪತ್ತೆಯಾಗಿರುತ್ತದೆ. ಮೊನ್ನೆ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಹಿಂದೆಯೂ ಅಂತರಾಷ್ಟ್ರೀಯ ದೇಶದ್ರೋಹಿ ಗುಂಪುಗಳ ಸ್ಲೀಪರ್ ಸೆಲ್‌ಗಳು ಕಾರ್ಯನಿರ್ವಹಿಸಿದೆ ಎನ್ನುವುದು ಬಹುತೇಕ ಖಚಿತವಾಗಿದೆ. ಕರಾವಳಿಯಲ್ಲಿ ನಡೆಯುವ ಎಲ್ಲಾ ಹಿಂದೂ ಕಾರ್ಯಕರ್ತರ ಕೊಲೆಗಳ ಸಂಚನ್ನು ದೇಶದ್ರೋಹಿ ಸಂಘಟನೆಗಳು ಕೇರಳದಿಂದಲೇ ಸಂಚು ರೂಪಿಸುತ್ತಿವೆ. ಆದ್ದರಿಂದ ಕೇಂದ್ರಸರ್ಕಾರ ಪಶ್ಚಿಮ ಕರಾವಳಿ ಅದರಲ್ಲೂ ಮಂಗಳೂರಿನಲ್ಲಿ ಎನ್‌ಐಎ ಘಟಕ ಆರಂಬಿಸಲು ಮುಂದಾಗಲಿ ಎಂದು ಹಿಂದೂ ಕಾರ್ಯಕರ್ತರ ಪರವಾಗಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಗ್ರಸುತ್ತದೆ ಎಂದು ಯುವಮೋರ್ಛಾ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಆಗ್ರಹಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *