• April 12, 2026
  • Last Update April 12, 2026 4:06 pm
  • Brahmavara

ಜನತಾ ಪಿಯು ಕಾಲೇಜ್ ಹೆಮ್ಮಾಡಿ: ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಜನತಾ ಪಿಯು ಕಾಲೇಜ್ ಹೆಮ್ಮಾಡಿ: ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಹೆಮ್ಮಾಡಿ, ಎ ೧೦ : 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶದಲ್ಲಿ ಕುಂದಾಪುರ ಭಾಗದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ರಶ್ಮಿ ಪೈ 598 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿದ್ದಾರೆ. 15 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ರಶ್ಮಿ ಪೈ ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಗಣೇಶ್ ಮೊಗವೀರ ಅಭಿನಂದನೆ ಸಲ್ಲಿಸಿದ್ದಾರೆ. ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಆರಂಭದ ದಿನಗಳಿಂದಲೇ ಉತ್ತಮ ತರಬೇತಿ ನೀಡಿದ ಇಲ್ಲಿನ ಅನುಭವಿ ಉಪನ್ಯಾಸಕ ವೃಂದದವರು ಈ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.


ವಿಜ್ಞಾನ ವಿಭಾಗದಲ್ಲಿ -, ರಶ್ಮಿ ಪೈ 598, ಶ್ರಾವ್ಯ ದೇವಾಡಿಗ 597,ಅಕ್ಷತಾ ವೀರಣ್ಣ 596,ಪ್ರಜ್ಞಾ ಎಸ್ ಪೂಜಾರಿ 594,ಇಂಚರಾ ಅಶೋಕ್ 594,ಮಾನ್ಯ 592,ಪ್ರಸಾದ್ ಪೂಜಾರಿ 591,ಸ್ಮೃತಿಕಾ 590,ಧನ್ಯ ಬಿಲ್ಲವ 590, ವಾಣಿಜ್ಯ ವಿಭಾಗದಲ್ಲಿ ಶಮ್ಯ ಶೆಟ್ಟಿ 597,, ಪ್ರಥಮ ಕಾಂಚನ್ 596, ಸುಚಿತ್ರ 595,ಅನ್ವಿತಾ 594,ಸಾನಿಕಾ 593,ಹಿರನ್ಮಯ್ 592, ಕಲ್ಪಿತಾ 592,ಪ್ರೀತನ್ 591, ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಾಂಶುಪಾಲರಾದ ಗಣೇಶ್ ಮೊಗವೀರರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ ಹೆಚ್ಚಿನ ವಿದ್ಯಾರ್ಥಿಗಳು 10 ನೇ ತರಗತಿಯಲ್ಲಿ ಶೇಕಡಾ 40 ಅಂಕ ಪಡೆದ ವಿದ್ಯಾರ್ಥಿಗಳು ಶೇಕಡಾ 85.90 ಕ್ಕೂ ಹೆಚ್ಚು ಅಂಕಗಳಿಸಿರುವುದು ಜನತಾ ಕಾಲೇಜಿನ ಸಾಧನೆ.

  • ವಿಜ್ಞಾನ ವಿಭಾಗದ ರಶ್ಮಿ ಪೈ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ *
    ಎಸ್.ಎಸ್.ಎಲ್.ಸಿ ತನಕ ಸರಕಾರಿ ಶಾಲೆಯಲ್ಲಿ ಓದಿದ್ದ ರಶ್ಮಿ ಪೈ ಇವರು ಪಿಯುಸಿಯನ್ನು ಹೆಮ್ಮಾಡಿಯ ಜನತಾ ಕಾಲೇಜಿನಲ್ಲಿ ಮುಂದುವರಿಸಿದ್ದರು. ಇದೀಗ ಜಿಲ್ಲೆಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇವರು ರಾಜೇಶ ಪೈ ಮತ್ತು ಪೂಜಾ ಪೈ ದಂಪತಿಯ ಪುತ್ರಿ.
    ಪದವಿ ಪೂರ್ವ ಶಿಕ್ಷಣ ದಲ್ಲಿ ಪ್ರಾಂಶುಪಾಲರ ಮಾರ್ಗದರ್ಶನ ಮತ್ತು ಅನುಭವಿ ಉಪನ್ಯಾಸಕರ ಅರ್ಥಪೂರ್ಣ ಪಾಠ ಪ್ರವಚನ ಜೊತೆಗೆ ಹೆತ್ತವರ ಪ್ರೋತ್ಸಾಹ ನನಗೆ ನನ್ನ ಸಾಧನೆಗೆ ದಾರಿದೀಪವಾಗಿದೆ. ಮುಂದೆ ಉಪನ್ಯಾಸಕಿ ಆಗುವ ಆಸೆ ಇದೆ ಎನ್ನುತ್ತಾಳೆ ರಶ್ಮಿ ಪೈ.
    ವಾಣಿಜ್ಯ ವಿಭಾಗದ ಶಮ್ಯ ಶೆಟ್ಟಿ ರಾಜ್ಯಕ್ಕೆ ೪ನೇ ರ‍್ಯಾಂಕ್
    ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 4ನೇ ರ‍್ಯಾಂಕ್ ಪಡೆದಿರುವ ಶಮ್ಯ ಶೆಟ್ಟಿ ಬಗ್ವಾಡಿ ಮೆತ್ತಿನಮನೆ ಸುಜಾತ ಸುರೇಂದ್ರ ಶೆಟ್ಟಿಯವರ ಮಗಳಾಗಿದ್ದು, ಪಿಯು ಶಿಕ್ಷಣಕ್ಕಾಗಿ ಹೆಮ್ಮಾಡಿಯ ಜನತಾ ಪಿಯು ಕಾಲೇಜನ್ನು ಆಯ್ಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಿದ್ದಾಳೆ. ಪ್ರಾಂಶುಪಾಲರು ಉಪನ್ಯಾಸಕರು, ಹೆತ್ತವರು ತನಗೆ ನೀಡಿದ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ ನನ್ನ ಸಾಧನೆಗೆ ಕಾರಣವಾಗಿದೆ ಎಂದು ಶಮ್ಯ ಶೆಟ್ಟಿ ನುಡಿದಿದ್ದು ತಾನು ಮುಂದೆ ಸಿ. ಎ ಮಾಡುವ ಕನಸ್ಸನ್ನು ಹೊಂದಿದ್ದಾರೆ.
administrator

Related Articles

Leave a Reply

Your email address will not be published. Required fields are marked *

You cannot copy content of this page