• March 26, 2026
  • Last Update March 24, 2026 3:28 pm
  • Brahmavara

ದೆಹಲಿಯಲ್ಲಿ ನಡೆಯುವ ಬ್ರಿಕ್ಸ್ ಸಿಸಿಐ ಹೆಲ್ತ್‌ಕೇರ್ ಶೃಂಗಸಭೆಯ ವಿಶೇಷ ಅತಿಥಿಯಾಗಿ ಡಾ.ರಾಜೇಶ್ ಬಾಯರಿ

ದೆಹಲಿಯಲ್ಲಿ ನಡೆಯುವ ಬ್ರಿಕ್ಸ್ ಸಿಸಿಐ ಹೆಲ್ತ್‌ಕೇರ್ ಶೃಂಗಸಭೆಯ ವಿಶೇಷ ಅತಿಥಿಯಾಗಿ ಡಾ.ರಾಜೇಶ್ ಬಾಯರಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ, ಉಡುಪಿಮಿತ್ರ ಪತ್ರಿಕೆ ಸುದ್ಧಿ :
ನವದೆಹಲಿಯ ಬ್ರಿಕ್ಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ದೆಹಲಿಯ ಹಯಾತ್ ರೀಜೆನ್ಸ್‌ನಲ್ಲಿ ಆಗಸ್ಟ್ ೨೯ ರಂದು ನಡೆಸುವ ಬ್ರಿಕ್ಸ್ ಸಿಸಿಐ ಹೆಲ್ತ್‌ಕೇರ್ ಶೃಂಗಸಭೆಗೆ ಕುಂದಾಪುರ ತಾಲೂಕಿನ ಆಲೂರು ಕಳಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ನಿರ್ದೇಶಕರಾದ ಡಾ. ರಾಜೇಶ್ ಬಾಯರಿಯವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದೆ.


ಬ್ರಿಕ್ಸ್ ಸಿಸಿಐ ಹೆಲ್ತ್‌ಕೇರ್ ತನ್ನ ಮೊದಲ ಬ್ರಿಕ್ಸ್ ಸಿಸಿಐ ಹೆಲ್ತ್‌ಕೇರ್ ಶೃಂಗಸಭೆ ಯನ್ನು “ಸಂಪ್ರದಾಯ ಮತ್ತು ನಾವೀನ್ಯತೆ ಸೇತುವೆ” ಎಂಬ ವಿಷಯದ ಮೇಲೆ ಆಯೋಜಿಸಿದೆ.
ಈ ಶೃಂಗಸಭೆಯಲ್ಲಿ ಃಖIಅS ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಇಲ್ಲಿ ಭಾರತದ ಪ್ರಾಚೀನ ಆರೋಗ್ಯ ಸಂಪ್ರದಾಯಗಳು ಮತ್ತು ಗುಣಪಡಿಸುವ ವ್ಯವಸ್ಥೆಗಳು, ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಸಂಯೋಜಿಸುವುದರ ಕುರಿತು ಹಾಗೂ ಭವಿಷ್ಯಕ್ಕೆ ಬೇಕಾದ ಆರೋಗ್ಯ ರಕ್ಷಣಾ ಪರಿಹಾರಗಳನ್ನು ಉತ್ತೇಜಿಸುವ ಸಂಭಾಷಣೆಗಳು ನಡೆಯಲಿವೆ.
ಸಮಾರಂಭದಲ್ಲಿ ಭಾರತದ ೧೪ ನೇ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್, ದೆಹಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಮಾಜಿ ಸಚಿವೆ ಸ್ಮೃತಿ ಇರಾನಿ, ಮಾಜಿ ವಿದೇಶಾಂಗ ಮತ್ತು ಸಂಸ್ಕೃತಿ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಪರಿಸರ ರಾಜ್ಯ ಸಚಿವೆ ಶ್ರೀ ಅಶ್ವಿನಿ ಕುಮಾರ್ ಚೌಬೆ, ಮತ್ತು ರಷ್ಯಾ, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಆಸ್ಟ್ರೇಲಿಯಾ, ಈಜಿಪ್ಟ್ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶೃಂಗಸಭೆಯಲ್ಲಿ ಪ್ರಮುಖ ಭಾಷಣಗಳು, ಸಂವಾದಗಳು, ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ಸಭೆಗೆ ವಿವಿಧ ವಲಯಗಳ ಪಾಲುದಾರರು, ಆರೋಗ್ಯ ಸಚಿವಾಲಯಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ಔಷಧ ಕಂಪನಿಗಳು ಮತ್ತು ಕ್ಷೇಮ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡಾ.ರಾಜೇಶ್ ಬಾಯರಿ ಯವರು ಆಯುರ್ವೇದ ಚಿಕಿತ್ಸೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅತಿಥಿಯಾಗಿ ಆಯ್ಕೆ ಮಾಡಿರುವುದು ಅವರ ಸಾಧನೆಗೆ ಸಂದ ಗೌರವವಾಗಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page