ಉಡುಪಿಮಿತ್ರ ಪತ್ರಿಕೆ ಸುದ್ದಿ :
ಉಳ್ಳೂರು 11 ಗ್ರಾಮದ ವಾಸಿ ಸ್ವರ್ಣಶಿಲ್ಪಿ ನೀರ್ಕೆರೆ ಕೃಷ್ಣಯ್ಯ ಆಚಾರ್ಯ (79) ಮಣಿಪಾಲದ ಖಾಸಗಿ ಆಸ್ಪತ್ರ್ರೆಯಲ್ಲಿ ಮಾ.28ರಂದು ಬೆಳಿಗ್ಗೆ ನಿಧನರಾದರು. ಮೃತರು, ಪತ್ನಿ, 2 ಗಂಡು , ಮೂವರು ಹೆಣ್ಣುಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿರುತ್ತಾರೆ. ಇವರು ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮಾಜಿ 2ನೇ ಮೊಕ್ತೇಸರರಾಗಿ ಹಾಗೂ ಈ ದೇವಸ್ಥಾನದ ನೀರ್ಕೆರೆ ಮಾಗಣೆಯ ಮಾಗಣೆ ಮೊಕ್ತೇಸರರಾಗಿ ಸುಧೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.




