• March 26, 2026
  • Last Update March 24, 2026 3:28 pm
  • Brahmavara

ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ನೂತನ ಸಭಾಭವನದ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ನೂತನ ಸಭಾಭವನದ ನಿರ್ಮಾಣಕ್ಕೆ ಶಿಲಾನ್ಯಾಸ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನವನ್ನು ಪ್ರವಾಸೋದ್ಯಮವಾಗಿ ಅಭಿವೃದ್ದಿಪಡಿಸುವ ಗುರಿಯನ್ನು ಇರಿಸಿಕೊಂಡಿದ್ದೇವೆ. ಅದಕ್ಕಾಗಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಬಳಿ ಸಭಾಭವನ ನಿರ್ಮಾಣ ಮಾಡಲಿದ್ದೇವೆ, ಸರಕಾರ ಹಾಗೂ ಸಮುದಾಯದವರ ನೆರವಿನಲ್ಲಿ ನೂತನ ಸಭಾ ಭವನ ಹಾಗೂ ೧೦ ಕೋಣೆಗಳನ್ನು ನಿರ್ಮಿಸುವ ಗುರಿ ಆಡಳಿತ ಮಂಡಳಿ ಮುಂದಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ನಾಡೋಜ ಡಾ|ಜಿ.ಶಂಕರ್ ನುಡಿದರು.


ಅವರು ಜೂ.೧೫ ಭಾನುವಾರದಂದು ನೂತನ ದೇವಸ್ಥಾನ ಸಮೀಪ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಆಶಕ್ತರಿಗೆ ಆರ್ಥಿಕವಾಗಿ ಸಹಾಯ ನೀಡಲು, , ದೇವಸ್ಥಾನದ ಗುರಿಕಾರರಿಗೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಈ ಸಭಾಂಗಣದ ಆದಯಾವನ್ನು ಮುಂದೆ ಬಳಸಿಕೊಳ್ಳಲಾಗುವುದು ಎಂದರು.


ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಆನಂದ್ ಸಿ.ಕುಂದರ್, ಬಾರ್ಕೂರು ಮೊಗವೀರ ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಎಸ್. ಅಮೀನ್, ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀಶಂಕರ್ ಸಾಲ್ಯಾನ್, ಉದ್ಯಮಿಗಳಾದ ಶಿವ.ಎಸ್. ಕರ್ಕೇರಾ, ಮೊಗವೀರ ಮಹಾಜನ ಸಂಘ (ರಿ) ತೀರ್ಥಹಳ್ಳಿ ಇದರ ಅಧ್ಯಕ್ಷರಾದ ರಾಘವೇಂದ್ರ ಟಿ.ಎಸ್ ಮತ್ತು ಪದಾಧಿಕಾರಿಗಳು, ಉಳ್ಳಾಲ ಮಾರುತಿ ಜನ ಸೇವಾ ಸಂಘದ ಗೌರವಾಧ್ಯಕ್ಷರಾದ ವರದರಾಜ ಬಂಗೇರ ಹಾಗೂ ಪದಾಧಿಕಾರಿಗಳು, ಮಲ್ಪೆ ಮತ್ಸೋದ್ಯಮಿಗಳಾದ ಶ್ರೀ ಹರಿಯಪ್ಪ ಕೋಟ್ಯಾನ್, ಶ್ರೀ ಸುಧಾಕರ್ ಮೆಂಡನ್, ಇಂಜಿನಿಯರ್‌ಗಳಾದ ಶ್ರೀ ಯೋಗೀಶ್ ಚಂದ್ರಾಧರ್ ಹಾಗೂ ಗುರುಪ್ರಸಾದ್, ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮೊಗವೀರ ಯುವ ಸಂಘಟನೆ (ರಿ) ಉಡುಪಿ, ಇದರ ಪದಾಧಿಕಾರಿಗಳು, ಬಾರ್ಕೂರು ಮೊಗವೀರ ಸಯುಕ್ತ ಸಭಾದ ಪದಾಧಿಕಾರಿಗಳು, ಬೆಣ್ಣೆಕುದ್ರು ಗ್ರಾಮ ಸಭಾ, ಯುವಕ ಸಂಘ ಹಾಗೂ ಮಹಿಳಾ ಸಂಘದ ಸರ್ವ ಪದಾಧಿಕಾರಿಗಳು, ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page