• April 10, 2026
  • Last Update April 9, 2026 4:52 pm
  • Brahmavara

ಬ್ರಹ್ಮಾವರದಲ್ಲಿ ಸ್ಕೂಟರ್ ಡಿಕ್ಕಿಯಿಂದ ರೂ.83,800 ಕಳವು

ಬ್ರಹ್ಮಾವರದಲ್ಲಿ ಸ್ಕೂಟರ್ ಡಿಕ್ಕಿಯಿಂದ ರೂ.83,800 ಕಳವು

ಉಡುಪಿ ಮಿತ್ರ ಪತ್ರಿಕೆ ಸುದ್ದಿ :

ಬ್ರಹ್ಮಾವರ, ಫೆ.13: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಂದಾಡಿ ಗ್ರಾಮದಲ್ಲಿ ಕಳ್ಳತನ ಘಟನೆ ವರದಿಯಾಗಿದೆ.

ದಿನಾಂಕ 13.02.2026ರಂದು ರಾತ್ರಿ 7.15 ಗಂಟೆಯಿಂದ 8.30 ಗಂಟೆಯ ಮಧ್ಯೆ, ಬ್ರಹ್ಮಾವರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ಫಿರ್ಯಾದಿದಾರರು ನಿಲ್ಲಿಸಿದ್ದ ಸ್ಕೂಟರ್‌ನ ಸೀಟನ್ನು ಯಾರೋ ಕಳ್ಳರು ತೆರೆಯಾಗಿ, ಸೀಟಿನ ಕೆಳಭಾಗದ ಡಿಕ್ಕಿಯಲ್ಲಿ ಇಟ್ಟಿದ್ದ ಬ್ಯಾಗ್‌ನಲ್ಲಿದ್ದ ರೂ.83,800 ನಗದು ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಬಾರಕೂರು ಅಂಚೆಯ ಕಚ್ಚೂರು ನಿವಾಸಿ ಸತೀಶ್ ಮೈಂದನ್ (45), ತಂದೆ ಮುತ್ತ ಸಾಲ್ಯಾನ್ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page