• February 9, 2026
  • Last Update February 2, 2026 6:06 pm
  • Brahmavara

ಬ್ರಹ್ಮಾವರದಲ್ಲಿ 5 ದಿನಗಳ ಕಾಲ ಬ್ರಹ್ಮಾವರ ಉತ್ಸವ

ಬ್ರಹ್ಮಾವರದಲ್ಲಿ 5 ದಿನಗಳ ಕಾಲ ಬ್ರಹ್ಮಾವರ ಉತ್ಸವ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ :ಇಲ್ಲಿನ ಗಾಂಧಿ ಮೈದಾನದಲ್ಲಿ ಎಸ್.ಡಿ.ಎಂ.ಸಿ ಸಮನ್ವಯ ಕೇಂದ್ರ ವೇದಿಕೆ ಬ್ರಹ್ಮಾವರ ತಾಲ್ಲೂಕು ಘಟಕ, ಬ್ರಹ್ಮಾವರದ ಎಕ್ತಾ ಇವೆಂಟ್ಸ್, ನವಕಿರಣ್ ನವತಾರೆ ಸೇವಾ ವೇದಿಕೆ, ಬ್ರಹ್ಮಾವರ ರೋಟರ್ಯಾಕ್ಟ್ ಕ್ಲಬ್ ಮತ್ತು ಎ.ಜಿ ಇವೆಂಟ್ಸ್ ಸಹಯೋಗದಲ್ಲಿ ಇದೇ ಡಿ. 10 ರಿಂದ 14 ರವರೆಗೆ ಬೆಳಿಗ್ಗೆ ಗಂಟೆ 10 ರಿಂದ ರಾತ್ರಿ 10ರ ವರೆಗೆ ಬ್ರಹ್ಮಾವರ ಉತ್ಸವ ನಡೆಯಲಿದೆ ಎಂದು ಸಂಘಟಕ ಆಲ್ವಿನ್ ಅಂದ್ರಾದೆ ತಿಳಿಸಿದರು.


ಪಾಂಡೇಶ್ವರದ ಕೋಸ್ಟಲ್ ಪ್ರಾರಾಡೈಸ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ಅವರು ತಿಳಿಸಿದರು.
ಆಹಾರ ಮೇಳ, ಮತ್ಸ್ಯ ಮೇಳ, ಸಸ್ಯ ಮೇಳ, ಸೀರೆ ಮೇಳ, ಕೃಷಿ ಮೇಳ, ಮನೋರಂಜನೆಯ ಆಟ, ಅಲಂಕಾರಿಕಾ ಮೀನು ಮತ್ತು ಪಕ್ಷಿಗಳ ಪ್ರದರ್ಶನ, ಆರ್ಯುವೇದ ಮತ್ತು ಸ್ವದೇಶಿ ಉತ್ಪನ್ನಗಳ ಮಳಿಗೆಗಳು ಗುಡಿ ಕೈಗಾರಿಕಾ ಮಳಿಗೆಗಳು, ಪ್ರಾತ್ಯಕ್ಷಿಕೆ ಹೀಗೆ ೧೫೦ ಕ್ಕೂ ಹೆಚ್ಚು ಮಳಿಗೆಗಳು ಈ ಉತ್ಸವದಲ್ಲಿ ಪಾಲ್ಗೊಂಡು ಪ್ರದರ್ಶನ ಮತ್ತು ಮಾರಾಟ ನಡೆಸಲಿದೆ.ಗೃಹ ಉತ್ಪನ್ನಗಳು, ವಿವಿಧ ಉತ್ಪನ್ನಗಳು, ಎತ್ತಿನ ಗಾಣ, ಮಕ್ಕಳಿಗಾಗಿ ಎಮ್ಯೂಸ್‌ಮೆಂಟ್ ಪಾರ್ಕ್ ಬರಲಿದೆ. ಉತ್ತರ ಪ್ರದೇಶ, ತಮಿಳುನಾಡು, ಕೇರಳವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಮಳಿಗೆಗಳು ಪಾಲ್ಗೊಳ್ಳುತ್ತಿವೆ, ಮಡಿಕೆ ತಯಾರಿ, ಎತ್ತಿನ ಗಾಣದಿಂದ ಕಬ್ಬಿನರಸ ತೆಗೆಯುವ ಪ್ರಾತ್ಯಕ್ಷಿಕೆ ಉತ್ಸವದಲ್ಲಿರಲಿದೆ. ಇದಲ್ಲದೇ ಬೆಲ್ಲದ ಉತ್ಪನ್ನಗಳ ಮಳಿಗೆ ಈ ಬಾರಿಯ ಉತ್ಸವದಲ್ಲಿ ಎಲ್ಲರ ಗಮನ ಸೆಳೆಯಲಿದೆ ಎಂದು ಅವರು ತಿಳಿಸಿದರು.
ಉಮೇಶ ಪೂಜಾರಿಯವರು ಮಾತನಾಡಿ ೧೨೦ಕ್ಕೂ ಅಧಿಕ ಸ್ಟಾಲ್‌ಗಳು ನೊಂದಾವಣೆಗೊಂಡಿದೆ. ಇನ್ನು ಕೂಡ ಮತ್ತಷ್ಟು ಸ್ಟಾಲ್‌ಗಳು ಬರಲಿವೆ. ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಭಾಗದ ಸ್ಟಾಲ್‌ಗಳು ಕೂಡ ಇಲ್ಲಿಗೆ ಆಗಮಿಸಲಿವೆಎಂದರು.
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಈ ಉತ್ಸವ ಆಯೋಜಿಸಿದ್ದು, ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಜನಪದ ಗೀತೆ, ನೃತ್ಯ, ದೇಶಭಕ್ತಿ ಗೀತೆ ಮತ್ತು ನೃತ್ಯ, ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದರು.
ಗೋಷ್ಟಿಯಲ್ಲಿ ಖಲೀಲ್ ಕೆರಾಡಿ, ಗಣೇಶ ಶೆಟ್ಟಿ, ವಿಠಲ ಪೂಜಾರಿ ಇದ್ದರು.

administrator

Related Articles

Leave a Reply

Your email address will not be published. Required fields are marked *