ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಎ.೦೨.: ಬ್ರಹ್ಮಾವರದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಧ್ವಜಮರದವನ್ನು ಎಪ್ರಿಲ್ -02ರಂದು ತೈಲಾಧಿವಾಸಕ್ಕೆ ಹಾಕಲಾಯಿತು.
ಕಳೆದ ಒಂದು ವರ್ಷದ ಹಿಂದೆ ಧ್ವಜ ಮರವನ್ನು ಸುಳ್ಯದಿಂದ ತಂದು ಮಹಾಲಿಂಗೇಶ್ವರ ದೇವಳದ ಕೆರೆಯಲ್ಲಿ ಜಲಾಧಿವಾಸಕ್ಕೆ ಹಾಕಲಾಗಿದ್ದು ನಂತರ ಕಳೆದ ಅಗಸ್ಟ್‌ನಲ್ಲಿ ಮೇಲಕ್ಕೆ ತೆಗೆದು ಕೆತ್ತನೆ ಕೆಲಸ ಮುಗಿಸಲಾಗಿತ್ತು. ತೈಲಾಧಿವಾಸಕ್ಕೆ ಸಿಮೆಂಟ್ ಇಟ್ಟಿಗೆ ಬಳಸಿ ಧ್ವಜಮರದ ಉದ್ದಕ್ಕೆ ಅನುಗುಣವಾಗಿ ಕಟ್ಟೆಯನ್ನು ಕಟ್ಟಿದ್ದು ಇಂದು ಬೆಳಿಗ್ಗೆ ಕ್ರೇನ್ ಬಳಸಿಕೊಂಡು ಧ್ವಜಮರವನ್ನು ತೈಲಾಧಿವಾಸದ ಕಟ್ಟೆಯೊಳಗೆ ಇಳಿಸಲಾಯಿತು. ಈ ಸಂದರ್ಭ ಭಾಗವಹಿಸಿದ್ದ ನೂರಾರು ಮಂದಿ ಭಕ್ತರು ಎಳ್ಳಣ್ಣೆಯನ್ನು ಧ್ವಜ ಮರಕ್ಕೆ

ಸುರಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಅನಂತ ಪದ್ಮನಾಭ ವಾರಂಬಳ್ಳಿ, ಅಶೋಕ್ ಭಟ್ ಚಾಂತಾರು, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಶೆಟ್ಟಿ ಮಟಪಾಡಿ ಹಾಗೂ ಸೂರ್ಯನಾರಾಯಣ ಗಾಣಿಗ ಮಟಪಾಡಿ,

ಕಂದಾಯ ಇಲಾಖಾ ಆರ್.ಐ. ರಾಜು, ವ್ಯವಸ್ಥಾಪನಾ ಸಮಿತಿಯ ಪದ್ಮನಾಭ ಕಾಂಚನ್, ವಿಜಯ ನಾಯರಿ ನಿಡಂಪಳ್ಳಿ, ಚಂದ್ರಶೇಖರ ದೇವಾಡಿಗ, ಚಂದ್ರಶೇಖರ ನಾಯ್ಕ್, ಉಮೇಶ್ ಪೂಜಾರಿ, ಇಂದಿರಾವತಿ ವಾರಂಬಳ್ಳಿ, ಸರಸ್ವತಿ ನಾಯ್ಕ್, ಹೋಟೆಲ್ ಆಶ್ರಯ ಮಾಲಕ ರಾಜಾರಾಮ ಶೆಟ್ಟಿ, ದಯಾನಂದ ಶೆಟ್ಟಿ ಹಾರಾಡಿ, ಭಾಸ್ಕರ ಶೆಟ್ಟಿ ಚಾಂತಾರು, ಭಾಸ್ಕರ ಶೆಟ್ಟಿ ಚಾಂತಾರು ಡಾ.ಶೇಖರ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ ಕಲ್ಕೂರ, ನಿವೃತ್ತ ಆರ್.ಐ. ಲಕ್ಷ್ಮೀನಾರಾಯಣ ಭಟ್, ರವಿರಾಜ್ ಶೆಟ್ಟಿ ಕಾಪು, ಮೋಹನದಾಸ್ ಪೈ ಬ್ರಹ್ಮಾವರ, ಶ್ರೀಮತಿ ಸ್ನೇಹಾ ಪಿ.ರೈ, ಬಾಲಕೃಷ್ಣ ಶೆಟ್ಟಿ ಗುಡೇಬೆಟ್ಟು, ಸಂಜನಾ ರೈ ಹಿರಿಯಡಕ,ಬ್ರಹ್ಮಾವರ ಅಭಿವೃದ್ಧಿ ಸಮಿತಿಯ ಪ್ರತೀತ್ ಹೆಗ್ಡೆ, ಶ್ರೀ ರಾಮ್ ಪ್ಲಾಜಾ ಮಾಲಕ ರಾಮಕೃಷ್ಣ ಶೆಟ್ಟಿ, ಅರ್ಚಕ ಅನಂತ ಪದ್ಮನಾಭ ಭಟ್, ಮಹಾಲಿಂಗೇಶ್ವರ ಗೆಳೆಯರ ಬಳಗದ ಪದಾಧಿಕಾರಿಗಳು,, ಗ್ರಾಮ ಸಮಿತಿಯ ಅಧ್ಯಕ್ಷರುಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಭಕ್ತಾಧಿಗಳು ಭಾಗವಹಿಸಿದ್ದರು.







