• April 10, 2026
  • Last Update April 9, 2026 4:52 pm
  • Brahmavara

ಮಟಪಾಡಿ ನಂದಿಕೇಶ್ವರ ಯಕ್ಷಗಾನ ಕಲಾ ಸಂಘದ ವಜ್ರ ಮಹೋತ್ಸವ

ಮಟಪಾಡಿ ನಂದಿಕೇಶ್ವರ ಯಕ್ಷಗಾನ ಕಲಾ ಸಂಘದ ವಜ್ರ ಮಹೋತ್ಸವ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ ;

ಬ್ರಹ್ಮಾವರ, ಫೆ.22:
ಸನಾತನ ಸಂಸ್ಕೃತಿ ಉಳಿಸುವ ಕೆಲಸ ಯಕ್ಷಗಾನದಿಂದ ಆಗುತ್ತಿದೆ. ಆದ್ದರಿಂದ ಯಕ್ಷಗಾನ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಜವಾಬ್ದಾರಿಯಾಗಬೇಕು ಎಂದು ಉಡುಪಿಯ ಶಾಸಕ ಶ್ರಿ ಯಶಪಾಲ್ ಸುವರ್ಣ ನುಡಿದರು. ಅವರು ಫೆ.೨೨ ರಂದು ಮಟಪಾಡಿಯ ದಿ.ಗುರು ವೀರಭದ್ರ ನಾಯಕ್ ವೇದಿಕೆಯಲ್ಲಿ ಮಟಪಾಡಿಯ ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ (ರಿ.)ಇದರ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ( ರಿ.) ಎಂ.ಚಂದ್ರಶೇಖರ ಕಲ್ಕೂರ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಕಲೆ ಹಾಗೂ ಕ್ರೀಡೆಯಲ್ಲಿ ಜಾತಿ, ಮತ, ಮೇಲು, ಜೀಳು ಎಂಬ ಭಾವನೆಗಳಿರುವುದಿಲ್ಲ. ಆದ್ದರಿಂದ ಕಲೆ ಹಾಗೂ ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕೆಂದರು.


ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಹೈದರಬಾದ್ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮಟಪಾಡಿ ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ ಶೆಟ್ಟಿ, ಮುದ್ದು ಜತ್ತನ್ ಮಟಪಾಡಿ, ಬ್ರಹ್ಮಾವರ ರೋಟರಿ ರೋಯಲ್ ಅಧ್ಯಕ್ಷ ಚಂದ್ರಶೇಖರ ನಾಯರಿ, ಉದ್ಯಮಿ ಆಂಡ್ರೋ ಡಿಸಿಲ್ವ ಹಂದಾಡಿ, ಡಾ.ಬಾಲಕೃಷ್ಣ ಶೆಟ್ಟಿ ಕುಂಜಾಲು, ಉದ್ಯಮಿ ವಿಶ್ವನಾಥ ಶೆಟ್ಟಿ ಮಟಪಾಡಿ, ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ ಗಾಣಿಗ, ಸಂತೋಷ್ ಲೂವಿಸ್ ಮಟಪಾಡಿ, ಗಿರೀಶ್ಚಂದ್ ಆಚಾರ್ಯ, ಯಕ್ಷಗಾನ ತರಬೇತುದಾರ ಪ್ರತೀಶ್ ಕುಮಾರ್ ಮಟಪಾಡಿ, ಕಲಾಮಂಡಳಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ರಾಘವೇಂದ್ರ ಗಾಣಿಗ, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಮುದ್ದು ಜತ್ತನ್ ಮಟಪಾಡಿ ಉಪಸ್ಥಿತರಿದ್ದರು.


ಕಲಾಸೇವಾರತ್ನ ಪ್ರಶಸ್ತಿ ಯೊಂದಿಗೆ ಎಂ.ಚಂದ್ರಶೇಖರ ಕಲ್ಕೂರರವರನ್ನು ಸನ್ಮಾನಿಸ ಲಾಯಿತು.
ಎಸ್.ವಿ.ಉದಯಕುಮಾರ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಶಾಂತಾರಾಮ ಆಚಾರ್ ರವರಿಗೆ ವಜ್ರಮಹೋತ್ಸವ ಪ್ರಶಸ್ತಿ, ಮಂದಾರ್ತಿ ರಘು ಮಡಿವಾಳರಿಗೆ ದಿ.ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ಪ್ರಶಸ್ತಿ ಹಾಗೂ ಮೊಳಹಳ್ಳಿ ದಿ.ವೇದಮೂರ್ತಿ ಮಟಪಾಡಿ ಶ್ರೀನಿವಾಸ ಕಲ್ಕೂರ ಸ್ಮಾರಕ ಪ್ರಶಸ್ತಿ ಪ್ರದಾನಿಸಲಾಯಿತು.


ವಿಜಯ ನಾಯರ್, ಈಶ್ವರ ಪೂಜಾರಿ ಹಾಗೂ ಶರೋನ್ ಸಿಕ್ವೆರ ಸನ್ಮಾನ ಪತ್ರಗಳನ್ನು ವಾಚಿಸಿದರು. ದಿನೇಶ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹೇಂದ್ರ ಆಚಾರ್ಯ ಸ್ವಾಗತಿಸಿದರು. ಸನತ್ ಆಚಾರ್ಯ ಪ್ರಾರ್ಥಿಸಿದರು. ಸುದೀಂದ್ರ ಹಂದೆ ನಿರೂಪಿಸಿದರು

administrator

Related Articles

Leave a Reply

Your email address will not be published. Required fields are marked *

You cannot copy content of this page