ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :
ಚಿತ್ತೂರು, ಮಾ.15 : ಮಾರ್ಚ್ 19 ರಂದು ಮಾರಣಕಟ್ಟೆಯಲ್ಲಿ ನಡೆಯುವ ಮಾರಣಕಟ್ಟೆ ಮಂಜರ ಮನೆಯ ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಎಲ್ಲರನ್ನೂ ಸ್ವಾಗತಿಸಿ ಹೊರಕಾಣಿಕೆಗೆ ಚಾಲನೆ ನೀಡಿದರು. ಈ ಸಂದರ್ಭ ಡಾ. ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಉದಯ ಕುಮಾರ ಶೆಟ್ಟಿ ಅಡಿಕೆಕೊಡ್ಲು, ಸಿ.ಎ ಬ್ಯಾಂಕ್ ಅಧ್ಯಕ್ಷ ಸಬ್ಲಾಡಿ ಮಂಜಯ್ಯ ಶೆಟ್ಟಿ, ಬಾಳಿಕೆರೆ ಶರತ್ ಶೆಟ್ಟಿ, ನ್ಯಾಯವಾದಿ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ವಿ.ಕೆ.ಶಿವರಾಮ ಶೆಟ್ಟಿ ವಂಡ್ಸೆ, ಬಾಳೆ ಮನೆ ಗಣಪಯ್ಯ ಶೆಟ್ಟಿ, ಕೆರಾಡಿ ನಾಗಪ್ಪ ಕೊಠಾರಿ, ನ್ಯಾಯವಾದಿ ಕುಸುಮಾಕರ ಶೆಟ್ಟಿ ಚಿತ್ತೂರು, ದಿನಕರ ಶೆಟ್ಟಿ ಬಸ್ರೂರು, ರವೀಂದ್ರ ಶೆಟ್ಟಿ ಚಿತ್ತೂರು, ದಿವಾಕರ ಆಚಾರ್ಯ ಮಾರಣಕಟ್ಟೆ, ರಘುರಾಮ ಶೆಟ್ಟಿ ಊರ್ ಬೈಲು, ಕರುಣಾಕರ ಶೆಟ್ಟಿ ಹೆಟ್ನಾಬೈಲು, ಆನಂದಶೆಟ್ಟಿ ಕಟ್ ಬೆಲ್ತೂರು, ನಾಗರಾಜ ಶೆಟ್ಟಿ ಹೊಸೂರು, ಶಶಿಧರ ಶೆಟ್ಟಿ ವಂಡ್ಸೆ, ಲಕ್ಷ್ಮೀನಾರಾಯಣ ಹೆಬ್ಬಾರ್ ಮಾಣಿಕೊಳಲು, ಮಂಜು ಕೊಠಾರಿ ಕೆರಾಡಿ, ನಾರಾಯಣ ಮಂಜ ಮಾರಣಕಟ್ಟೆ, ರಾಮಚಂದ್ರ ಮಂಜ ಮಾರಣಕಟ್ಟೆ, ವಿಘ್ನೇಶ್ವರ ಮಂಜ ಮಾರಣಕಟ್ಟೆ, ಗಣೇಶ್ ಉಡುಪ ಮಾರಣಕಟ್ಟೆ, ಸಬ್ಲಾಡಿ ನಾರಾಯಣ ಶೆಟ್ಟಿ, ಉದಯ ಜಿ.ಪೂಜಾರಿ, ಪ್ರದೀಪ್ ಚಂದ್ರ ಶೆಟ್ಟಿ ಚಿತ್ತೂರು, ಶ್ರೀನಿವಾಸ ಪೂಜಾರಿ ಕಲ್ಮಾಡಿ, ಸುರೇಶ್ ಪೂಜಾರಿ ಅಂಬಿಕಾ ಚಿತ್ತೂರು, ರವಿ ಶೆಟ್ಟಿ ಆಲೂರು, ಚಂದ್ರಶೇಖರ್ ಬೀಜಾಡಿ, ಗುಂಡು ಪೂಜಾರಿ ಹರವರಿ, ಚಂದ್ರಶೇಖರ ಶೆಟ್ಟಿ ಕೊಳೂರು, ಮಂಜು ದೇವಾಡಿಗ ಸುಳ್ಸೆ, ನರಸಿಂಹ ಗಾಣಿಗ ಹರೆಗೋಡು, ಕೃಷ್ಣ ಗಾಣಿಗ ಹರೆಗೋಡು, ಸೀತಾರಾಮ ಶೆಟ್ಟಿ ಕಟ್ ಬೆಲ್ತೂರು, ವಿವಿಧ ಗ್ರಾಮ ಪಂಚಾಯತ್ ಗಳ ಮಾಜಿ ಸದಸ್ಯರು, ಬೀಜಾಡಿ ಮಿತ್ರವೃಂದದ ಸದಸ್ಯರು, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ವೃಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮೇಶ್ ಶೆಟ್ಟಿ ಮತ್ತು ಯೋಜನೆಯ ವಿವಿಧ ಪದಾಧಿಕಾರಿಗಳು, ವಿವಿಧ ಸ್ವ ಸಹಾಯ ಸಂಘಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸದಸ್ಯರು, ಹೊರೆಕಾಣಿಕೆ ಸಮಿತಿ ಪದಾಧಿಕಾರಿಗಳು, ನಾಗಮಂಡಲೋತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಹೊರೆಕಾಣಿಕೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತಾದಿಗಳನ್ನು ಎಂ.ಎಸ್. ಶ್ರೀಧರ ಮಂಜ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹಾಗೂ ಎಂ.ಎಸ್. ನಾಗರಾಜ ಮಂಜ ಸಹೋದರರು ಸ್ವಾಗತಿಸಿಕೊಂಡು ಶಾಲು ಹಾಗೂ ಕೃತಜ್ಞತಾ ಪತ್ರದೊಂದಿಗೆ ಗೌರವಿಸಿದರು.






