ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಸಾಲಿಗ್ರಾಮ, ಫೆ.೨೭ : ರೋಟರಿ ಕ್ಲಬ್ ಕೋಟ – ಸಾಲಿಗ್ರಾಮ, ಲಯನ್ಸ್ ಕ್ಲಬ್ ಕೋಟ-ಗಿಳಿಯಾರು, ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ, ದಿ| ಪದ್ದು ಆಚಾರ್ ಸ್ಮರಣಾರ್ಥ ಆಯುಷ್ಮಾನ್ ಆರೋಗ್ಯ ಕೇಂದ್ರ ಬನ್ನಾಡಿ ಹಾಗೂ ಶ್ರೀ ದೇವಿ ಜ್ಯುವೆಲ್ಲರ‍್ಸ್ ಕೋಟ ಇವರ ಸಹಯೋಗದೊಂದಿಗೆ ದಿ| ಬನ್ನಾಡಿ ಪದ್ದು ಆಚಾರ್ ೧೯ನೇ ಸಂಸ್ಮರಣಾ ಸಮಾರಂಭ ಮಾರ್ಚ್-೧ ರಂದು ನಡೆಯಲಿದೆ ಎಂದು ಕೋಟ ಶ್ರೀದೇವಿ ಜುವೆಲ್ಲರ್ಸ್ ಮಾಲಕ ಸೀತಾರಾಮ ಆಚಾರ್ ತಿಳಿಸಿದರು. ಅವರು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು

ಭಾನುವಾರ ಅಪರಾಹ್ನ ಗಂಟೆ ೨.೦೦ರಿಮದ ಬನ್ನಾಡಿಯ ಮಂಜುನಾಥ ನಿಲಯದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭವನ್ನು ವಿಶ್ರ್ರಾಂತ ನ್ಯಾಯಮೂರ್ತಿ ಕರ್ನಾಟಕ ಲೋಕಾಯುಕ್ತ ಶ್ರೀ ಸಂತೋಷ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕೋಟ ಸಾಲಿಗ್ರಾಮ ಇದರ ಅಧ್ಯಕ್ಷ ಯೋಗೀಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ೨೦೨೬ -೨೭ ನಿಯೋಜಿತ ರೋಟರಿ ಗವರ್ನರ್ ಬಿ.ಎಂ.ಭಟ್, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಇದರ ಪ್ರವರ್ತಕ ಆನಂದ ಸಿ.ಕುಂದರ್ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಫೆವರೆಟ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಶಂಕರ್ ಹೆಗ್ಡೆ, ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಉಮಾ, ನ್ಯಾಯವಾದಿ ಶ್ಯಾಮ ಸುಂದರ ನಾಯಿರಿ, ಕೋಟ-ಗಿಳಿಯಾರು ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ.
ಬಹುಮಾನ ವಿತರಣೆಯ ಸಮಾರೋಪ ಸಮಾರಂಭ ಸಂಜೆ ೪:೩೦ಕ್ಕೆ ನಡೆಯಲಿದ್ದು ಬನ್ನಾಡಿ ವಡ್ದರ್ಸೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೋಟ-ಸಾಲಿಗ್ರಾಮ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ನಮಿತಾ ನರಸಿಂಹ ಪ್ರಭು, ಕರ್ನಾಟಕ ಬ್ಯಾಂಕ್ ಹಿರಿಯ ಪ್ರಬಂಧಕ ಗಣೇರ್ಶ ವಿ.ಹೊಳ್ಳ, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಸುವರ್ಣ, ಕೋಟ -ಸಾಲಿಗ್ರಾಮ ಶ್ರೀ ವೀರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು, ಕುಂದಾಪುರ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ್ ಶೇಟ್, ವಡ್ಡರ್ಸೆ ಗ್ರಾಮ ಪಂಚಾಯತ್ ಪಿಡಿಓ ಜಯರಾಮ್ ಶೆಟ್ಟಿ, ವಿಕಲಚೇತನರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ ಎಂ. ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಉಪನ್ಯಾಸಕ ಸಂಜೀವ ಗುಂಡ್ಮಿ ಉಪಸ್ಥಿತರಿದ್ದರು.



