• February 13, 2026
  • Last Update February 13, 2026 3:25 pm
  • Brahmavara

ಮಾರ್ಚ್19ರಂದು ಮಾರಣಕಟ್ಟೆಯಲ್ಲಿ ನಾಗಮಂಡಲ ; ಪೂರ್ವಭಾವಿ ಸಭೆ

ಮಾರ್ಚ್19ರಂದು ಮಾರಣಕಟ್ಟೆಯಲ್ಲಿ ನಾಗಮಂಡಲ ; ಪೂರ್ವಭಾವಿ ಸಭೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ ;
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಚಿತ್ತೂರು, ಫೆ.೬: ಮಾರಣಕಟ್ಟೆಯಲ್ಲಿ ನಾವು ನಡೆಸಲಿಚ್ಚಿಸುವ ನಾಗ ಮಂಡಲ ಕೇವಲ ಮಂಜರ ಕುಟುಂಬವಲ್ಲದೆ ಸಮಸ್ತ ಊರಿನವರಿಗೂ ಒಳಿತಾಗಬೇಕೆಂಬ ಸಂಕಲ್ಪದಲ್ಲಿ ಹಮ್ಮಿಕೊಂಡಿದ್ದೇವೆ. ಜನರ ಬೆಂಬಲದಿಂದ ಮಾತ್ರ ಇದನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ ಎಂದು ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ನುಡಿದರು. ಅವರು ಮಾರಣಕಟ್ಟೆಯ ಅವರ ಮನೆ ಅನುಗ್ರಹ ವಠಾರದಲ್ಲಿ ಮಾರ್ಚ್ ೧೯ರಂದು ನಡೆಯುವ ನಾಗಮಂಡಲದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಶ್ರದ್ಧೆ ಭಕ್ತಿಯಿಂದ ನಾವು ಮಾಡುವ ಸೇವೆ ಹಾಗೂ ದೇವರಿಗೆ ನೀಡುವ ಕೊಡುಗೆಗಳಿಂದ ಭಗವಂತ ಸಂತುಷ್ಟಗೊಳ್ಳಲಿದ್ದಾನೆ. ಕೇವಲ ಧನ ಬಲದಿಂದ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಜನಬಲದಿಂದ ಎಲ್ಲವನ್ನು ಸಾಧಿಸಬಹುದು. ಊರಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವೆಲ್ಲರೂ ಭಾಗಿಯಾಗಬೇಕು ಎಂಬ ಭಾವನೆಯಲ್ಲಿ ಊರಿನವರು, ಸ್ವಯಂ ಸೇವಕರು ಸಹಕಾರ ನೀಡಿದರೆ ಈ ನಾಗ ಮಂಡಲ ಸಂಪೂರ್ಣ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.


ವನದುರ್ಗಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಂಡಬಳ್ಳಿ ಜಯರಾಮ ಶೆಟ್ಟಿ ಮಾತನಾಡಿ ಸಹಾಯ ಯಾಚಿಸಿ ಯಾರೇ ಬಂದರೂ ಕೃಷ್ಣಮೂರ್ತಿ ಮಂಜರು ಸಹಯಾ ಹಸ್ತ ಚಾಚಿದವರು. ಅವರ ಮನೆಯಲ್ಲಿ ಮಾರ್ಚ್ ೧೯ರಂದು ನಡೆಯುವ ನಾಗ ಮಂಡಲದಲ್ಲಿ ೨೫ ಸಾವಿರ ಜನರು ಭಾಗವಹಿಸಬೇಕೆಂಬ ಗುರಿ ಇರಿಸಿಕೊಂಡಿದ್ದಾರೆ. ನಾಗದೇವರ ಅನುಗ್ರಹ ಹಾಗೂ ಯಶಸ್ಸಿಗಾಗಿ ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕೆಂದರು.
ವೇದಿಕೆಯಲ್ಲಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀಧರ ಮಂಜ ಹಾಗೂ ನಾಗರಾಜ ಮಂಜ ಸಹೋದರರು ಉಪಸ್ಥಿತರಿದ್ದರು.
ಸಭೆಯಲ್ಲಿ ನಾಗ ಮಂಡಲದ ಯಶಸ್ಸಿಗೆ ವಿವಿಧ ಸಮಿತಿಗಳ ಜವಾಬ್ದಾರಿ ಹಂಚಿಕೆ ಕುರಿತು ಚರ್ಚಿಸಲಾಯಿತು.


ಸಭೆಯಲ್ಲಿ ವಿವಿಧ ಸಮಿತಿಯ ಡಾ. ಅತುಲ್‌ಕುಮಾರ್ ಶೆಟ್ಟಿ ಚಿತ್ತೂರು, ಹರ್ಕೂರು ಮಂಜಯ್ಯ ಶೆಟ್ಟಿ, ಕಿರಣ್ ಕುಮಾರ್ ಶೆಟ್ಟಿ ಅಂಪಾರು, ಉದಯಕುಮಾರ್ ಶೆಟ್ಟಿ ಅಡಿಕೆ ಕೊಡ್ಲು, ಉದಯ ಜಿ.ಪೂಜಾರಿ, ರವೀಂದ್ರ ಶೆಟ್ಟಿ ಚಿತ್ತೂರು, ಪ್ರಭಾಕರ ಶೆಟ್ಟಿ ಜಡ್ಕಲ್, ರಘುರಾಮ ಶೆಟ್ಟಿ ಊರ್‌ಬೈಲ್, ರವೀಂದ್ರನಾಥ ಶೆಟ್ಟಿ ಇಡೂರು, ಮಂಜು ಕೊಠಾರಿ ಕೆರಾಡಿ, ವೆಂಕಟೇಶ್ ಶೆಟ್ಟಿ ತೆಂಕೊಡಿಗೆ, ನಾಗರಾಜ ಶೆಟ್ಟಿ ಮೇಲ್‌ಹೊಸೂರು, ವಿ.ಕೆ.ಶಿವರಾಮ ಶೆಟ್ಟಿ ವಂಡ್ಸೆ, ಕರುಣಾಕರ ಶೆಟ್ಟಿ ಹೆಟ್ನಾಬೈಲು, ಶಶಿಧರ ಶೆಟ್ಟಿ ವಂಡ್ಸೆ, ಬಾಲಕೃಷ್ಣ ಶೆಟ್ಟಿ ಇಡೂರು ಇನ್ನಿತರ ಪ್ರಮುಖರು ಭಾಗವಹಿಸಿದ್ದರು.
ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಘ್ನೇಶ್ವರ ಮಂಜ ವಂದಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *