• April 9, 2026
  • Last Update April 9, 2026 4:52 pm
  • Brahmavara

ಮುನಿಯಾಲು ಗೋಧಾಮದಲ್ಲಿ ಶ್ರೀಮನ್ನಾಗಮಂಡಲಕ್ಕೆ ಚಾಲನೆ.

ಮುನಿಯಾಲು ಗೋಧಾಮದಲ್ಲಿ ಶ್ರೀಮನ್ನಾಗಮಂಡಲಕ್ಕೆ ಚಾಲನೆ.

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ದಿ

ಮುನಿಯಾಲು, ಫೆ.೧೭ : ಮುನಿಯಾಲಿನ ಗೋಧಾಮದಲ್ಲಿ ಫೆ.೨೧ರ ವರೆಗೆ ನಡೆಯುವ ನಾಗಮಂಡಲಕ್ಕೆ ಫೆ.19ರಂದು ಪೂರ್ವಾಹ್ನ 8.30ರಿಂದ ಚಾಲನೆ ದೊರೆಯಿತು.

ಮುನಿಯಾಲು ಸಂಜೀವಿನಿ ಗೋಧಾಮದ ಮಾಲಕ ಡಾ. ಜಿ ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ಸಹಿತ ಋತ್ವಿಜರನ್ನು ಸ್ವಾಗತಿಸಿದರು. ನಂತರ ಫಲನ್ಯಾಸ – ಪ್ರಾರ್ಥನೆ, ಆದ್ಯಶುದ್ಧಿ-ಪುಣ್ಯಾಹ, ಮಾತೃಕಾಪೂಜನಮ್, ನಾಂದೀಸಮಾರಾಧನಮ್, ಸಪ್ತರ್ಷಿಪೂಜನಮ್, ಅರಣಿಮಥನ, ಬ್ರಹ್ಮಕೂರ್ಚಹೋಮ, ೬ ಕಾಯಿ ಗಣಯಾಗ, ನವಗ್ರಹಯಾಗ, ಕಂಕಣ ಬಂಧನ, ಶ್ರೀಮದ್ ಭಾಗವತ ಪಾರಾಣಾರಂಭ, ಅನ್ನಾರಾದನಾ ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತ್ರತ್ವದಲ್ಲಿ ವಾಸುದೇವ ಭಟ್ ಅವರ ಸಹಯೋಗದಲ್ಲಿ ನಡೆಯಿತು.

ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್, ಸವಿತಾ ಆರ್ ಆಚಾರ್, ಅನುಷಾ ಆಚಾರ್, ಪ್ರಜ್ವಲ್, ಆಚಾರ್, ಪೂಜಾ ಆಚಾರ್, ತೇಜಸ್ ಆಚಾರ್, ರಕ್ಷತ್ ಆಚಾರ್ ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ಎನ್.ಆರ್.ದಾಮೋದರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಆಮೀನ್, ಜ್ಯೋತಿ ಹರೀಶ್, ನಾಗಪ್ಪಯ್ಯ ಆಚಾರ್ಯ ಗುಜ್ಜಾಡಿ, ಪ್ರಮುಖರಾದ ಡಾ.ಹರೀಶ ಆಚಾರ್ಯ ಜಲಕದಕಟ್ಟೆ ಮಂಗಳೂರು, ಉಪೇಂದ್ರ ಆಚಾರ್ಯ ಪೆರ್ಡೂರು, ಡಾ.ಕೆ.ಸುದರ್ಶನ್ ಹೆಬ್ಬಾರ್ ಮುನಿಯಾಲು, ಗೋಪಿನಾಥ ಭಟ್ ಮುನಿಯಾಲು, ಬೆಳುವಾಯಿ ಸೀತಾರಾಮ ಆಚಾರ್ಯ, ಸಮಿತಿಯ ಸದಸ್ಯರು,ಪದಾಧಿಕಾರಿಗಳು, ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page