• February 9, 2026
  • Last Update February 2, 2026 6:06 pm
  • Brahmavara

ಮೊಬೈಲ್ ಮಾದಕ ದ್ರವ್ಯದಂತಾಗಿದೆ – ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ

ಮೊಬೈಲ್ ಮಾದಕ ದ್ರವ್ಯದಂತಾಗಿದೆ – ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ

ಉಡುಪಿ ಮಿತ್ರ ಪತ್ರಿಕೆ ವರದಿ :
ಚಿತ್ತೂರು ಡಿ.22:
ಮಕ್ಕಳ ಪಾಲಿಗೆ ಇಂದು ಮೊಬೈಲ್ ಮಾದಕ ದ್ರವ್ಯದಂತಾಗಿದೆ. ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ. ಪೋಷಕರು ಮಕ್ಕಳಿಗೆ ಮೊಬೈಲ್‌ನಿಂದ ದೂರ ಇರುವಂತೆ ತಿಳಿ ಹೇಳಬೇಕು. ಶಿಕ್ಷಕರು ಶಾಲಾ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ದೈಹಿಕ ವ್ಯಾಯಾಮಕ್ಕೆ ಪ್ರೇರೇಪಿಸಬೇಕೆಂದು ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ನುಡಿದರು. ಅವರು ಕಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಗಳಿಗೆ ದಾನಿಗಳ ನೆರವಿನಿಂದ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ. ಖಾಸಗಿ ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸೌಲಭ್ಯಗಳಿದ್ದರೂ ಮಕ್ಕಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರಕಾರಿ ಶಾಲೆಗಳ ಉಳಿವಿಗೆ ಹೆಚ್ಚಿನ ಒತ್ತು ನೀಡಬೇಕೆಂದು ನುಡಿದರು. ಅಧ್ಯಕ್ಷತೆಯನ್ನು ಆಲೂರು ಗ್ರಾಮ ಪಂಚಾಯತ್ ಅಧ್ಯಕ್ಷ
ರಾಜೇಶ್ ಎನ್.ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಲೂರು ಹರ್ಕೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ಹರ್ಕೂರು, ವಿಜಯ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಪ್ರಭಾಕರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವೀಂದ್ರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ಬೆಂಗಳೂರಿನ ಉದ್ಯಮಿ ರಮಿತ್ ಬಿ.ಶೆಟ್ಟಿ ಹರವರಿ, ಉಡುಪಿಯ ಅಭಿವೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಇದರ ಅಧ್ಯಕ್ಷ ಪ್ರಭಾಕರ ಗಾಣಿಗ ಹರವರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಉದಯ ಜಿ.ಪೂಜಾರಿ, ರವೀಂದ್ರನಾಥ ಶೆಟ್ಟಿ ಕಳಿ ಕೆರೆಕೊಡ್ಲು, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗಂಗೆ ಶೆಡ್ತಿ ಹೊಸ್ಮುಂದ, ಶ್ರೀಮತಿ ಶ್ರೀಮತಿ ಪೂಜಾರಿ, ಶ್ರೀಮತಿ ಆಶಾ ಸಂತೋಷ ಪೂಜಾರಿ, ಕಳಿ ಚಂದ್ರಯ್ಯ ಆಚಾರ್ಯ, ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುಂಡು ಪೂಜಾರಿ ಹರವರಿ, ಎಲ್‌ಕೆ.ಜಿ, ಯುಕೆಜಿ ನಿರ್ವಹಣಾ ಸಮಿತಿ ಅಧ್ಯಕ್ಷ ಡಾ|ರಾಜೇಶ್ ಬಾಯರಿ (ಚಿತ್ರಕೂಟ ಆಯುರ್ವೇದ ಆಸ್ಪತ್ರೆ, ಕಳಿ), ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಶ್ರೀಲತಾ ಶೆಟ್ಟಿ, ವಿದ್ಯಾರ್ಥಿ ನಾಯಕಿ ಕು.ಅಶ್ಮಿತಾ ಉಪಸ್ಥಿತರಿದ್ದರು. ಉದ್ಯಮಿ ಸತಿಶ್ ಕುಮಾರ್ ಶೆಟ್ಟಿ ವನಸಿರಿ, ಕಳಿ ಸ್ವಸ್ತಿ ವಾಚನ ನೆರವೇರಿಸಿದರು.
ಸ್ಪರ್ಧಾ ವಿಜೇತ ಮಕ್ಕಳ ವಿವರವನ್ನು ಶ್ರೀಮತಿ ಪೂಜಾರಿ ಹಾಗೂ ಶ್ರೀಮತಿ ಪೂಜಾ ಸಂತೋಷ್ ವಾಚಿಸಿದರು. ಶಾಲಾ ಸಹಶಿಕ್ಷಕ ಶಂಕರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀ ಉದಯ ವರದಿ ವಾಚಿಸಿದರು. ಶಿಕ್ಷಕರಾದ ರವೀಂದ್ರ ಶೆಟ್ಟಿ ಹಾಗೂ ಶಿಕ್ಷಕ ಉದಯಕುಮಾರ್ ಶೆಟ್ಟಿ ಆಲೂರು ಕಾರ್ಯಕ್ರಮ ನಿರೂಪಿಸಿದರು.

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

administrator

Related Articles

Leave a Reply

Your email address will not be published. Required fields are marked *