• February 9, 2026
  • Last Update February 2, 2026 6:06 pm
  • Brahmavara

ಶಾಸ್ತ್ರ ಸಹಿತ ಶಿಲ್ಪ ತರಬೇತಿ ಕೇಂದ್ರ ಆರಂಭಿಸುವ ಗುರಿ ಇದೆ – ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ, ಪಡುಕುತ್ಯಾರಿನಲ್ಲಿ ಜಗದ್ಗುರುಗಳ ಜನ್ಮ ವರ್ಧಂತ್ಯುತ್ಸವ

ಶಾಸ್ತ್ರ ಸಹಿತ ಶಿಲ್ಪ ತರಬೇತಿ ಕೇಂದ್ರ ಆರಂಭಿಸುವ ಗುರಿ ಇದೆ – ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ,         ಪಡುಕುತ್ಯಾರಿನಲ್ಲಿ ಜಗದ್ಗುರುಗಳ ಜನ್ಮ ವರ್ಧಂತ್ಯುತ್ಸವ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ

ಉಡುಪಿ ಜು. ೨೨ : ವೈದಿಕ ಮತ್ತು ಶಿಲ್ಪವನ್ನು ಜೊತೆಯಲ್ಲಿ ಕೊಂಡು ಹೋಗುವ ಸಮಾಜ ಇದ್ದರೆ ಅದು ವಿಶ್ವಕರ್ಮ ಸಮಾಜ ಮಾತ್ರ. ವಿಶ್ವಕರ್ಮ ಸಮಾಜದವರು ಧಾರ್ಮಿಕ ತಳಹದಿಯ ಮೇಲೆ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಸಮಾಜದಲ್ಲಿ ಭರವಸೆ ಹೆಚ್ಚುತ್ತಿರುವುದಕ್ಜೆ ಸಂತಸ ತಂದಿದೆ ಎಂದು ಕಟಪಾಡಿ ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ಚನದಲ್ಲಿ ನುಡಿದರು.


ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಜು.22ರಂದು ನಡೆದ ಗುರುಪಾದುಕಾಪೂಜೆ ನಂತರ ನಡೆದ ಧರ್ಮ ಸಂಸತ್ತಿನಲ್ಲಿ ಆಶೀರ್ವಚನ ನೀಡಿದರು.
೨೧ ವರ್ಷದಲ್ಲಿ ಮಠ ಎಷ್ಟು ಬೆಳೆಯಬೇಕಿತ್ತೋ ಅಷ್ಟು ಎತ್ತರಕ್ಕೆ ಬೆಳೆದಿದೆ. ಶಾಸ್ತ್ರ ಸಹಿತ ಶಿಲ್ಪ ಕಲಿಸುವ ಗುರಿ ಇರಿಸಿಕೊಂಡಿದ್ದು ಪಂಚಶಿಲ್ಪದಲ್ಲಿ ಎತ್ತರದ ಸಾಧನೆ ಮಾಡಬೇಕೆಂಬ ಉದ್ದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸುವ ಗುರಿ ಇದೆ ಎಂದರು.


ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಠದಲ್ಲಿ ಪಂಚಶಿಲ್ಪ ಶಾಲೆಯನ್ನು ತೆರೆಯುವ ಪ್ರಯತ್ನ ನಡೆಯುತ್ತಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ ದ್ವಾದಶ ರಾಶಿ ಪೂಜೆ, ಮಾತೃವಂದನಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಎಲ್ಲರೂ ಭಾಗವಹಿಸಬೇಕು. ಮಠದಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಈ ಅಭಿವೃದ್ಧಿ ಕೆಲಸದಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.


ಯುವ ಸಾಧಕರಿಗೆ ಗೌರವಾರ್ಪಣೆ ಭಾಗವಾಗಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವ ದಾಖಲೆಯ ವಿದ್ವಾನ್ ಶ್ರೀ ಎಂ.ಜಿ ಯಶವಂತ ಶರ್ಮ ಮೂಡಬಿದರೆ ಹಾಗೂ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡ ಶ್ರೀ ಸಾಗರ್ ಆಚಾರ್ಯ ಬೈಲೂರು ಕಾರ್ಕಳ ಅವರನ್ನು ಅಭಿನಂದಿಸಲಾಯಿತು. ಹಿನ್ನೆಲೆ ಕಲಾವಿದರಾದ ಶ್ರೀಮತಿ ವರ್ಷಾ ಆದರ್ಶ ಆಚಾರ್ಯ ಮೂಡುಬಿದಿರೆ(ವೇಣುವಾದಕಿ ), ಶ್ರೀ ಪ್ರಜ್ವಲ್ ಆಚಾರ್ಯ ಉಡುಪಿ (ತಬಲಾ ವಾದಕ)ಇವರನ್ನು ಇದೇ ವೇಳೆ ಅಭಿನಂದಿಸಲಾಯಿತು. ವಿದ್ವಾನ್ ಮೌನೇಶ ಶರ್ಮಾ, ವಿದ್ವಾನ್ ಪಂಚಮ ಶರ್ಮಾ ಅಭಿನಂದನಾ ಪತ್ರ ವಾಚಿಸಿದರು.
ವಿಶ್ವನಾಥ ಆಚಾರ್ಯ ಆಡಳಿತ ನಿರ್ದೇಶಕರು ಅಕ್ಷಯಾ ಜ್ಯುವೆಲ್ಲರ್ಸ್ ದೋಹಾ ಕತಾರ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.


ಆಸ್ಥಾನ ವಿದ್ವಾಂಸರಾದ ಅಂತರಾಷ್ಟ್ರೀಯ ಜೋತಿಷ್ಯ ವಿದ್ವಾನ್ ಉಮೇಶ ಆಚಾರ್ಯ ಪಡೀಲು, ಬ್ರಹ್ಮಶ್ರೀ ಶ್ರೀಧರ ಶರ್ಮಾ ಕಟಪಾಡಿ, ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ ಸಾಲಿಗ್ರಾಮ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ (ರಿ) (ಅಸೆಟ್) ಅಧ್ಯಕ್ಷ ಬಿ.ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಪಡುಕುತ್ಯಾರು ಇದರ ಅಧ್ಯಕ್ಷ ಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು, ಆನೆಗುಂದಿ ಶ್ರೀ ಸರಸ್ವತೀ ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ (ರಿ) ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಲಕ್ಷ್ಮಣ ಆಚಾರ್ಯ, ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದ ಅಧ್ಯಕ್ಷ ವಿದ್ವಾನ್ ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು, ಕಾಳಿಕಾಂಬಾ ದೇವಾಲಯಗಳ ಆಡಳಿತ ಮೊಕ್ತೇಸರರಾದ ಮುರಹರಿ ಆಚಾರ್ಯ ಕಟಪಾಡಿ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಬಾಲಕೃಷ್ಣ ಆಚಾರ್ಯ ಮೂಡಬಿದ್ರೆ , ಗಜಾನನ ಎನ್. ಆಚಾರ್ಯ ಭಟ್ಕಳ, ವೆಂಕಟ್ರಮಣ ಆಚಾರ್ಯ ಉಳುವಾರು ಬಂಗ್ರಮಂಜೇಶ್ವರ, ಜನಾರ್ದನ ಆಚಾರ್ಯ ಆರಿಕ್ಕಾಡಿ ಕುಂಬಳೆ, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು ಮಧೂರು, ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಬಿ.ಯೋಗೀಶ್ ಆಚಾರ್ಯ ಬೆಂಗಳೂರು, ನಾಲ್ಕೂರು ಪಂಜುರ್ಲಿ ದೈವಸ್ಥಾನ ಪಡುಪಣಂಬೂರು ಇದರ ಅಧ್ಯಕ್ಷ ಜಗದೀಶ್ ಆಚಾರ್ಯ, ಆನೆಗುಂದಿ ಪ್ರತಿಷ್ಠಾದ ಉಪಾಧ್ಯಕ್ಷ ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು ಉಡುಪಿ, ಲೋಲಾಕ್ಷ ಶರ್ಮಾ ಪಡುಕುತ್ಯಾರು ಇವರು ಉಪಸ್ಥಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.


ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್, ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು. ನ್ಯಾಯವಾದಿ ಕೆ.ಎಂ ಗಂಗಾಧರ ಕೊಂಡೆವೂರು ಹಾಗೂ ಶ್ರೀಮತಿ ಗೀತಾ ಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

administrator

Related Articles

Leave a Reply

Your email address will not be published. Required fields are marked *