• February 9, 2026
  • Last Update February 2, 2026 6:06 pm
  • Brahmavara

ಶ್ರೀನಿವಾಸ ಕಲ್ಯಾಣೋತ್ಸವ ; ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಆನಂದ ಸಿ.ಕುಂದರ್ ಸಿದ್ದತೆ ಪರಿಶೀಲನೆ

ಶ್ರೀನಿವಾಸ ಕಲ್ಯಾಣೋತ್ಸವ ; ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಆನಂದ ಸಿ.ಕುಂದರ್ ಸಿದ್ದತೆ ಪರಿಶೀಲನೆ

ಉಡುಪಿಮಿತ್ರ ಪತ್ರಿಕೆ ಸುದ್ದಿ:
ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‌ನಲ್ಲಿ ಎ.೧ರಿಂದ ಎ.೩ರ ರಾತ್ರಿ ತನಕ ಲೋಕಕಲ್ಯಾಣಾರ್ಥ ನಡೆಯುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಈಗಾಗಲೆ ಸಕಲ ಸಿದ್ದತೆ ನಡೆದಿದ್ದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ.ಕುಂದರ್ ಮಾ.೨೯ರಂದು ಸಂಜೆ ಭೇಟಿ ನೀಡಿ ಸಿದ್ದತೆಯನ್ನು ಪರಿಶೀಲಿಸಿದರು.ಮಹಾದ್ವಾರ, ವೇದಿಕೆ, ಅಡುಗೆ ಸಿದ್ದತೆಗೆ ಭೋಜನಾಲಯ, ಹೊರೆ ಕಾಣಿಕೆ ಸಂಗ್ರಹಕ್ಕೆ ಉಗ್ರಾಣ ಪರಿಶೀಲಿಸಿದರು. ಈ ಸಂದರ್ಭ ಸಾರ್ವಜನಿಕ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಎಮ್.ಸಿ.ಚಂದ್ರಶೇಖರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ, ಧಾರ್ಮಿಕ ಕಾರ್ಯಕ್ರಮಗಳ ಮಾರ್ಗದರ್ಶಕ ವಿದ್ವಾನ್ ಡಾ||ವಿಜಯ ಮಂಜರ್, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಉಪಾಧ್ಯಕ್ಷ ಸುಬ್ರಾಯ ಆಚಾರ್ ಮಣೂರು, ಕೋಶಾಧಿಕಾರಿ ಸತ್ಯನಾರಾಯಣ ಚಡಗ ಸಾಸ್ತಾನ, ನಿವೃತ್ತ ಮುಖ್ಯ ಶಿಕ್ಷಕ ಗಣೇಶ ಜಿ., ಶಿವರಾಮ ಉಡುಪ ಸಾಲಿಗ್ರಾಮ, ಶ್ರೀಮತಿ ಸುಲತ ಹೆಗ್ಡೆ ಗುಂಡ್ಮಿ, ಶ್ರೀಮತಿ ಲೀಲಾವತಿ ಗಂಗಾಧರ ಪಾಂಡೇಶ್ವರ, ನಾಗರಾಜ ಗಾಣಿಗ ಸಾಲಿಗ್ರಾಮ, ಬಾಲಕೃಷ್ಣ ಪೂಜಾರಿ ಐರೋಡಿ, ರವೀಂದ್ರ ತಿಂಗಳಾಯ ಇನ್ನಿತರರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *