ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಕುಂದಾಪುರ, ಸೆ.2೦: ಶ್ರೀ ಕಾಳಿಕಾಂಬಾ ವಿವಿದೋದ್ಧೇಶ ಪ್ರಾಥಮಿಕ ಸಹಕಾರಿ ಸಂಘ (ರಿ.) ತಲ್ಲೂರು ಇದರ 2024-25ನೇ ವಾರ್ಷಿಕ ಮಹಾಸಭೆ ಕುಂದಾಪುರ ಸೂರ್ನಳ್ಳಿ ರಸ್ತೆಯಲ್ಲಿರುವ ವಿಶ್ವಬ್ರಾಹ್ಮಣ ಸಮಾಜಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರ ಹೋಬಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 16ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು 2024-25 ನೇ ವರದಿ ವರ್ಷದಲ್ಲಿ ರೂ14,06,609.00 ನಿವ್ವಳ ಲಾಭ ಗಳಿಸಿದೆ. ಸಂಘವು ತಲ್ಲೂರು, ಕುಂದಾಪುರ ಹಾಗೂ ಕುಂಭಾಶಿಯಲ್ಲಿ ಶಾಖೆಗಳನ್ನು ಹೊಂದಿ ವ್ಯವಹಾರ ಮಾಡುತ್ತಿದ್ದು ಮತ್ತೆ ಎರಡು ಶಾಖೆಗಳನ್ನು ತೆರೆಯುವ ಗುರಿ ಇರಿಸಿಕೊಂಡಿದೆ. ಸದಸ್ಯರಿಗೆ ಈ ಬಾರಿ ಶೇ12 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರಮೇಶ್ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಘದ ಅಭಿವೃದ್ಧಿಗೆ ಸದಸ್ಯರು ಹೆಚ್ಚೆಚ್ಚು ವ್ಯವಹಾರವನ್ನು ನಡೆಸಬೇಕು ಎಂದು ಕೋರಿಕೊಂಡರು.
ಮಾಜಿ ನಿರ್ದೇಶಕ ಚಿತ್ತೂರು ಪ್ರಭಾಕರ ಆಚಾರ್ಯ ಹಾಗೂ ಹಾಲಿ ನಿರ್ದೇಶಕ ತ್ರಾಸಿ ಸುಧಾಕರ ಆಚಾರ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಿರ್ದೇಶಕರಾದ ಸಿ.ನಾರಾಯಣ ಆಚಾರ್ಯ, ಕೋಣಿ ನಾರಾಯಣ ಆಚಾರ್ಯ, ರಾಮಚಂದ್ರ ಆಚಾರ್ಯ ದೊಳಬೆ, ರಾಮಚಂದ್ರ ಆಚಾರ್ಯ ನೀರ್ಕೆರೆ, ಗಂಗಾಧರ ಆಚಾರ್ಯ ಆಲೂರು, ಪ್ರೇಮಾ ಸಿ.ಆಚಾರ್ಯ ಬಸ್ರೂರು, ಶಾರದಾ ಆಚಾರ್ಯ ಬಂಟ್ವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಮುಖ್ಯ ಕಾರ್ಯನಿರ್ವಹಣಾಕಾರಿ ದಿವಾಕರ ಆಚಾರ್ಯ ಮೂಡ್ಲಕಟ್ಟೆ ೨೦೨೪-೨೫ನೇ ಸಾಲಿನ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಕುಂದಾಪುರ ಶಾಖೆಯ ಶಾಖಾ ವ್ಯವಸ್ಥಾಪಕ ಯಶೋಧರ ಆಚಾರ್ಯ ಸ್ವಾಗತಿಸಿದರು. ಸಿಬ್ಬಂದಿ ಗಣೇಶ್ ಆಚಾರ್ಯ ಮೂಡುಬಗೆ ವಂದಿಸಿದರು ಕುಂಭಾಶಿ ಶಾಖೆಯ ಶಾಖಾ ವ್ಯವಸ್ಥಾಪಕ ಮಂಜುನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.



