• March 26, 2026
  • Last Update March 24, 2026 3:28 pm
  • Brahmavara

ನವಕಿರಣ ನವತಾರೆ ಸೇವಾ ವೇದಿಕೆಯಿಂದ ಸನ್ಮಾನ

ನವಕಿರಣ ನವತಾರೆ ಸೇವಾ ವೇದಿಕೆಯಿಂದ ಸನ್ಮಾನ

ಉಡುಪಿಮಿತ್ರ ಪತ್ರಿಕೆ ಸುದ್ಧಿ : ಬ್ರಹ್ಮಾವರ, ಸೆ.೧೨: ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಹಾಗೂ ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಭರತನಾಟ್ಯ ಕಲಾವಿದೆ ದೀಕ್ಷಾ ಬ್ರಹ್ಮಾವರ ಇವರನ್ನು ನವಕಿರಣ ನವತಾರೆ ಸೇವಾ ವೇದಿಕೆ ವತಿಯಿಂದ ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.


ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಾಡಿ ನಿತ್ಯಾನಂದ ಶೆಟ್ಟಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಚಾಂತಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ನವತಾರೆ ಸೇವಾ ವೇದಿಕೆ ಅಧ್ಯಕ್ಷೆ ಕುಸುಮಾ ಮನೋಜ್, ಕಾರ್ಯದರ್ಶಿ ಶ್ರೀಮತಿ ನೈನಾ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಹೇಮಲತಾ ನಾಯಕ್, ಶಿಕ್ಷಕಿ ಶ್ರೀಮತಿ ಗೀತಾ, ಶಿಕ್ಷಕಿ ಶ್ರೀಮತಿ ಜ್ಯೋತಿ, ರಾಹುಲ್ ಶೆಟ್ಟಿ ಅಗ್ರಹಾರ ಉಪಸ್ಥಿತರಿದ್ದರು.


ವ್ಯವಸ್ಥಾಪನಾ ಸಮಿತಿ ಸದಸ್ಯ ಉಮೇಶ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನವತಾರೆ ನವಕಿರಣ ಸೆವಾ ವೇದಿಕೆಯ ಮಾಜಿ ಉಪಾಧ್ಯಕ್ಷ ಉದಯಕುಮಾರ್ (ನಾಗ ಇಲೆಕ್ಟ್ರಿಕಲ್ಸ್) ಇವರು ನಿರೂಪಿಸಿ ವಂದಿಸಿದರು. ಸಾಸ್ತಾನದ ಬ್ರಹ್ಮಬೈದರ್ಕಳ ಭಜನಾ ತಂಡದ ಸದಸ್ಯರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page