• February 15, 2026
  • Last Update February 15, 2026 1:29 pm
  • Brahmavara

ಮಾರಣಕಟ್ಟೆ ನಾಗಮಂಡಲ ಚಪ್ಪರ ಮಹೂರ್ತ

ಮಾರಣಕಟ್ಟೆ ನಾಗಮಂಡಲ ಚಪ್ಪರ ಮಹೂರ್ತ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ದಿ :

ವಂಡ್ಸೆ,ಫೆ.15 : ಮಾರಣಕಟ್ಟೆ ಎಮ್.ಎಸ್. ಶ್ರೀಧರ ಮಂಜ ಮತ್ತು ಸಹೋದರರು ಮಾರ್ಚ್ ೧೯ರಂದು ನಡೆಸಲುದ್ದೇಶಿಸಿದ ಚತುಃಪವಿತ್ರ ನಾಗ ಮಂಡಲದ ಪೂರ್ವಭಾವಿಯಾಗಿ ಫೆ.15ರಂದು ಮಂಜರ ಮನೆಯ ಅನುಗ್ರಹ ವಠಾರದಲ್ಲಿ ಚಪ್ಪರ ಮಹೂರ್ತ ಹಾಗೂ ಗಣಹೋಮ ನಡೆಯಿತು. ಈ ಸಂದರ್ಭ ಮಾತನಾಡಿದ ಸೇವಾಕರ್ತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ ನಾಗಮಂಡಲದ ಪೂರ್ವಭಾವಿಯಾಗಿ ಇಂದು ಗಣಹೋಮ ಹಾಗೂ ಚಪ್ಪರ ಮಹೂರ್ತ ನೆರವೇರಿಸಿದ್ದೇವೆ. ಮಾರ್ಚ್ ೪ರಂದು ಉಗ್ರಾಣ ಮಹೂರ್ತ ನಡೆಯಲಿದ್ದು ಮಾರ್ಚ್ 19ರಂದು ನಾಗ ಮಂಡಲ ನಡೆಯಲಿದೆ. ಅಂದು ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನ ಅನ್ನಸಂತರ್ಪಣೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 4.೦೦ಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಆಶೀರ್ವಚನ, ಸಂಜೆ 7.೦೦ಕ್ಕೆ ಹಾಲ್ಹಿಟ್ಟು ಸೇವೆ, ರಾತ್ರಿ 9.೦೦ರಿಂದ ಮಂಡಲ ಸೇವೆ ನಡೆಯಲಿದ್ದು ಈ ಕಾರ್ಯಕ್ರಮದ ಯಶಸ್ಸಿಗೆ ಊರಿನವರು ಸಹಕಾರ ನೀಡಬೇಕೆಂದು ನುಡಿದರು.


ಚಪ್ಪರ ಮಹೂರ್ತ ಸಂದರ್ಭ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ಮಾರಣಕಟ್ಟೆ ಕ್ಷೇತ್ರದ ಅರ್ಚಕರು ಹಾಗೂ ಸೇವಾಕರ್ತರಾದ ಎಂ.ಎಸ್.ಶ್ರೀಧರ ಮಂಜ, ಎಂ.ಎಸ್.ನಾಗರಾಜ ಊರಿನ ಪ್ರಮುಖರಾದ ಡಾ.ಅತುಲ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ನ್ಯಾಯವಾದಿ ಕೆರೆಕೊಡ್ಲು ಕುಸುಮಾಕರ ಶೆಟ್ಟಿ, ನಿವೃತ್ತ ಶಿಕ್ಷಕ ಶಶಿಧರ ಶೆಟ್ಟಿ ಮಾರಣಕಟ್ಟೆ, ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಚಿತ್ತೂರು ಸೀತಾರಾಮ

ಪೂಜಾರಿ, ನಿವೃತ್ತ ಶಿಕ್ಷಕ ನಾರಾಯಣ ಶೆಟ್ಟಿ, ಶಿಕ್ಷಕ ರವಿರಾಜ್ ಶೆಟ್ಟಿ, ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಆಚಾರ್ಯ, ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ಧನ ಜೋಗಿ, ನಿವೃತ್ತ ಶಿಕ್ಷಕ ಚಂದ್ರ ಶೆಟ್ಟಿ, ಗುತ್ತಿಗೆದಾರ ಸೀತಾರಾಮ ಮಡಿವಾಳ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಲೆಕ್ಕಿಗ ನಾರಾಯಣ ಶೆಟ್ಟಿ, ಚಿತ್ತುರು ಆನಂದ ಹಾರ್ಡ್‌ವೇರ್ ಮಾಲಕ ಅನಿಲ್‌ಕುಮಾರ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಶೆಟ್ಟಿ, ಮಂಜರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಪುರೋಹಿತರಾದ ನೆಂಪು ನರಸಿಂಹ ಭಟ್ ಹಾಗೂ ಹರವರಿ ದಿನಕರ ಉಡುಪರವರು ಪೂಜಾ ವಿಧಿ ನೆರವೇರಿಸಿದರು.

administrator

Related Articles

Leave a Reply

Your email address will not be published. Required fields are marked *