• July 6, 2025
  • Last Update July 5, 2025 6:26 pm
  • Brahmavara

ಕಾಂಗ್ರೆಸ್ ನಾಯಕರು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕಾಂಗ್ರೆಸ್ ನಾಯಕರು ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:

ಕುಂದಾಪುರ, ಜು.೫: ಕಾಂಗ್ರೆಸ್‌ನ ಸತ್ಯದರ್ಶನ ಸಭೆಂiಲ್ಲಿ ವೈಯಕ್ತಿಕ ಟೀಕೆ ಮಾಡಿದ ಕಾಂಗ್ರೆಸ್ ನಾಯಕರ ಕ್ರಮ ಸರಿಯಲ್ಲ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ನುಡಿದರು.
ಅವರು ಕುಂದಾಪುರ ಹೋಟೆಲ್ ಶರೋನ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾದರು.
ರಾಜ್ಯ ಬಿಜೆಪಿ ಸೂಚನೆಯಂತೆ ಬಿಜೆಪಿ ವತಿಯಿಂದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಅರ್ಜಿಗಳನ್ನು ಸಮಿತಿಯ ಗಮನಕ್ಕೆ ತಾರದೆ ತಿರಸ್ಕಾರ ಮಾಡಿದ್ದು ಸರಿಯಲ್ಲ. ಗ್ರಾಮ ಪಂಚಾಯತ್‌ಗೆ ಇದ್ದ ಫಾರ್ಮ್ 9 &11 ಮಾಡಿಸುವ ಅಧಿಕಾರವನ್ನು ೨೯.೦೮.೨೦೨೪ರಿಂದ ಕಾಂಗ್ರೆಸ್ ಸರಕಾರ ನಗರ ಪ್ರಾಧಿಕಾರಕ್ಕೆ ನೀಡಿದ್ದು ಸರಿಯಲ್ಲ, ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಸುಮಾರು 200ರಿಂದ 300 ಜನರ ವೃದ್ಧಾಪ್ಯವೇತನ, ಸಂದ್ಯಾ ಸುರಕ್ಷಾ ಫಲಾನುಭವಿಗಳನ್ನು ತಿರಸ್ಕೃತ ಮಾಡಲು ಕಂದಾಯ ಇಲಾಖೆಯ ಮೂಲಕ ಸಿದ್ದತೆ ನಡೆಸಿದ್ದು ಸರಿಯಲ್ಲ, ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರ ಬಸವ ವಸತಿ ಯೋಜನೆಯಲ್ಲಿ ಒಂದೇ ಒಂದು ಮನೆಯನ್ನು ಮಂಜೂರು ಮಾಡಿಲ್ಲ ಎಂಬ ಈ ೫ ಅಂಶಗಳನ್ನು ಇರಿಸಿಕೊಂಡು ಬಿಜೆಪಿ ಪ್ರತಿಭಟನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದವರು ಸತ್ಯದರ್ಶನ ಸಪ್ತಾಹವನ್ನು ಮಾಡುತ್ತಾ ಇದ್ದಾರೆ. ಅದು ಅವರ ಪಕ್ಷದ ಕಾರ್ಯಕ್ರಮ. ಅವರು ಮಾಡಲಿ, ಆದರೆ ಅವರು ಸತ್ಯದರ್ಶನ ಸಪ್ತಾಹ ಕಾರ್ಯಕ್ರಮದಲ್ಲಿ ನಮ್ಮ ಮೇಲೆ ವೈಯಕ್ತಿಕ ಟೀಕೆಯನ್ನು ಮಾಡುತ್ತಾ ಇದ್ದಾರೆ. ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದರು.


ಶಾಸಕರು ಅಮಾಸೆಬೈಲಿಲ್ಲಿ ಗೇರು ಲೀಸ್‌ನಲ್ಲಿ ೨೫ ಎಕ್ರೆ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಗೇರು ಲೀಸ್ ಅನ್ನುವಂತಹದ್ದು ೫೦-೬೦ ವರ್ಷಗಳಿಂದ ಬಂದಂತಹ ವ್ಯವಸ್ಥೆ. ಸರಕಾರ ಗೈಡೆನ್ಸ್ ವ್ಯಾಲ್ಯೂ ಸ್ವೀಕರಿಸಿ ಕಾನೂನು ಬದ್ಧವಾಗಿ ಮಂಜೂರು ಮಾಡುತ್ತದೆ. ಆದರೆ ನಾನಾಗಲಿ ನನ್ನ ತಂದೆಯವರಾಗಲಿ, ನನ್ನ ಸಹೋದರರಾಗಲಿ ನಾವು ಈ ತನಕ ಸರಕಾರದಿಂದ ಯಾವುದೇ ಗೇರು ಲೀಸ್ ಪಡೆದಿಲ್ಲ ಎಂಬುದನ್ನು ಆರೋಪಿಸಿದವರ ಗಮನಕ್ಕೆ ತರುತ್ತೇನೆ ಎಂದರು.
ಅಕ್ರಮ ಸಕ್ರಮದಲ್ಲಿ ನಾನು ಅಧ್ಯಕ್ಷನಾದರೂ ನನ್ನೊಂದಿಗೆ ೩ ಮಂದಿ ಕಾಂಗ್ರೆಸ್ ಸರಕಾರ ನೇಮಕ ಮಾಡಿದ ಕಾಂಗ್ರೆಸ್ ಸದಸ್ಯರಿದ್ದಾರೆ. ಅದರಲ್ಲೂ ಪ್ರಭಾವಿ ಸದಸ್ಯರಾದ ಕೆದೂರು ಸದಾನಂದ ಶೆಟ್ಟಿಯವರಿದ್ದಾರೆ. ಸದಾನಂದ ಶೆಟ್ಟರು ಹಿಂದೆ ಸದಸರಾಗಿದ್ದವರು. ಹಿಂದೆ ಯಾವ ರೀತಿ ಕ್ರಮ ಇದೆಯೋ ಅದೇ ರೀತಿ ಎಲ್ಲಾ ಅರ್ಜಿಗಳು ಸಮಿತಿಯ ಮುಂದೆ ಬರಬೇಕು. ಸರಿ ಉಂಟಾ ಇಲ್ಲವಾ, ಕೃಷಿ ಉಂಟಾ ಇಲ್ಲವಾ ಅಂತ ಪರಿಶೀಲನೆ ಮಾಡಿ ಮಂಜೂರು ಮಾಡುವ ಅವಕಾಶ ಇತ್ತು. ಈಗ ಯಾವುದೇ ಅರ್ಜಿ ಸಮಿತಿಯ ಮುಂದೆ ಬರಲ್ಲ. ಎಲ್ಲಾ ಅರ್ಜಿಗಳು ವಿಎ, ತಹಶೀಲ್ದಾರ್ ನೋಡಿದ ನಂತರ ನಮ್ಮ ಸಮಿತಿಯ ಮುಂದೆ ಬರುತ್ತದೆ. ಸುಮಾರು ೧೫ ಸಾವಿರ ಅರ್ಜಿಗಳನ್ನು ಅಧಿಕಾರಿಗಳೇ ತಿರಸ್ಕೃತ ಮಾಡಿರುತ್ತಾರೆ. ಇದಕ್ಕೆ ನಮ್ಮಲ್ಲಿ ಅಧಿಕೃತ ದಾಖಲೆಗಳಿವೆ. ಅಕ್ರಮ ಸಕ್ರಮದಲ್ಲಿ ಇದುವರೆಗೆ ೭ ಬೈಟಕ್‌ಗಳಾಗಿದ್ದು ಕುಂದಾಪುರ ಹೋಬಳಿಯಲ್ಲಿ ಒಟ್ಟು ೬೦ ಅರ್ಜಿಗಳು ಬಂದಿವೆ. ಬ್ರಹ್ಮಾವರ ಹೋಬಳಿಯಲ್ಲಿ ೪ ಬೈಟಕ್ ಆಗಿದೆ. ೧೮ ಅರ್ಜಿಗಳು ಮಾತ್ರ ಬಂದಿವೆ. ನಾನು ತಹಶೀಲ್ದಾರರಿಗೆ ಪ್ರತೀ ತಿಂಗಳು ನಾಲ್ಕು ಬೈಟೆಕ್ ಮಾಡಬೇಕೆಂದು ಬರವಣಿಗೆಯಲ್ಲೇ ಕೊಟ್ಟಿದ್ದೇನೆ. ಆದರೆ ಒಂದೂವರೆ ವರ್ಷದಲ್ಲಿ ಆದ ಬೈಟೆಕ್‌ಗಳಲ್ಲಿ ೭೮ ಅರ್ಜಿಗಳನ್ನು ಮಾv ಇತ್ಯರ್ಥ ಮಾಡಲಾಗಿದೆ. ೭೮ ಅರ್ಜಿಗಳಿಗೂ ಒಂದೇ ಒಂದು ಡಿನೋಟೀಸ್ ಕೊಡಲಿಕ್ಕೆ ನಮ್ಮಿಂದ ಸಾಧ್ಯವಾಗಿಲ್ಲ. ಹಿಂದೆ ಮ್ಯಾನ್ವಲ್ ಇದ್ದು ಈಗ ಆಪ್ ಮಾಡಿದ್ದಾರೆ. ಇದಕ್ಕೆ ವಿಎ ಕಚೇರಿಯಲ್ಲಿ ಅಥವಾ ತಹಶೀಲ್ದಾರರ ಕಚೇರಿಯಲ್ಲಿ ಸರಿಯಾದ ಮೂಲಭೂತ ವ್ಯವಸ್ಥೆ ಮಾಡದೇ ಇರುವುದರಿಂದ ಈ ಎಲ್ಲಾ ಕೆಲಸಗಳು ನಿಧಾನವಾಗಿ ಆಗುತ್ತಿದೆ. ಈ ತೊಂದರೆಯಿಂದ ಅಕ್ರಮ ಸಕ್ರಮ ಅರ್ಜಿ ತೀರ್ಮಾನ ಮಾಡಲಾಗುತ್ತಿಲ್ಲ ಎಂದು ಶಾಸಕರು ದರು.
೯&೧೧ ಕುರಿತು ಪ್ರತೀ ಅಧಿವೇಶನದಲ್ಲಿ ಕರಾವಳಿಯ ಶಾಸಕರು ಸರಕಾರದ ಗಮನಕ್ಕೆ ತಂದು ಜಗಳ ಕೂಡ ಮಾಡಿದ್ದೇವೆ. ಈ ಸಮಸ್ಯೆ ನಮ್ಮ ಎರಡು ಜಿಲ್ಲೆಗಳಲ್ಲಿ ಮಾತ್ರ. ಬೇರೆ ಜಿಲ್ಲೆಗಳಿಗೆ ತೊಂದರೆ ಆಗಲ್ಲ. ಹಿಂದೆ ಎಲ್ಲಾ ಕೆಲಸಗಳು ಗ್ರಾಮ ಪಂಚಾಯತ್‌ನಲ್ಲಿ ಆಗುತ್ತಿತ್ತು. ಈಗ ಪ್ರಾಧಿಕಾರಕ್ಕೆ ಹೋಗಿದೆ. ಅವರಲ್ಲಿ ಅಧಿಕಾರಿಗಳಿಲ್ಲ. ಕುಂದಾಪುರ, ಬಂಟ್ವಾಳ, ಕಾಪು, ಉಡುಪಿ ಹೀಗೆ ೪ ಕಡೆಗಳಿಗೆ ಓರ್ವ ಅಧಿಕಾರಿಯೇ ಚಾರ್ಜ್‌ನಲ್ಲಿದ್ದಾರೆ. ಒಬ್ಬ ಅಧಿಕಾರಿ ಇಷ್ಟು ಕಡೆಗಳಲ್ಲಿ ಕಾರ್ಯ ನಿರ್ವಹಿಸುವುದು ಹೇಗೆ? ಜನರು ಕಚೇರಿ ಅಲೆದು ಅಲೆದು ಸುಸ್ತಾಗಿದ್ದಾರೆ. ಈ ಜವಾಬ್ದಾರಿಯನ್ನು ಪುನಃ ಗ್ರಾಮ ಪಂಚಾಯತ್‌ಗೆ ಕೊಡಬೇಕೆಂದು ಎರಡು ಜಿಲ್ಲೆಯ ಶಾಸಕರು ಹೇಳಿದರೂ ಸರಕಾರ ಇದರ ಬಗ್ಗೆ ಗಮನ ಕೊಟ್ಟಿಲ್ಲ. ಆದ್ದರಿಂದ ಇನ್ನು ಮುಂದೆ ಬೀದಿಗಿಳಿದೇ ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಕಾಂಗ್ರೆಸ್ ಸರಕಾರ
ಮನೆಗಳನ್ನೇ ಕೊಟ್ಟಿಲ್ಲ!


ಬಸವ ವಸತಿ ಯೋಜನೆಯಲ್ಲಿ ಎರಡು ವರ್ಷಗಳಿಂದ ಒಂದೇ ಮನೆಯನ್ನು ಸರಕಾರ ಕೊಟ್ಟಿಲ್ಲ. ಹಿಂದೆ ಪ್ರತೀ ವರ್ಷ ಕ್ಷೇತ್ರಕ್ಕೆ ನೂರಾರು ಮನೆಗಳು ಬರುತ್ತಿದ್ದವು. ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರಕಾರದಿಂದ ಮನೆಗಳು ಬರುತ್ತಿಲ್ಲ. ಇದರಿಂದ ಹಳ್ಳಿಯಲ್ಲಿರುವ ಜನರಿಗೆ ಮನೆಗಳು ಸಿಗುತ್ತಿಲ್ಲ.
ಕಾಂಗ್ರೆಸ್ ಸರಕಾರ ಬಂದು ಎರಡು ವರ್ಷ ಕಳೆದಿದೆ. ಈ ಎರಡು ವರ್ಷದಲ್ಲಿ ಆರ್.ಡಿ.ಪಿ.ಆರ್ ಆಗಲಿ, ಎಸ್.ಸಿ. ಎಸ್ಟಿ ಯೋಜನೆಗಳಿಗಾಗಲಿ, ಮೈನರ್ ಇರಿಗೇಶನ್‌ಗಾಗಲಿ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಆರ್.ಡಿ.ಪಿ.ಆರ್‌ನಲ್ಲಿ ಈಗ ಹೊಸ ಪ್ರಪೋಸಲ್ ಕೇಳಿದ್ದಾರೆ. ಎಲ್ಲಾ ಪ್ರೊಸೆಸ್ ಆಗುತ್ತಾ ಇದೆ. ಇದು ಯಾವಾಗ ಅನುಷ್ಟಾನ ಆಗುತ್ತದೆ ಎಂದು ಮುಂದಿನ ದಿನಗಳಲ್ಲಿ ನಾವು ನೋಡಬೇಕು. ಪಿಡಬ್ಲ್ಯೂಡಿ ಇಲಾಖೆಗೆ ೧೦ ಕೋಟಿ ಅನುದಾನ ಕೊಟ್ಟಿದ್ದಾರೆ. ಇದರಲ್ಲಿ ಹಾಲಾಡಿ ಸೋಮೇಶ್ವರದವರೆಗಿನ ರಸ್ತೆಯನ್ನು ಅಭಿವೃದ್ಧಿ, ಜನ್ಯಾಡಿಯಲ್ಲಿ ೮ ಕೋಟಿ ಮೊvದಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಆನಗಳ್ಳಿಯಲ್ಲೂ ಕೆಲಸ ಆಗುತ್ತಾ ಇದೆ. ಕೋಟ ಹೋಬಳಿಯಲ್ಲೂ ಸ್ವಲ್ಪ ಕೆಲಸ ಆಗುತ್ತಿದೆ ಬಿಟ್ಟರೆ ಯಾವ ಅನುದಾನಗಳನ್ನು ಈ ಎರಡು ಕ್ಷೇತ್ರಗಳಿಗೆ ನೀಡಿಲ್ಲ. ನಮ್ಮ ಎರಡು ಜಿಲ್ಲೆಗಳ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಶಾಸಕನಾಗಿ ಎಲ್ಲರ ಜೊತೆಯಲ್ಲಿ ಒಟ್ಟಿಗೆ ಹೋಗಲು ನಾನು ಪ್ರಯತ್ನಿಸಿದ್ದೇನೆ. ಅನಗತ್ಯವಾಗಿ ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಕಾಂಗ್ರೆಸ್ ಮಿತ್ರರು ಅವರ ರಾಜಕೀಯ ಮಾಡಲಿ. ವೈಯಕ್ತಿಕ ಟೀಕೆ ಮಾಡುವಾಗ ಜಾಗೃತೆಯಲ್ಲಿ ಮಾಡಿದರೆ ಒಳ್ಳೆಯದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಕುಂದಾಪುರ ಮಂಡಲದ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಯುವ ಘಟಕದ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಉಪಸ್ಥಿತರಿದ್ದರು.
ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *