udupimitra.in
  • June 24, 2026
  • Last Update June 23, 2026 5:23 pm
  • Brahmavara

ಆರ್ಥಿಕ ಅಶಕ್ತ ಕುಟುಂಬಕ್ಕೆ ಶೌಚಾಲಯ ಹಸ್ತಾಂತರ

ಆರ್ಥಿಕ ಅಶಕ್ತ ಕುಟುಂಬಕ್ಕೆ ಶೌಚಾಲಯ ಹಸ್ತಾಂತರ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ:

ಕುಂದಾಪುರ : ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಹಾಗು ದಾನಿಗಳ ಸಹಕಾರದಿಂದ ಶಿರೂರು ಸಮೀಪದ ಆರ್ಥಿಕ ಅಶಕ್ತ ಕುಟುಂಬವೊಂದಕ್ಕೆ ಶೌಚಾಲಯ ನಿರ್ಮಿಸಿ ಹಸ್ತಾಂರಿಸಲಾಗಿದೆ. ವಿಧವೆ ತಾಯಿ ಮತ್ತು ಅವಳ 16 ವರ್ಷದ ತಂದೆ ಇಲ್ಲದ ಮಗಳು. ಇವರಿಬ್ಬರೂ ಶೌಚಾಲಯ ಹಾಗೂ ಸ್ನಾನಗೃಹವಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು.
ಈ ತಾಯಿ ಮಗಳಿಗೆ ಪ್ರತಿದಿನ ನೆರೆಮನೆಯ ಶೌಚಾಲಯ ಬಳಸುವುದು ಗೌರವದ ದೃಷ್ಟಿಯಿಂದ ತುಂಬಾ ಮುಜುಗರವಾಗುತಿತ್ತು, ಇದನ್ನು ತಿಳಿದು ದಾನಿಗಳು ಒಟ್ಟು ಸೇರಿ ಅವರ ಸಹಕಾರದಿಂದ ಆ ಕುಟುಂಬಕ್ಕೆ ಶೌಚಾಲಯವನ್ನು ನಿರ್ಮಿಸಿ ಹಸ್ತಾಂತರ ಮಾಡಿದರು.


ಹಸ್ತಾಂತರದ ಸಂದರ್ಭ ಎನ್‌ಎನ್‌ಓ ಕಮ್ಯುನಿಟಿ ಸೆಂಟರ್ ಕುಂದಾಪುರ ಇದರ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಓಓಔ ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್ ಉಡುಪಿ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹಾಗು ಓಓಔ ಕಮ್ಯೂನಿಟಿ ಸೆಂಟರ್‌ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಸದಸ್ಯರಾದ ಮನ್ಸೂರ್ ಇಬ್ರಾಹಿಂ, ಬೈಂದೂರು ಘಟಕದ ಉಪಾಧ್ಯಕ್ಷ ಮಮ್ದು ಇಬ್ರಾಹಿಂ, ಉಡುಪಿ ಘಟಕದ ಉಪಾಧ್ಯಕ್ಷ ರಿಯಾಜ್ ಅಹ್ಮದ್, ಖಜಾಂಚಿ ಅಕ್ರಮ್ ಉಡುಪಿ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page