• April 10, 2026
  • Last Update April 9, 2026 4:52 pm
  • Brahmavara

ಫೆ.14ರ : ‘ಅಭಿಮತ ಸಂಭ್ರಮಕ್ಕಾಗಿ ಬ್ರಹ್ಮಾವರದಲ್ಲಿ ಸಕಲ ಸಿದ್ದತೆ

ಫೆ.14ರ : ‘ಅಭಿಮತ ಸಂಭ್ರಮಕ್ಕಾಗಿ ಬ್ರಹ್ಮಾವರದಲ್ಲಿ ಸಕಲ ಸಿದ್ದತೆ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ : ವರದಿ : ಚಿತ್ತೂರು ಪ್ರಭಾಕರ ಆಚಾರ್ಯ

ಬ್ರಹ್ಮಾವರ, ಫೆ.೧೩: ಜನಸೇವಾ ಟ್ರಸ್ಟ್ ಗಿಳಿಯಾರು ಆಶ್ರಯದಲ್ಲಿ ಫೆ.14ರಂದು ಸಂಜೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ನಡೆಯುವ ಅಭಿಮತ ಸಂಭ್ರಮಕ್ಕೆ ಸಕಲ ಸಿದ್ದತೆ ನಡೆದಿದೆ. ಕಾರ್ಯಕ್ರಮಕ್ಕೆ ಎಷ್ಟೇ ಜನ ಆಗಮಿಸಿದರೂ ಅವರಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ವೇದಿಕೆಯ ಗಣ್ಯರಿಗಾಗಿ ವಿಶೇಷ ಕಾರಿಡಾರ್ ಸಜ್ಜುಗೊಳಿಸಲಾಗಿದೆ. ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರತೀ ವೀಕ್ಷಕ ಗ್ಯಾಲರಿಯಲ್ಲೂ ಅಭಿಮತದ ಸ್ವಯಂಸೇವಕರು ಆಮಂತ್ರಿತರನ್ನು ಸ್ವಾಗತಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಸಿದ್ದವಾಗಿದೆ. ಕಾಂತಾರ ಖ್ಯಾತಿಯ ರಿಷಬ್‌ರವರ ಆಗಮನ ಹಾಗೂ ವಿಜಯ ಪ್ರಕಾಶ್ ಆಗಮನ ಕುತೂಹಲ ಹೆಚ್ಚಿಸಿದೆ. ಮಂಗಳೂರಿನ ಅಶೋಕ್ ಕುಮಾರ್‌ರವರ ಗೀತಾ ಇಲೆಕ್ಟ್ರಿಕಲ್ಸ್ ಸೌಂಡ್ & ಲೈಟ್ಸ್ ಇವೆಂಟ್ ತಂಡ ಅತಿ ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮದ ಪೂರ್ವ ಸಿದ್ದತೆ ಮಾಡಿಕೊಳ್ಳುತ್ತಿದೆ. ಒಟ್ಟಾರೆಯಾಗಿ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಫೆ.14ರ ಅಭಿಮತ ಸಂಭ್ರಮಕ್ಕಾಗಿ ಟೀಮ್ ಅಭಿಮತ ಸದಸ್ಯರಿಂದ ಸಮರೋಪಾದಿ ಸಿದ್ದತೆ ನಡೆದಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page