udupimitra.in
  • June 24, 2026
  • Last Update June 23, 2026 5:23 pm
  • Brahmavara

ಬ್ರಹ್ಮಾವರ : ‘ಶುಭನಿಧಿ ಜ್ಯುವೆಲ್ಲರ‍್ಸ್’ ಶುಭಾರಂಭ

ಬ್ರಹ್ಮಾವರ : ‘ಶುಭನಿಧಿ ಜ್ಯುವೆಲ್ಲರ‍್ಸ್’ ಶುಭಾರಂಭ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಫೆ.೬: ಬ್ರಹ್ಮಾವರ – ಹೆಬ್ರಿ ರಸ್ತೆಯ ಕೃಷಿ ಕೇಂದ್ರದ ಎದುರಿನ ಲ್ಷ್ಮೀ ಎಂಪೈರ್ ಬೋರ್ಡಿಂಗ್ & ಲಾಡ್ಜಿಂಗ್ ಬಿಲ್ಡಿಂಗ್‌ನಲ್ಲಿ ಶುಭನಿಧಿ ಜ್ಯುವೆಲ್ಲರ‍್ಸ್ ಫೆ.6ರಂದು ಉದ್ಘಾಟನೆಗೊಂಡಿತು.


ಶ್ರೀಮದ್ ವಿಶ್ವಕರ್ಮ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ- ಪಡುಕುತ್ಯಾರು ಇಲ್ಲಿನ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಭಾಗವಹಿಸಿ ಆಶೀರ್ವಚಿಸಿದರು.


ಸ್ವರ್ಣೋದ್ಯಮಿ ಪಿ.ಎನ್.ಶುಭಕರ ಆಚಾರ್ಯ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಸಿ.ಎ.ಶ್ರೀಧರ ಆಚಾರ್ಯ ಪೊನ್ವೆಲ್ ಮುಂಬೈ, ಹಿರಿಯರಾದ ವಿಠಲ ಶೆಟ್ಟಿ ಹೆಗ್ಗುಂಜೆ ಮಂದಾರ್ತಿ, ಶ್ರೀಮತಿ ರುದ್ರಮ್ಮ ವಿ.ಶೆಟ್ಟಿ ಮಂದಾರ್ತಿ, ಲಕ್ಷ್ಮೀ ಎಂಪಾರ್ ಮಾಲಕ ದೇವಿದಾಸ್ ಶೆಟ್ಟಿ, ಉದ್ಯಮಿ ಪ್ರಸಾದ್‌ರಾಜ್‌ಕಾಂಚನ್, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಬೆಂಗಳೂರಿನ ಅಭಯ ಅಸೋಸಿಯೇಟ್ಸ್ ಉಮೇಶ್ ಶೆಟ್ಟಿ ಮಂದಾರ್ತಿ, ಹರೀಶ್ ಕುಂದರ್ ಇನ್ನಿತರರು ಭಾಗವಹಿಸಿ ಶುಭ ಹಾರೈಸಿದರು.
ಶುಭನಿಧಿ ಜ್ಯುವೆಲ್ಲರ‍್ಸ್ ಮಾಲಕ ಬಿ.ಯೋಗೀಶ್ ಆಚಾರ್ ಸ್ವಾಗತಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page