ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕಚ್ಚೂರು ಶ್ರೀ ಮಾಲ್ತಿದೇವಿ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ ಜೂ.೨೮ರಂದು ಉದ್ಘಾಟನೆಗೊಂಡಿತು.
ಉದ್ಘಾಟನೆಯ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸಹಕಾರಿ ಸಂಘಗಳ ರಚನೆಯಿಂದ ಸಮುದಾಯಕ್ಕೆ ಆರ್ಥಿಕ ಶಕ್ತಿಯನ್ನು ನೀಡಲು ಸಹಕಾರಿಯಾಗುತ್ತದೆ ಎಂದರು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಸೇರಿದ ಸೊಸೈಟಿಗಳು ಕಡಿಮೆ ಇದ್ದು, ಈ ಸೊಸೈಟಿಯು ಸಮುದಾಯದ ನೆರಳಾಗಿ ಬೆಳೆದು ರಾಜ್ಯಕ್ಕೆ ಮಾದರಿಯಾಗಲಿ ಎಂದರು.

ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಛೇರಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವಾಗಿ ನೀವೂ ಅಭಿವೃದ್ಧಿ ಹೊಂದಿ ಇತರರನ್ನೂ ಬೆಳೆಸಿ ಎಂದು ಕರೆ ನೀಡಿದರು.

ಕಚ್ಚೂರು ಶ್ರೀ ಮಾಲ್ತಿದೇವಿ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಅಧ್ಯಕ್ಷ ಗೋಕುಲ್‌ದಾಸ್ ಅಧ್ಯಕ್ಷತೆ ವಹಿಸಿ, ನಮ್ಮ ಸಮುದಾಯದವರ ಸಹಕಾರ, ಕರ್ತವ್ಯ ಬದ್ಧತೆಯಿಂದ, ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಶ್ರೀ ಕ್ಷೇತ್ರವು ಜಾತ್ಯಾತೀತವಾಗಿ ಬೆಳೆದು ನಿಂತಿದೆ. ಪ್ರತೀ ತಾಲೂಕಿನಲ್ಲಿ ನಮ್ಮ ಸಮುದಾಯ ಭವನ ಆಗುವಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಠೇವಣಿ ಪತ್ರ ಬಿಡುಗಡೆ ಮಾಡಿ, ಅಧ್ಯಕ್ಷರ, ನಿರ್ದೇಶಕರುಗಳ, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಪ್ರಯತ್ನ, ವಿಶ್ವಾಸ, ನಗುಮೊಗದ ಸೇವೆ ಇದರಿಂದ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾಧ್ಯ ಎಂದರು.
ಕಚ್ಚೂರು ಶ್ರೀ ಕ್ಷೇತ್ರದ ಅಧ್ಯಕ್ಷ ಶಿವಪ್ಪ ನಂತೂರು ಕಛೇರಿ ದೀಪ ಪ್ರಜ್ವಲನೆ ಮಾಡಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಲಾಂಛನ ಅನಾವರಣಗೊಳಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಚ್ಚೂರು ಶ್ರೀ ಕ್ಷೇತ್ರದ ಗುರಿಕಾರ ಕಮಲಾಕ್ಷ ಹೆಚ್. ಉದ್ಯಮಿ ಕುತ್ಯಾರು ನವೀನ್ ಶೆಟ್ಟಿ, ಗ್ಯಾರಂಟಿ ಅನುಷ್ಟಾನ ಸಮಿತಿ ಉಡುಪಿ ಇದರ ಅಧ್ಯಕ್ಷ ರಮೇಶ್ ಕಾಂಚನ್, ಬಾರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ. ಶಾಂತರಾಮ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಬಾರ್ಕೂರು ಇದರ ಪ್ರಬಂಧಕಿ ರೂಪರಾಣಿ ವಿ. ಶೆಟ್ಟಿ, ಶ್ರೀ ಮಾಲ್ತಿದೇವಿ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಕಾರಿ ರಾಹುಲ್, ಉಪಾಧ್ಯಕ್ಷ ರಘುರಾಮ ಪುತ್ತೂರು, ನಿರ್ದೇಶಕರುಗಳಾದ ಪ್ರೇಮಾನಂದ ಬಾರ್ಕೂರು, ಸುಧಾಕರ ಅಲೆವೂರು, ಸಂಜೀವ ಮಾಸ್ತರ್ ಮಲ್ಲಾರ್, ಉದಯ್ ಅಂಚನ್ ಎರ್ಮಾಳ್, ವಾಸುದೇವ ಹಂಗಾರಕಟ್ಟೆ, ರಾಘವೇಂದ್ರ ಗುಂಡ್ಮಿ, ಶಿವರಾಜ್ ಮಲ್ಲಾರ್, ರಾಜು ಸೌಕೂರು, ವಾಸುದೇವ ಬನ್ನಂಜೆ, ಪ್ರಸನ್ನ ಕುಮಾರ್ ಪಡುಬಿದ್ರಿ, ದಿನೇಶ್ ಕಂಚಿನಡ್ಕ, ಉದಯ್ ಕುಮಾರ್ ಕುಕ್ಕುಡೆ ಉಪಸ್ಥಿತರಿದ್ದರು.

ಅನುಷಾ ಮಣಿಪಾಲ ಪ್ರಾರ್ಥಿಸಿದ್ದು ಸೊಸೈಟಿ ಅಧ್ಯಕ್ಷ ಗೋಕುಲ್‌ದಾಸ್ ಬಾರ್ಕೂರು ಸ್ವಾಗತಿಸಿದರು. ಕಾರ್ಯನಿರ್ವಹಣಾಕಾರಿ ರಾಹುಲ್ ವಂದಿಸಿದ್ದು ಪ್ರಭಾಕರ್ ಮಣೂರು ಕಾರ್ಯಕ್ರಮ ನಿರೂಪಿಸಿದರು.




