ವರದಿ :
ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜೂ.೨೨:
ಸ್ವದೇಶಿ ಮತ್ತು ಗುಣಮಟ್ಟದ ಆಹಾರ ಉಪಯೋಗಿಸಿದರೆ ಮನುಷ್ಯ ಆರೋಗ್ಯವಂತಾನಾಗಬಹುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಪಡೆಯಲು ನಮ್ಮ ಸ್ವದೇಶಿ ವಸ್ತುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ನುಡಿದರು.

ಅವರು ಜೂ. 22ರಂದು ಬ್ರಹ್ಮಾವರದ ಶ್ರೀ ಲಕ್ಷ್ಮೀ ಆರ್ಕೇಡ್ನಲ್ಲಿ ಸ್ವದೇಶಿ ನ್ಯಾಚುರಲ್ಸ್ ಮತ್ತು ಸ್ಟಂದ ಏಜೆನ್ಸಿ ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರದಲ್ಲಿ ಕೋರ್ಟ್ ಆಗಿದೆ. ತಾಲೂಕು ಕಚೇರಿ ಆಗಿದೆ. ಸರಕಾರದ ಎಲ್ಲಾ 24 ಕಚೇರಿಗಳು ಆಗುತ್ತಿವೆ. ಅಂತಹ ಸಂದರ್ಭದಲ್ಲಿ ಬೆಳೆಯುತ್ತಿರುವ ಬ್ರಹ್ಮಾವರಕ್ಕೆ ಅನೇಕ ಮೂಲಭೂತ ಸೌಕರ್ಯಗಳ ಅಗತ್ಯತೆಯೂ ಇದೆ ಎಂದು ಶ್ರೀನಿವಾಸ ಪೂಜಾರಿಯವರು ನುಡಿದರು.

ಶ್ರೀ ಲಕ್ಷ್ಮೀ ಆರ್ಕೇಡ್ ಮಾಲಕರಾದ ಬಿ.ಎನ್.ಶಂಕರ್ ಪೂಜಾರಿ ಮಾತನಾಡಿ ನಮ್ಮ ಆರೋಗ್ಯ ಹಾಳಾಗಲು ನಮ್ಮ ಆಹಾರ ಕಾರಣ. ಆದ್ದರಿಂದ ಸ್ವದೇಶಿ ನಿರ್ಮಿತ ವಸ್ತುಗಳನ್ನು ನಾವು ಉಪಯೋಗಿಸಬೇಕೆಂದು ನುಡಿದರು.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕವೂ ನಾವು ರಾಷ್ಟ್ರ ಪ್ರೇಮ ಬೆಳೆಸಬಹುದು. ಕಳೆದ ಹತ್ತು ವರ್ಷಗಳಿಂದ ಬಾರ್ಕೂರಿನಲ್ಲಿ ಗಣೇಶ್ ಶೆಟ್ಟಿ ಸ್ವದೇಶಿ ವಸ್ತುಗಳನ್ನು ಮಾರಾಟ ಮಾಡುತ್ತಾ ಬಂದಿರುತ್ತಾರೆ. ಇದೀಗ ಬ್ರಹ್ಮಾವರದಲ್ಲಿ ಮಳಿಗೆ ಆರಂಭಿಸಿದ್ದು ಖಂಡಿತವಾಗಿಯೂ ಇಲ್ಲಿಯೂ ಅದು ಯಶಸ್ವಿಯಾಗಲಿದೆ ಎಂದರು.

ಸದ್ಗುರು ಆಯುರ್ವೇದ ಆಡಳಿತ ನಿರ್ದೇಶಕ ಪ್ರದೀಪ್ ಡಿ. ಎಸ್, ಭಟ್ &ಭಟ್ ಹೋಂ ಪ್ರಾಡಕ್ಟ್ ಮಾಲಕ ಸುದರ್ಶನ್ ಭಟ್ ಬೆದ್ರಾಡಿ, ಸಾಂಸ್ಕೃತಿಕ ಚಿಂತಕ ಕಿಶೂ ಬಾರ್ಕೂರು, ಬ್ರಹ್ಮಾವರ ಕರ್ನಾಟಕ ಬಿಲ್ಡರ್ಸ್ ಮಾಲಕ ಚೇತನ್ಕುಮಾರ್ ಶೆಟ್ಟಿ, ನಿವೃತ್ತ ಅಧ್ಯಾಪಕ ಬಾಲಚಂದ್ರ ಶೆಟ್ಟಿ ಬೆಣ್ಣೆಕುದ್ರು, ಬೆಣ್ಣೆಕುದ್ರು ತಾವರೆಕೆರೆ ಜಯಕರ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಕುಸುಮ ಶೆಟ್ಟಿ ಹಾಗೂ ಶ್ರೀಮತಿ ಜಾಹ್ನವಿ ಪ್ರಾರ್ಥಿಸಿದರು. ಗಣೇಶ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಅಲ್ವಿನ್ ಅಂದ್ರಾದೆ ನಿರೂಪಿಸಿದರು.



