ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಜು.೧: ಚಿತ್ತೂರು ಮಕ್ಕಿಮನೆಯ ಉಳ್ಳೂರು ಉದ್ದಿನಹಕ್ಲುಮನೆ ಮಹಾಬಲ ಶೆಟ್ಟಿ(77)ಯವರು ಜೂ.27ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.

ವೈದ್ಯಕೀಯ ಪ್ರಯೋಗಗಳಿಗಾಗಿ ದೇಹದಾನ :
ಮಹಾಬಲ ಶೆಟ್ಟಿಯವರು ೨೦೧೭ರಲ್ಲೇ ತಮ್ಮ ಮೃತದೇಹವನ್ನು ವೈದ್ಯಕೀಯ ಪ್ರಯೋಗಗಳ ಸಲುವಾಗಿ ದಾನ ಮಾಡುವ ಬಗ್ಗೆ ಒಪ್ಪಿಗೆ ನೀಡಿದ್ದರು. ಶೆಟ್ಟರು ಮೃತರಾದ ಸುದ್ಧಿಯನ್ನು ತಿಳಿಸಿದಾಗ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅನಾಟೊಮಿ ವಿಭಾಗದ ಸಿಬ್ಬಂದಿಗಳು ಮನೆಗೆ ಆಗಮಿಸಿ ಮೃತದೇಹವನ್ನು ಸ್ವೀಕರಿಸಿ ಕೆ.ಎಂ.ಸಿಗೆ ಸಾಗಿಸಿದರು. ಈ ಸಂದರ್ಭ ಚಿತ್ತೂರಿನ ಡಾ.ಅತುಲ್‌ಕುಮಾರ್ ಶೆಟ್ಟಿ, ಉದಯ ಜಿ.ಪೂಜಾರಿ, ರವೀಂದ್ರ ಶೆಟ್ಟಿ ಚಿತ್ತೂರು, ಪ್ರೀತಮ್ ಶೆಟ್ಟಿ, ಸೀತಾರಾಮ ಜಿ.ಪೂಜಾರಿ, ಸುರೇಶ್ ಪೂಜಾರಿ (ಅಂಬಿಕಾ), ಗುಂಡುಪೂಜಾರಿ ಹರವರಿ, ಅಬ್ದುಲ್ ಸಲಾಂ ಚಿತ್ತೂರು, ಅಬ್ದುಲ್ ರೆಹಮಾನ್, ಗಿರೀಶ್ ಚಿತ್ತೂರು ಹಾಗೂ ಇನ್ನಿತರರು ಅಂತಿಮ ನಮನ ಸಲ್ಲಿಸಿಕೊಂಡರು.



