udupimitra.in
  • August 16, 2026
  • Last Update August 16, 2026 8:55 am
  • Brahmavara

ವಾರಂಬಳ್ಳಿಯಲ್ಲಿ ಕಮಲ ವೈಭವ-2026, ಕೆಸರು ಗದ್ದೆ ಕ್ರೀಡಾಕೂಟಕ್ಕೆ ಚಾಲನೆ

ವಾರಂಬಳ್ಳಿಯಲ್ಲಿ ಕಮಲ ವೈಭವ-2026, ಕೆಸರು ಗದ್ದೆ ಕ್ರೀಡಾಕೂಟಕ್ಕೆ ಚಾಲನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ ಅ.೧೬;
ಜಗತ್ತಲ್ಲಿ ಯುದ್ಧ ಅಥವಾ ಏನಾದರೂ ಅನಾಹುತ ಸಂಭವಿಸಿದಾಗ ಅಮೇರಿಕದ ಅಧ್ಯಕ್ಷರು ಏನು ಹೇಳುತ್ತಾರೆ ಎಂದು ಜಗತ್ತು ಕುತೂಹಲದಿಂದ ಕಾಯುವ ಕಾಲವಿತ್ತು. ಆದರೆ ಇಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏನು ಹೇಳುತ್ತಾರೆ ಎಂದು ಇಡೀ ವಿಶ್ವ ಕಾಯುತ್ತಿದೆ. ಒಂದು ಕಾಲದಲ್ಲಿ ಚಿನ್ನ ಅಡವಿಟ್ಟ ಭಾರತ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಳುತ್ತಿದ್ದ ಈ ಕಾಲ ಘಟ್ಟದಲ್ಲಿ ಜಗತ್ತಿನ ೬೮ ರಾಷ್ಟ್ರಗಳಿಗೆ ಸಾಲ ಕೊಡುವ ಭಾರತವಾಗಿ ಪರಿವರ್ತನೆಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ನುಡಿದರು.


ಅವರು ಬ್ರಹ್ಮಾವರ ಸಾಲಿಕೇರಿ ವೈದ್ಯನಾಥ ದೇವಸ್ಥಾನದ ಹತ್ತಿರ ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ ನೇತೃತ್ವದಲ್ಲಿ ನಡೆದ ಕಮಲ ವೈಭವ-೨೦೨೬, ಕೆಸರು ಗದ್ದೆಯ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಕ್ರೋಚ್ ಹುಡುಗರಿಗೆ ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲಿನ ಭಾರತದ ಚಿತ್ರಣ ಗೊತ್ತಿಲ್ಲ. ಅವರಲ್ಲಿ ಕೆಲವರು ಅಂದು ತಾಯಿ ಕಂಕುಳದಲ್ಲಿ ಇದ್ದರೆ ಇನ್ನು ಕೆಲವರು ತೊಟ್ಟಿಲಲ್ಲಿ ಇದ್ದಿದ್ದರು. ಅಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣ ಅಥವಾ ಬಸ್‌ನಿಲ್ದಾಣಕ್ಕೆ ಹೋದರೆ ಅಲ್ಲಿ ಧ್ವನಿ ವರ್ಧಕದ ಮೂಲಕ ಅಪರಿಚಿತ ವಸ್ತುಗಳನ್ನು ಮುಟ್ಟಬೇಡಿ, ಅದು ಬಾಂಬ್ ಆಗಿರಬಹುದು ಎಂದು ಹೇಳುತ್ತಿದ್ದರು. ಪ್ರತಿಯೊಂದು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಹಾಕವವರಿದ್ದರು. ಮೋದಿ ಆಡಳಿತದಿಂದ ಇಂದು ಆ ಆತಂಕ ದೂರಾಗಿದೆ. ಎಲ್ಲಡೆ ಭದ್ರತೆ ಒದಗಿಸಲಾಗಿದೆ. ಅಮೇರಿಕ, ರಷ್ಯಾ, ಜಪಾನ್, ಬ್ರಿಟನ್ ಸೇರಿದಂತೆ ಇಡೀ ಜಗತ್ತು ತಲ್ಲಣದಲ್ಲಿ, ಅಭದ್ರತೆಯಲ್ಲಿರುವಾಗ ಮೋದಿ ಆಡಳಿತದಿಂದಾಗಿ ಇಡೀ ಭಾರತೀಯ ಪ್ರಜೆಗಳು ನೆಮ್ಮದಿಯಿಂದ ಇದ್ದಾರೆಂಬುದನ್ನು ಕಾಕ್ರೋಚ್‌ಗಳು ಅರ್ಥ ಮಾಡಿಕೊಳ್ಳಬೇಕು. ಇಂದು ಸುಳ್ಳನ್ನೇ ಸತ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಬಹಳ ಕಾಲ ನಡೆಯಲ್ಲ ಎಂದು ನುಡಿದರು.


ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದು ಕಮಲ ವೈಭವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮಂಗಳೂರು ನಗರ ಉತ್ತರ ವಿಭಾಗ ಶಾಸಕ ಭರತ್ ಶೆಟ್ಟಿ ಉದ್ಘಾಟಿಸಿ ಕೆಸರು ಗದ್ದೆಗೆ ಹಾಲೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ೧೮ರ ಹರೆಯದ ಆಸುಪಾಸಿನ ಯುವ ಪೀಳಿಗೆಗೆ ನಮ್ಮ ಹಿರಿಯರು ಹೇಗೆ ಜೀವನ ಮಾಡಿದ್ದರು, ಯಾವ ರೀತಿಯ ಕಷ್ಟವನ್ನು ಈ ದೇಶ ಅನುಭವಿಸಿದೆ, ಯಾವ್ಯಾವ ರಾಜಕಾರಣಿಗಳು ಏನನ್ನು ಮಾಡಿದ್ದರು ಎಂಬುದು ಗೊತ್ತಿಲ್ಲ. ೨೦೧೪ರ ಮೊದಲು ಈ ದೇಶದಲ್ಲಿ ರಾಜಕಾರಣಿಗಳು ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು, ನಮ್ಮ ಜೀವನ ಎಷ್ಟು ದುಸ್ತರವಾಗಿತ್ತು ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲ. ಇಂದಿನ ನಗರದ ಮಕ್ಕಳಲ್ಲಿ ಅನ್ನ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಅಂಗಡಿಯಿಂದ ಬರುತ್ತದೆ ಎಂದು ಹೇಳುತ್ತಾರೆ. ಅದು ಗದ್ದೆಯಲ್ಲಿ ಮಾಡುವ ಕೃಷಿಯಿಂದ ಬರುತ್ತಿದೆ ಎಂಬುದು ಕೂಡ ಗೊತ್ತಿಲ್ಲ ಎಂದರು.


ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಕಮಲ ವೈಭವಕ್ಕೆ ಶುಭ ಹಾರೈಸುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವದ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ ಎಂದರು. ಉಡುಪಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಬಿಜೆಪಿ ರಾಜ್ಯಕಾರಿಣಿ ಸದಸ್ಯ ಬಿ.ಎನ್ ಶಂಕರ ಪೂಜಾರಿ, ಸುಪ್ರಸಾದ್ ಶೆಟ್ಟಿ ಬೈಕಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಪ್ರಥ್ವಿರಾಜ್ ಶೆಟ್ಟಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರೇಷ್ಮಾ ಉದಯಕುಮಾರ್ ಶೆಟ್ಟಿ, ಹರಿಮಕ್ಕಿ ರತ್ನಾಕರ ಶೆಟ್ಟಿ, ಜಿಲ್ಲಾ ಯುವ ಮೋರ್ಛಾದ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಎರಿಕ್ ಪೀಟರ್ ಅಲ್ಮೇಡಾ, ಗ್ರಾಮಾಂತರ ಮಹಿಳಾ ಮೋರ್ಛಾದ ಅಧ್ಯಕ್ಷೆ ಶ್ರೀಮತಿ ರಮ್ಯಾ ಉಪ್ಪೂರು, ರೈತ ಮೋರ್ಛಾದ ಮಹೇಶ್ ಕೋಟ್ಯಾನ್, ಹಿಂದುಳಿದ ವರ್ಗ ಮೋರ್ಛಾದ ಅಧ್ಯಕ್ಷ ನಿತ್ಯಾನಂದ, ಎಸ್.ಸಿ.ಮೋರ್ಚಾದ ಎಸ್, ನಾರಾಯಣ, ಎಸ್ ಸಿ. ಮೋರ್ಚಾದ ಗಿರಿಧರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್, ವೇದಿಕೆಯಲ್ಲಿದ್ದರು.


ಕಂಬಳದ ಕೋಣಗಳನ್ನು ಒದಗಿಸಿದ ಸಂದೀಪ್‌ಅವರನ್ನು ಸನ್ಮಾನಿಸಲಾಯಿತು.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ನಮ್ಮ ನೆಲದ ಮಣ್ಣಿನ ಸಂಸ್ಕೃತಿಯನ್ನು ಉಳಿಸುವ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಲ್ಲಿ ಕಮಲ ವೈಭವ-೨೦೨೬ ಕಾರ್ಯಕ್ರಮ ಸಂಘಟಿಸಲಾಗಿದೆ.

ಗ್ರಾಮಂತರ ಮಂಡಲದ ಅಧ್ಯಕ್ಷ ರಾಜೀವ ಕುಲಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಾನಂದ ನಾಯಕ್ ವಂದಿಸಿದರು.
ಮನೋಜ್ ಶೆಟ್ಟಿ ನಿರೂಪಿಸಿದರು.

ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಚಂದ್ರ ಶೇಖರ ಶೆಟ್ಟಿ, ಜಿ.ಎಮ್. ವಿದ್ಯಾಸಂಸ್ಥೆಯ ಮುಖ್ಯಸ್ಥ ಪ್ರಕಾಶ್ಚಂದ್ರ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಿತ್ಯಾನಂದ, ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಚೇಕಾಡಿ, ಲಕ್ಷ್ಮೀ ಎಕ್ಸ್‌ಪ್ರೆಸ್ ಮಾಲಕ ದೇವಿದಾಸ್ ಶೆಟ್ಟಿ, ಪ್ರಸಾದ್ ಕುಮಾರ್ ಶೆಟ್ಟಿ ನಾಲ್ಕೂರು,

ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗುರುರಾಜ್ ರಾವ್, ಮೋಹನ್ ಶೆಟ್ಟಿ ಪಂಚಮಿ, ನಿರಂಜನ್ ಶೆಟ್ಟಿ, ಪ್ರದೀಪ್ ಕುಂದರ್, ಸುಶಾಂತ್, ನಿತ್ಯಾನಂದ, ಪೂಜಾರಿ, ಸಂತೋಷ್ ಶೆಟ್ಟಿ , ಸತ್ಯರಾಜ್ ವಾರಂಬಳ್ಳಿ ಹಾಗೂ ಬಿಜೆಪಿಯ ವಿವಿಧ ಮೋರ್ಚಾದ ಪ್ರಮುಖರಿದ್ದರು.
ಕಪಿಲೇಶ್ವರ ದೇವಸ್ಥಾನದಿಂದ ಅದ್ದೂರಿಯ ಮೆರವಣಿಗೆಯಲ್ಲಿ ಸಾಗಿ ಬಂದು ಕಮಲವೈಭವ -೨೦೨೬ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿತ್ತು.

administrator

Related Articles

Leave a Reply

Your email address will not be published. Required fields are marked *

You cannot copy content of this page