udupimitra.in
  • June 7, 2026
  • Last Update June 7, 2026 4:39 pm
  • Brahmavara

ಅಚ್ಲಾಡಿ ವನ ದೇವತೆ ಯಕ್ಷೇಶ್ವರೀ ಕ್ಷೇತ್ರ ವರ್ಧಂತಿ

ಅಚ್ಲಾಡಿ ವನ ದೇವತೆ ಯಕ್ಷೇಶ್ವರೀ ಕ್ಷೇತ್ರ ವರ್ಧಂತಿ

ಉಡುಪಿಮಿತ್ರ ಪತ್ರಿಕೆ ಸುದ್ಧಿ
ಕೋಟ, ಜೂ.೭: ಅಚ್ಲಾಡಿ ವನ ದೇವತೆ ಯಕ್ಷೇಶ್ವರೀ ಕ್ಷೇತ್ರ ವರ್ಧಂತಿ ಜೂ.7 ರಂದು ಜರಗಿತು.
ಈ ಪ್ರಯುಕ್ತ ನಾಗದೇವರಿಗೆ ಕಲಶಾಭಿಷೇಕ, ಪೂಜೆ ಹಾಗೂ ಯಕ್ಷೇಶ್ವರೀ ದೇವಿಗೆ ಕಲಶಾಭಿಷೇಕ, ವಿವಿಧ ಹೋಮಗಳು, ತುಲಾಭಾರ ಸೇವೆ, ಅನ್ನಸಂತರ್ಪಣೆ ನಡೆಯಿತು.
ಅಪರೂಪದ ವನದೇವತೆ ಕ್ಷೇತ್ರವಾಗಿರುವ ಈ ಸಾನಿಧ್ಯವು ವಿವಾಹ, ಸಂತಾನ, ಉದ್ಯೋಗ, ವಿದ್ಯೆ,, ಆರೋಗ್ಯ ಪ್ರಾಪ್ತಿಗೆ ಹೆಸರುವಾಸಿಯಾಗಿದ್ದು ಇಲ್ಲಿ ಪ್ರಾರ್ಥನೆ ಸಲ್ಲಿಸುವ ಭಕ್ತಾಧಿಗಳ ಮನಃ ಸಂಕಲ್ಪ ಸಿದ್ಧಿಸುತ್ತದೆ ಎನ್ನುವ ನಂಬಿಕೆ ಇದ್ದು ಪ್ರತಿ ವರ್ಷ ವರ್ಧಂತಿ ವಿಜೃಂಭಣೆಯಿಂದ ಜರಗುತ್ತದೆ.

ಕ್ಷೇತ್ರದ ಪುರೋಹಿತರಾದ ಮಂಜುನಾಥ ಭಟ್ ಹಾಗೂ ಸಂಗಡಿಗರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಸಂಜೆ ಸೇವಾ ಭಜನಾ ಸೇವೆ ನಡೆಯಿತು. ವರ್ಧಂತಿ ಪ್ರಯುಕ್ತ ವಿವಿಧ ಸೇವೆಗಳನ್ನು ನೀಡಿದ ಮಹನೀಯರನ್ನು ಗೌರವಿಸಲಾಯಿತು. ನೂರಾರು ಮಂದಿ ಭಕ್ತಾಧಿಗಳು ವರ್ಧಂತಿಯಲ್ಲಿ ಭಾಗವಹಿಸಿ ಪ್ರಸಾಧ ಸ್ವೀಕರಿಸಿದರು.
ಕ್ಷೇತ್ರದ ಆಡಳಿತ ಮಂಡಳಿಯ ಮುಖ್ಯಸ್ಥರು, ಭಕ್ತಾಧಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page