udupimitra.in
  • August 3, 2026
  • Last Update August 3, 2026 5:55 pm
  • Brahmavara

ನಾಡದಲ್ಲಿ ಕೋಳಿ ಅಂಕ ಜೂಜಾಟ; ಪೊಲೀಸರ ದಾಳಿ, ಇಬ್ಬರ ಬಂಧನ

ನಾಡದಲ್ಲಿ ಕೋಳಿ ಅಂಕ ಜೂಜಾಟ; ಪೊಲೀಸರ ದಾಳಿ, ಇಬ್ಬರ ಬಂಧನ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಗಂಗೊಳ್ಳಿ ಅ.೩ : ನಾಡಾ ಗ್ರಾಮದ ಕೋಣ್ಕಿಯ ನಂದ್ರೊಳ್ಳಿ ಎಂಬಲ್ಲಿ ಸಾರ್ವಜನಿಕ ಜಾಗದಲ್ಲಿ ಕಾನೂನುಬಾಹಿರವಾಗಿ ನಡೆಸಲಾಗುತ್ತಿದ್ದ ಕೋಳಿ ಅಂಕ (ಜುಗಾರಿ ಆಟ) ಅಡ್ಡೆ ಮೇಲೆ ಗಂಗೊಳ್ಳಿ ಪೊಲೀಸರು ದಿಢೀರ್ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅ.೨ರಂದು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಆಡಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿ ಪೊಲೀಸರು ದಾಳಿ ನಡೆಸಿದ್ದರು.
ಪೋಲಿಸರು ಸ್ಥಳಕ್ಕೆ ತಲುಪಿದಾಗ ಹಲವರು ಗುಂಪು ಸೇರಿ, ಕೋಳಿಗಳ ಕಾಲಿಗೆ ಚಾಕು (ಕೋಳಿಬಾಳು) ಕಟ್ಟಿ ಕಾದಾಟಕ್ಕೆ ಬಿಟ್ಟು, ಅದರ ಮೇಲೆ ಹಣದ ಪಣ ಕಟ್ಟುತ್ತಿರುವುದು ಕಂಡುಬಂದಿದೆ. ಪೋಲಿಸರನ್ನು ಕಾಣುತ್ತಿದ್ದಂತೆ ಹಲವರು ಕಾಲ್ಕಿತ್ತಿದ್ದು, ಸ್ಥಳದಲ್ಲಿದ್ದ
ಸುಧಾಕರ (೬೧), ಹಳಗೇರಿ, ಸುರೇಶ (೪೦) ಕಿರಿಮಜೇಶ್ವರ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ೧೦ಕೋಳಿ ಹುಂಜಗಳು, ೪ ಕೋಳಿ ಬಾಳು, ರೂ. ೨,೩೫೦ ನಗದು ಮೊತ್ತ, ೮ ಮೋಟಾರು ಸೈಕಲ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೋಳಿಗಳಿಗೆ ಸೂಕ್ತ ಆಹಾರ ಮತ್ತು ನೀರು ನೀಡದೆ, ಕಾಲಿಗೆ ಕತ್ತಿ ಕಟ್ಟಿ ಕ್ರೂರವಾಗಿ ಹಿಂಸಿಸಿ ಜೂಜಾಟಕ್ಕೆ ಬಳಸಿದ್ದಾರೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ ಕಲಂ ೧೧(೧)(ಚಿ) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ (ಏP ಂಅಖಿ) ಕಲಂ ೮೭, ೯೩ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page