ವರದಿ: ಚಿತ್ತೂರು ಪ್ರಭಾಕರ ಆಚಾರ್ಯ ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ಅ.2: ಚೇತನ್ ಕುಮಾರ್ ಶೆಟ್ಟಿಯವರು ನಿರಂತರವಾಗಿ ತನ್ನ ಮಗನ ಹೆಸರಲ್ಲಿ ಸಾಮಾಜಿಕ ಸೇವಾ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಮಗನ ಹೆಸರಲ್ಲಿ ಪ್ರಧಾನ ಸ್ಮಾರ್ಟ್ ಕೆಫೆ & ರೆಸ್ಟೋರೆಂಟ್ ಆರಂಭಿಸಿದ್ದು ಈ ಸಂಸ್ಥೆಯು ಅಭಿವೃಧ್ಧಿ ಕಾಣಲಿ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ನುಡಿದರು.
ಉಡುಪಿ ಬ್ರಹ್ಮಗಿರಿ ಸರ್ಕಲ್ ಟ್ರ್ಯೂವ್ಯಾಲ್ಯೂ ಎದುರು ನೂತನವಾಗಿ ಆರಂಭಿಸಿದ ಪ್ರಧಾನ ಸ್ಮಾರ್ಟ್ ಕೆಫೆ & ರೆಸ್ಟೋರೆಂಟ್ ಹಾಗೂ ನ್ಯೂ ಕರ್ನಾಟಕ ಬಿಲ್ಡರ‍್ಸ್ & ಡೆವಲಪರ‍್ಸ್ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ ನಗರದಾದ್ಯಂತ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ನಗರಸಭೆಯಲ್ಲಿ ಯಾವುದೇ ಕೆಲಸ ಆಗಬೇಕಿದ್ದರೂ ಜನರು ನೇರ ಸಂಪರ್ಕಿಸಬೇಕು. ದಲ್ಲಾಳಿಗಳ ಮೂಲಕ ಬರಬೇಕಾಗಿಲ್ಲ. ಚೇತನ್‌ಕುಮಾರ್ ಶೆಟ್ಟಿಯವರು ಪ್ರಧಾನ ಸ್ಮಾರ್ಟ್ ಕೆಫೆ & ರೆಸ್ಟೋರೆಂಟ್ ಬಿಲ್ಡಿಂಗ್‌ನ್ನು ಬಹಳ ಸುಂದರವಾಗಿ ನಿರ್ಮಿಸಿದ್ದು ಅದು ಯಶಸ್ಸು ಕಾಣಲಿ ಎಂದರು.

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ ಚೇತನ್‌ಕುಮಾರ್ ಶೆಟ್ಟಿಯವರು ಯಾವುದೇ ಕನಸನ್ನು ಕಂಡರೂ ಅದನ್ನು ಸಾಕಾರ ಮಾಡುತ್ತಾರೆ. ಅವರು ದುಡಿಮೆಯ ಲಾಭಾಂಶದಲ್ಲಿ ಹೆಚ್ಚಿನ ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಾ ಬಂದಿದ್ದಾರೆ. ತನ್ನ ಮಗನ ಹೆಸರಲ್ಲಿ ಸುಮಾರು ೨೨ ಲಕ್ಷ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬ್ಯಾರಿಕೇಡ್ ಒದಗಿಸಿದ್ದಾರೆ ಎಂದರು.
ಸಭೆಯನ್ನುದ್ದೇಶಿಸಿ ದಯಾನಂದ ಶೆಟ್ಟಿ ದೆಂದೂರುಕಟ್ಟೆ, ಹಾರಾಡಿ ರಾಮ್ ಶೆಟ್ಟಿಯವರು ಮಾತನಾಡಿದರು.

ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಹಾವಂಜೆ, ಬ್ರಹ್ಮಾವರ ಸ್ವಾತಿ ಹೋಟೆಲ್ ಮಾಲಕ ರಾಘವೇಂದ್ರ ಭಟ್, ದಯಾನಂದ ಶೆಟ್ಟಿ ಹೇರೂರು, ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ ಹಾಗೂ ಮಂಜುನಾಥ್ ಮಣಿಪಾಲ, ಬ್ರಹ್ಮಾವರ ಫೌಂಡೇಶನ್ ಸಂಚಾಲಕ ಗೋವಿಂದರಾಜ್ ಹೆಗ್ಡೆ ಬ್ರಹ್ಮಾವರ, ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಚಾರ್ಟೆಡ್ ಅಕೌಂಟೆಂಟ್ ಜೀವನ್ ಶೆಟ್ಟಿ ಹೇರೂರು, ಉಡುಪಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಮಾಜಿ ಅಧ್ಯಕ್ಷ ಎಸ್.ನಾರಾಯಣ ಇನ್ನಿತರರು ಉಪಸ್ಥಿರಿದ್ದು ಶುಭ ಹಾರೈಸಿದರು.
ಉಡುಪಿ ಶಾಸಕ ಯಶಪಾಲ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಇನ್ನಿತರ ಪ್ರಮುಖರು ಭೇಟಿ ಶುಭ ಹಾರೈಸಿದರು. ಪ್ರಧಾನ ಸ್ಮಾರ್ಟ್ ಕೆಫೆ & ರೆಸ್ಟೋರೆಂಟ್ ಹಾಗೂ ನ್ಯೂ ಕರ್ನಾಟಕ ಬಿಲ್ಡರ‍್ಸ್ ಮಾಲಕ ಚೇತನ್‌ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ದೀಪಾ ಸಿ.ಶೆಟ್ಟಿ ದಂಪತಿ ಸ್ವಾಗತಿಸಿಕೊಂಡು ವಂದಿಸಿದರು.



