ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು,ಡಿ.೮: ಶ್ರೀಮತಿ ಪ್ರದೀಕ್ಷಾ ಎನ್, ತಂತ್ರಾಡಿ ಅವರಿಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ೬೦ನೇ ವಾರ್ಷಿಕ ಘಟಿಕೋತ್ಸವದಂದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಜೈವಿಕ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗಿದೆ. “ವೈಟ್‌ಫೈಸ್ ಮತ್ತು ಅವರ ಪ್ರಕೃತಿಯ ಪರಿಸರದ ಆಣ್ವಿಕ ಮತ್ತು ಫೈಲೋಜೆನೆಟಿಕ್ಸ್ ವಿಶ್ಲೇಷಣೆ ಎಂಬ ವಿಷಯಕ್ಕಾಗಿ ಎಂಡೋಸಿಂಬ ಯಂಟ್‌ವೊಲ್ಚಾಚಿಯಾ ಪ್ರಬಂದ ಮಂಡಿಸಿದ್ದರು. ಇವರಿಗೆ ಪ್ರೊ.ಪುಟ್ಟರಾಜು ಇವರು ಮಾರ್ಗದರ್ಶನ ನೀಡಿದ್ದರು.

ಶ್ರೀಮತಿ ಪ್ರದೀಕ್ಷಾ ಎನ್. ಇವರು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ.ಶ್ರವಣ್ ಆಳ್ವ ಅವರ ಪತ್ನಿ. ಕುಂದಾಪುರ ತಾಲೂಕಿನ ಹೊಳ್ಮಗೆ ನವೀನಚಂದ್ರ ಶೆಟ್ಟಿ ಮತ್ತು ಸುಜಯ ಎನ್. ಶೆಟ್ಟಿ ದಂಪತಿಯ ಪುತ್ರಿ. ಮತ್ತು ಚೇರ್ಕಾಡಿ ದಿವಂಗತ ಗಣೇಶ್ ಶೆಟ್ಟಿ (ಗಣೇಶ್ ರಾಯರು) ಹಾಗೂ ಚಿತ್ತೂರು ದಿವಂಗತ ಶೀನಪ್ಪ ಶೆಟ್ಟಿಯವರ ಮೊಮ್ಮಗಳು.ಡಾ.ಬಿ.ಶಾಂತಾರಾಮ್ ಆಳ್ವ ಮತ್ತು ಕೆ.ಸರಳಾ ಎಸ್. ಆಳ್ವಾ ಅವರ ಸೊಸೆ.



