• March 26, 2026
  • Last Update March 24, 2026 3:28 pm
  • Brahmavara

ಸವಿಧನ್ ಶೆಟ್ಟಿಯವರಿಗೆ ಪಿ.ಎಚ್.ಡಿ.

ಸವಿಧನ್ ಶೆಟ್ಟಿಯವರಿಗೆ ಪಿ.ಎಚ್.ಡಿ.

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು,ಡಿ.೮: ನಿಟ್ಟೆ ಎನ್ ಎಂ.ಎ.ಎಂ.ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ಸವಿಧನ್ ಶೆಟ್ಟಿ ಸಿ.ಎಸ್. ಅವರಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್‌ನಿಂದ ಡಾಕ್ಟರೇಟ್ ಪದವಿಯನ್ನು 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗಿದೆ.


ಇವರು ಮಂಡಿಸಿದ ಎನ್.ಚಾನೆಲ್ ಮಾಡೆಲ್‌ಗಳು ಮತ್ತು ಕಾರ್ಯಕ್ಷಮತೆಯ ವಿಶ್ಲೇಷಣೆಯ ವೈವಿಧ್ಯತೆಯ ಪ್ರಸಾರ ಮತ್ತು ದೋಷ ನಿಯಂತ್ರಣ ಕೋಡಿಂಗ್ ಯೋಜನೆಗಳು ನೀರಿನ ಅಡಿಯಲ್ಲಿ ಲಂಬವಾದ ವೈರ್‌ಲೆಸ್ ಆಪ್ಟಿಕಲ್ ಸಂವಹನ ಲಿಂಕ್‌ಗಳು ಎಂಬ ವಿಷಯಕ್ಕೆ ಪ್ರೊ. ಯು. ಶ್ರೀಪತಿ ಆಚಾರ್ಯ ಅವರು ಮಾರ್ಗದರ್ಶನ ಪಡೆದು ಪ್ರಬಂಧ ಮಂಡಿಸಿದ್ದರು.
ಸವಿದನ್ ಶೆಟ್ಟಿಯವರು ಪಿಡಬ್ಲ್ಯೂಡಿ. ನಿವೃತ್ತ ಎಕ್ಸಿಕ್ಯೂಟಿವ್ ಇಂಜೀನಿಯರ್ ಮೇಪು ಶಶಿಧರ ಶೆಟ್ಟಿ ಮತ್ತು ಹೊಳ್ಮಗೆ ವಿಮಲಾ ಎಸ್. ಶೆಟ್ಟಿಯವರ ಪುತ್ರ. ಮತ್ತು ಚಿತ್ತೂರು ದಿವಂಗತ ಶೀನಪ್ಪ ಶೆಟ್ಟಿಯವರ ಮೊಮ್ಮಗ.

administrator

Related Articles

Leave a Reply

Your email address will not be published. Required fields are marked *

You cannot copy content of this page