• April 10, 2026
  • Last Update April 9, 2026 4:52 pm
  • Brahmavara

ಮಾರ್ಚ್ 19ರಂದು ಮಾರಣಕಟ್ಟೆಯಲ್ಲಿ ನಾಗ ಮಂಡಲ

ಮಾರ್ಚ್ 19ರಂದು ಮಾರಣಕಟ್ಟೆಯಲ್ಲಿ ನಾಗ ಮಂಡಲ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :

ಚಿತ್ತೂರು, ಫೆ.೧೬: ಮಾರಣಕಟ್ಟೆ ಎಮ್.ಎಸ್. ಶ್ರೀಧರ ಮಂಜ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಮತ್ತು ಅರ್ಚಕ ನಾಗರಾಜ ಮಂಜ ಸಹೋದರರು ಮಾರಣಕಟ್ಟೆಯಲ್ಲಿ ಅವರ ಮನೆ ಅನುಗ್ರಹ ವಠಾರದಲ್ಲಿ ಮಾರ್ಚ್ 19ರಂದು ಚತುಃಪವಿತ್ರ ನಾಗ ಮಂಡಲ ಹಮ್ಮಿಕೊಂಡಿದ್ದಾರೆ.


ನಾಗ ಮಂಡಲ ಪ್ರಯುಕ್ತ ಮಾರ್ಚ್ ೪ರಂದು ಉಗ್ರಾಣ ಮಹೂರ್ತ ನಡೆಯಲಿದ್ದು ಮಾರ್ಚ್ ೧೯ರಂದು ನಾಗ ಮಂಡಲ ನಡೆಯಲಿದೆ. ಅಂದು ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನ ಅನ್ನಸಂತರ್ಪಣೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಗಂಟೆ ೪.೦೦ಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಆಶೀರ್ವಚನ, ಸಂಜೆ ೭.೦೦ಕ್ಕೆ ಹಾಲ್ಹಿಟ್ಟು ಸೇವೆ, ರಾತ್ರಿ ೯.೦೦ರಿಂದ ಮಂಡಲ ಪೂಜೆ, ಡಮರು ಸೇವೆ, ನರ್ತನಸೇವೆ ಪ್ರಸಾದ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಊರಿನವರು ಸಹಕಾರ ನೀಡಬೇಕೆಂದು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕೋರಿಕೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page