ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಎ.೨೪: ಕಳಿಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ನೂತನ ಆಯುರ್ವೇದ ಔಷಧಿಗಳ ಮಳಿಗೆ ನಮ್ಮ ಅಂಗಡಿಯನ್ನು ಶೃಂಗೇರಿ ಪೀಠದ ಪರಮಪೂಜ್ಯ ಜಗದ್ಗುರು ವಿದುಶೇಖರ ಸ್ವಾಮೀಜಿಯವರು ಎ.24ರಂದು ಉದ್ಘಾಟಿಸಿ ಆಶೀರ್ವಚಿಸಿದರು.

ಈ ಸಂದರ್ಭ ಮಹಾಬಲ ಬಾಯರಿ ಹಾಗೂ ಶ್ರೀಮತಿ ಕಲಾವತಿ ಬಾಯರಿ ದಂಪತಿ ಗುರುಪಾದುಕಾ ಪೂಜೆ ನೆರವೇರಿಸಿದರು.
ಆಡಳಿತ ನಿರ್ದೇಶಕ ಡಾ.ರಾಜೇಶ್ ಬಾಯರಿ ಹಾಗೂ ಡಾ.ಅನುಲೇಖಾ ಬಾಯರಿ ದಂಪತಿ ಸ್ವಾಗತಿಸಿದರು.
ಈ ಸಂದರ್ಭ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಬಡಾಕೆರೆ ಲೋಕೇಶ್ ಅಡಿಗ, ಮಠದ ಶಿಷ್ಯವೃಂದದವರು, ಸ್ಥಳಿಯರು ಉಪಸ್ಥಿತರಿದ್ದರು.






