udupimitra.in
  • August 11, 2026
  • Last Update August 10, 2026 4:14 pm
  • Brahmavara

ಇಎಸ್‌ಐ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆದೇಶ

ಇಎಸ್‌ಐ ರೋಗಿಗಳಿಗೆ ತೊಂದರೆ ಮಾಡದೆ ಚಿಕಿತ್ಸೆ ನೀಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆದೇಶ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಉಡುಪಿ: ಕರ್ನಾಟಕ ರಾಜ್ಯದಲ್ಲಿ ನೊಂದಾಯಿತ ಖಾಸಗಿ ಆಸ್ಪತ್ರೆಗಳ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದ್ದ ಇಎಸ್‌ಐ ಚಿಕಿತ್ಸೆ ಇಲಾಖಾಧಿಕಾರಿಗಳ ಗೊಂದಲದ ನಿಲುವಿನಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಯಬೇಕೆಂಬ ಅಧಿಕಾರಿಗಳ ಸೂಚನೆಯಿಂದ ಹೃದಯಾಘಾತ, ಮೆದುಳು ಶಸ್ತ್ರ ಚಿಕಿತ್ಸೆ ಇನ್ನಿತರ ಗಂಭೀರ ಮತ್ತು ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗದ ಘಟನೆ ನಿರ್ಮಾಣವಾಗಿ ಚಿಕಿತ್ಸೆ ನಿರತ ವೈದ್ಯಾಧಿಕಾರಿಗಳು ಆತಂಕ ಸ್ಥಿತಿಯಲ್ಲಿದ್ದರೆ ಮಾರಣಾಂತಿಕ ತುರ್ತು ಪರಿಸ್ಥಿತಿಯಲ್ಲಿ ವಿಡಿಯೋ ಕರೆಗೆ ಪ್ರತಿಕ್ರಿಯೆ ನೀಡಲಾಗದ ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.


ಈ ವಿಷಯದಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ಗೊಂದಲ ಪರಿಹರಿಸಿ ಇಎಸ್‌ಐ ಫಲಾನುಭವಿಗಳ ನೆರವಿಗೆ ಬರಬೇಕೆಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಮಿಕ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಮಾಡಿದರು.
ವಾರಾಂತ್ಯದಲ್ಲಿ ಬರುವ ರಜಾ ದಿನಗಳು, ತುರ್ತು ರಾತ್ರಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಇಎಸ್‌ಐ ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯವಿಲ್ಲದ ಕಾರಣ ರೋಗಿಗಳು ಪರದಾಡುವಂತಾಗಿದೆ. IಅUನಲ್ಲಿ ದಾಖಲಾದ ಮತ್ತು ಆಪರೇಷನ್ ಥಿಯೇಟರ್ ನಲ್ಲಿ ಇರುವ ಗಂಭೀರ ರೋಗಿಗಳು ಗಿಅಯಲ್ಲಿ ಭಾಗವಹಿಸಲಾಗುತ್ತಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿಂದ ವಿಡಿಯೋ ಕರೆ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯ ಮಣಿಪಾಲದ ಕೆಎಂಸಿ ಮತ್ತು ಆದರ್ಶ ದಂತಹ ಆಸ್ಪತ್ರೆಗಳು ಸಹ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟಪಡುತ್ತಿವೆ.
ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ ಸಂಸದ, ಶಾಸಕರು ಮಾತನಾಡಿದರೂ ಇಲಾಖೆ ಸರಿಯಾಗಿ ಸ್ಪಂದಿಸದೆ ಸಮಸ್ಯೆ ಉಂಟಾಗಿದೆಯೆಂದು ಸಂಸದ ಕೋಟ ಸಚಿವರ ಗಮನಕ್ಕೆ ತಂದರು. ತಕ್ಷಣ ಪ್ರತಿಕ್ರಿಸಿದ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸರ್ಕಾರದ ಇಎಸ್‌ಐ ಡೈರೆಕ್ಟರ್ ಜನರಲ್ ಅಶೋಕ್ ಕುಮಾರ್ ಸಿಂಗ್ ರವರಿಗೆ ನಿರ್ದೇಶನ ನೀಡಿ ಇಎಸ್‌ಐ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಯಾವುದೇ ತೊಂದರೆ ಮಾಡದೆ ಇಎಸ್‌ಐ ಅನುಷ್ಠಾನ ಮಾಡಲು ಆದೇಶಿಸಿದರು. ಯಾವುದೇ ಅಧಿಕಾರಿ ಕಾರಣವಿಲ್ಲದೆ ಗೊಂದಲ ಮಾಡಿದರೆ ಸೂಕ್ತ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ್ದಾರೆ.

ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆಗೆ ಕ್ಷೇತ್ರದ ಜನತೆಯ ಪರವಾಗಿ ಸಂಸದ ಕೋಟ ಕೃತಜ್ಞತೆ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *

You cannot copy content of this page