udupimitra.in
  • August 11, 2026
  • Last Update August 10, 2026 4:14 pm
  • Brahmavara

ಕರಾವಳಿಯಲ್ಲಿ ಮಠ ನಿರ್ಮಾಗೊಂಡಿದ್ದರಿಂದ ಮಠ ಎತ್ತರಕ್ಕೆ ಬೆಳೆದಿದೆ – ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ

ಕರಾವಳಿಯಲ್ಲಿ ಮಠ ನಿರ್ಮಾಗೊಂಡಿದ್ದರಿಂದ ಮಠ ಎತ್ತರಕ್ಕೆ ಬೆಳೆದಿದೆ – ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ

ವರದಿ: ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕಾಪು, ಅ.೯:
ಆನೆಗುಂದಿಯಲ್ಲೇ ಮಠ ನಿರ್ಮಾಣಗೊಂಡಿದ್ದರೆ ಇಂದು ಮಠ ಇಷ್ಟು ಎತ್ತರಕ್ಕೆ ಬೆಳೆಯುತ್ತಿಲ್ಲ. ಕರಾವಳಿಯಲ್ಲಿ ನಿರ್ಮಾಣಗೊಂಡಿದ್ದರಿಂದ ಇಲ್ಲಿನ ಜನರ ಬದ್ಧತೆ, ಕೊಡುಗೆಯಿಂದ ಈ ಮಠ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ-ಪಡುಕುತ್ಯಾರು ಇಲ್ಲಿನ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.


ಅವರು ಅ.೯ರಂದು ಮಠದಲ್ಲಿ ನಡೆದ ಜಗದ್ಗುರುಗಳವರ ಜನ್ಮವರ್ಧಂತಿ ಮಹೋತ್ಸವ ಹಾಗೂ ಪಾದುಕಾ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಠದಿಂದ ಸಮಾಜಕ್ಕೆ ಏನು ಪ್ರಯೋಜನ ಇದೆ ಎಂದು ಪ್ರಶ್ನಿಸುವವರಿಗೆ ಮಠದಲ್ಲಿರುವ 120 ಮಕ್ಕಳನ್ನು ನೋಡಿದಾಗ ಮಠದಿಂದ ಸಮಾಜಕ್ಕೆ ಯಾವ ಕೊಡುಗೆ ಸಲ್ಲಿಕೆಯಾಗುತ್ತಿದೆ ಎಂಬುದು ಅರ್ಥವಾಗಬಹುದು. ಮಠಕ್ಕೆ ಬಂದ ಅದೆಷ್ಟೋ ಮಕ್ಕಳು ಅಧ್ಯಯನ ಮಾಡಿ ಇಂದು ಎಷ್ಟೋ ಎತ್ತರಕ್ಕೆ ಬೆಳೆದಿದ್ದಾರೆ. ಸಮಾಜದ ಭವಿಷ್ಯದ ನಿರ್ಮಾಣ ಮಾಡುವ ಕೆಲಸವನ್ನು ಮಠ ಮಾಡುತ್ತಿದೆ. ಇದು ಗುರುಪೀಠದ ಸಾರ್ಥಕ ಹೆಜ್ಜೆಯಾಗಿದೆ. ದಕ್ಷಿಣ ಭಾರತದ ೪ ರಾಜ್ಯಗಳ ಮಕ್ಕಳು ಮಠದಲ್ಲಿದ್ದು ಅಧ್ಯಯನ ಮಾಡುತ್ತಿದ್ದಾರೆ. ಮಠ ಇಂದು ಅಂತರ್‌ರಾಜ್ಯ ಮಟ್ಟದಲ್ಲಿ ವಿಸ್ತಾರವಾಗಿ ಬೆಳೆದಿದೆ ಎಂದರು.


ರಾಜಕೀಯವಾಗಿಯೂ ಕೆಲವು ವ್ಯಕ್ತಿಗಳನ್ನು ಬೆಳೆಸಬೇಕೆಂಬ ಭಿನ್ನಹ ಮಠಕ್ಕೆ ಬಂದಿದೆ. ಆದರೆ ಮಠವು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಿದೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.


ಆಸ್ಥಾನ ವಿದ್ವಾಂಸ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ ಹುಬ್ಬಳ್ಳಿ ಸಂದೇಶ ನೀಡಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಪಂಚಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿಯ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ರವಿ ಆಚಾರ್ಯ ಕಾರ್ಕಳ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಗಜಾನನ ಎನ್. ಆಚಾರ್ಯ ನೀರಕಂಠ ಶಿರಾಲಿ, ಗಣೇಶ್ ಆಚಾರ್ಯ ಕಾಪು, ಬಿ.ಎಂ. ಯದುನಂದನ ಆಚಾರ್ಯ, ಜನಾರ್ದನ ಆಚಾರ್ಯ ಆರಿಕ್ಕಾಡಿ, ಜಗದೀಶ್ ಆಚಾರ್ಯ ಪಡುಪಣಂಬೂರು, ಎಂ. ಪುರುಷೋತ್ತಮ ಆಚಾರ್ಯ ಕಂಬಾರು, ಸಿ.ಎ. ಶ್ರೀಧರ ಆಚಾರ್ಯ, ಹರೀಶ್ಚಂದ್ರ ಎನ್. ಆಚಾರ್ಯ, ಬಿ. ಸೂರ್ಯಕುಮಾರ್ ಆಚಾರ್ಯ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಂದರ ಆಚಾರ್ಯ, ಕೆ.ಎಂ. ಗಂಗಾಧರ ಆಚಾರ್ಯ, ಶಿಲ್ಪಿ ಸುರೇಶ್ ಆಚಾರ್ಯ ಹೊಸಪೇಟೆ, ಮುರಹರಿ ಆಚಾರ್ಯ ಕಟಪಾಡಿ, ಸುಧಾಕರ ಆಚಾರ್ಯ ತ್ರಾಸಿ, ನಾಗರಾಜ ಆಚಾರ್ಯ ಕಾಡಬೆಟ್ಟು, ಸುಂದರ ಆಚಾರ್ಯ ಬೆಳುವಾಯಿ, ರಮಾ ನವೀನ್ ಆಚಾರ್ಯ, ಕೇಶವ ಆಚಾರ್ಯ ಮಂಗಳೂರು, ಸುಬೇದಾರ್ ವೈ.ಧಮೇಂದ್ರ ಆಚಾರ್ಯ, ಲೋಲಾಕ್ಷ ಶರ್ಮಾ, ಗುರುರಾಜ್ ಆಚಾರ್ಯ ಮಂಗಳೂರು, ಚಂದ್ರಯ್ಯ ಆಚಾರ್ಯ ಕಳಿ ಹಾಗೂ ಇನ್ನಿತರರು ಭಾಗವಹಿಸಿದ್ದರು.


ಗುರುಗಳ ಜನ್ಮವರ್ಧಂತಿ ಮಹೋತ್ಸವ ಪ್ರಯುಕ್ತ ವಿಶೇಷ ಯಜ್ಞಯಾಗಾದಿಗಳು, ರಜತ ಪೀಠ ಸಮರ್ಪಣೆ, ಜಗದ್ಗುರುಗಳ ತುಲಾಭಾರ ಸೇವೆ, ಕನಕಧಾರಾ ಸ್ತೋತ್ರ ಹೋಮ, ಶ್ರೀ ಲಕ್ಷ್ಮೀ ನಾರಾಯಣ ಹೃದಯ ಹೋಮ, ಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣ ಕಾರ್ಯಕ್ರಮಗಳು ನಡೆದವು. ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಬ್ರಹ್ಮಶ್ರೀ ಶ್ರೀಧರ ಶರ್ಮ ಕಟಪಾಡಿ, ಲಕ್ಷ್ಮೀಕಾಂತ ಶರ್ಮಾ ಸಾಲಿಗ್ರಾಮ ಹಾಗೂ ಬ್ರಹ್ಮಶ್ರೀ ಅಕ್ಷಯ ಶರ್ಮ ಕಟಪಾಡಿ ವಹಿಸಿದ್ದು ಮಠದ ವಿದ್ಯಾರ್ಥಿಗಳು ಸಹಕರಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page