• June 2, 2026
  • Last Update June 1, 2026 5:18 pm
  • Brahmavara

ಉಡುಪಿ ವಿ.ಪಿ. ಬಿಲ್ಡರ‍್ಸ್ ರೆಡ್ ಸ್ಟೋನ್ ಎನ್‌ಕ್ಲೇವ್ ಉದ್ಘಾಟನೆ

ಉಡುಪಿ ವಿ.ಪಿ. ಬಿಲ್ಡರ‍್ಸ್ ರೆಡ್ ಸ್ಟೋನ್ ಎನ್‌ಕ್ಲೇವ್ ಉದ್ಘಾಟನೆ

ವರದಿ: ಚಿತ್ತುರು ಪ್ರಬಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಉಡುಪಿ, ಮೇ.೩೦: ವಿ.ಪಿ.ಬಿಲ್ಡರ‍್ಸ್ ಮೂಲಕ ನಾವು ನಿರ್ಮಿಸುತ್ತಿರುವ ಎಲ್ಲಾ ವಸತಿ ಸಮುಚ್ಚಯಗಳ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾ ಬಂದಿದ್ದೇವೆ. ನಾವು ಗ್ರಾಹಕ ಸ್ನೇಹಿಯಾಗಿಯೇ ಮುಂದುವರಿದು ಬಂದಿದ್ದೇವೆ. ನಾವು ನಿರ್ಮಿಸುವ ಮನೆಗಳ ಗುಣಮಟ್ಟ ನೋಡಿ ನಮ್ಮಿಂದ ಮನೆಗಳನ್ನು ಖರೀದಿಸುವ ಗ್ರಾಹಕರೇ ಮತ್ತೆ ಮತ್ತೆ ಗ್ರಾಹಕರನ್ನು ನಮಗೆ ಒದಗಿಸುತ್ತಿರುವುದೇ ನಮ್ಮ ಬಿಲ್ಡರ್‌ನ ಗುಣಮಟ್ಟಕ್ಕೆ ಸಾಕ್ಷಿ ಎಂದು ವಿ.ಪಿ.ಬಿಲ್ಡರ್ಸ್ ಮಾಲಕ ಕರಂಬಳ್ಳಿ ವಿಶ್ವನಾಥ ಆಚಾರ್ ನುಡಿದರು. ಅವರು ಉಡುಪಿ ಕರಾವಳಿ ಜಂಕ್ಷನ್ ಸಮೀಪ ನಿರ್ಮಿಸಿದ್ದ ರೆಡ್ ಸ್ಟೋನ್ ಎನ್‌ಕ್ಲೇವ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕೆಲಸಗಾರರೊಂದಿಗೆ ನಿಷ್ಟೆಯಿಂದ ನಡೆದುಕೊಂಡು ಬಂದಿರುವ ನಾವು ಪ್ರತಿ ವಾರ ಅವರಿಗೆ ತಲುಪಿಸಬೇಕಾದ ಸಂಭಾವನೆಯ ಮೊತ್ತವನ್ನು ತಪ್ಪದೆ ಪಾವತಿಸುತ್ತಾ ಬಂದಿದ್ದೇವೆ. ಮುಂದೆ ಜನರಿಗೆ ಒಳ್ಳೆಯ ರೀತಿಯಲ್ಲಿ ರಿಯಾಯಿತಿ ದರದಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಸಂಕಲ್ಪವಿದ್ದು ಮುಂದೆಯೂ ಒಳ್ಳೆಯ ಕಟ್ಟಡಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಲಿದ್ದೇವೆ ಎಂದರು.
ಶ್ರೀಮತಿ ಗೀತಾ ಆಚಾರ್ಯ, ಶ್ರೀಮತಿ ಶೈಲಾ, ಚೈತ್ರ ಹೇಮಂತ್, ಪ್ರಮೀಳಾ ಕೇಶವ್, ವಿಜಯಲಕ್ಷ್ಮೀ ಮಧು ದೀಪ ಬೆಳಗಿಸಿದರು.


ಹೇಮಂತ್ ಕೆ.ಯು. ಮಾತನಾಡಿ ವಿಶ್ವನಾಥ ಆಚಾರ್ ಅವರ ಸಂಪರ್ಕವಾದ ನಂತರ ಅವರ ಬದ್ಧತೆ ನೋಡಿ ಅವರೊಂದಿಗೆ ವ್ಯವಹಾರ ಆರಂಭಿಸಿದ್ದೇವೆ. ಅವರು ನಂಬಿಗಸ್ಥರಾಗಿದ್ದು ಕ್ಲಪ್ತ ಸಮಯಕ್ಕೆ ಗುಣಮಟ್ಟದ ಬಿಲ್ಡಿಂಗ್ ನಿರ್ಮಿಸಿದ್ದಾರೆಂದು ಹೇಳಿ ಶುಭ ಹಾರೈಸಿದರು.
ರೆಡ್ ಸ್ಟೋನ್ ವಸತಿ ಸಮುಚ್ಚಯವನ್ನು ಜಾಗದ ಮಾಲಕರಾದ ಗೀತಾ ಶೆಟ್ಟಿಗಾರ್ ಉದ್ಘಾಟಿಸಿದರು. ಲೆಕ್ಕಪರಿಶೋಧಕ ಪ್ರಶಾಂತ್ ಹೊಳ್ಳ ಲಿಫ್ಟ್ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕ್ ಮಂಗಳೂರಿನ ಪ್ರಧಾನ ಕಚೇರಿಯ ಮ್ಯಾನೇಜರ್ ಗೋಪಾಲಕೃಷ್ಣ ಎಂ. ಜಿಮ್ ವಿಭಾಗವನ್ನು, ನ್ಯಾಯವಾದಿ ಲಕ್ಷ್ಮಣ ಶೆಣೈ ಯೋಗ ಕೊಠಡಿಯನ್ನು, ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ ಜನರೇಟರ್‌ನ್ನು, ಡೈನೆಟೆಕ್ ಟೂಲ್ಸ್ & ಡಿವೈಸಸ್ ಪ್ರೈ.ಲಿ. ಮಾಲಕ ಬಿ. ದಾಮೋದರ್ ಪಾರ್ಟಿ ಹಾಲ್ ಉದ್ಘಾಟಿಸಿದರು.


ಕೆ.ಎಮ್.ಎಂಟರ್ ಪ್ರೈಸಸ್ ನ ಕಿಶೋರ್ ಮಯ್ಯ, ಸ್ಥಳದ ಮಾಲಕ ಹೇಮಂತ್ ಕೆ.ಯು., ಶ್ರೀಮತಿ ಗೀತಾ ಆಚಾರ್, ಪ್ರಸಾದ್ ಆಚಾರ್, ಸಂಸ್ಥೆಯ ಪ್ರವರ್ತಕರಾದ ಕೆ.ವಿಶ್ವನಾಥ ಆಚಾರ್ಯ ಹಾಗೂ ಕೆ. ಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.


ಸಿಎ ಪ್ರಶಾಂತ್ ಹೊಳ್ಳ ಮಾತನಾಡಿ ಈಗಿನ ಕಾನೂನಿನ ಪ್ರಕಾರ ೩ ವರ್ಷದೊಳಗೆ ಕಟ್ಟಡ ಮುಗಿಸಬೇಕು. ವಿಶ್ವನಾಥ ಅಚಾರ್ ಹಾಗೂ ಅವರ ಮಗ ಪ್ರಸಾದ್ ಆಚಾರ್ ನಿಗದಿತ ಸಮಯಕ್ಕಿಂತ ಮೊದಲೇ ಕಟ್ಟಡ ಉದ್ಘಾಟಿಸಿದ್ದಾರೆ ಎಂದರು. ಶ್ರೀಧರ ಆಚಾರ್ಯರು ಮಾತನಾಡುತ್ತಾ ವಿಶ್ವನಾಥ ಆಚಾರ್ಯರು ಗುಣಮಟ್ಟದ ಸಮುಚ್ಚಯಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ ಎಂದರು. ಲಕ್ಷ್ಮಣ ಶೆಣೈ ಮಾತನಾಡಿ ವಿಶ್ವನಾಥ ಆಚಾರ್ ಅವರು ಕಾರ್ಮಿಕ ವರ್ಗದ ಸ್ನೇಹಿಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದು ಅವರ ಎಲ್ಲಾ ಪ್ರಾಜೆಕ್ಟ್‌ನ್ನು ನಿಗದಿತ ಸಮಯಕ್ಕೆ ಮುಗಿಸುತ್ತಾ ಬಂದಿದ್ದಾರೆ. ಸಭೆಯಲ್ಲಿ ಹೇಮಂತ್ ಕೆ.ವಿ ಹಾಗೂ ಚೈತ್ರ ಕೆ.ವಿ ದಂಪತಿಯನ್ನು ಸನ್ಮಾನಿಸಲಾಯಿತು.


ವಿ.ಪಿ ಬಿಲ್ಡರ‍್ಸ್ ಕೆಲಸಗಾರರಾದ ನಾಗೇಶ್, ಇಲೆಕ್ಟ್ರಿಷಿಯನ್ ಜಯಕರ, ಪ್ಲಂಬಿಂಗ್ ವಾಸು, ಪೇಯ್ಟಂಗ್ ಉಮೇಶ್ ಪೂಜಾರಿ, ಟೈಲ್ಸ್ ವರ್ಕ್‌ನ ರಮೇಶ್, ಮರ ಕೆಲಸದ ಮೋಹನ್ ಆಚಾರ್ಯ, ಪಾಲಿಶ್ ಕೆಲಸ ಮಾಡಿರುವ ಪ್ರಕಾಶ್ ಗುಂಡಿಬೈಲು, ಚಾಲಕ ಸಂತೋಷ್, ಗಾರೆ ಕೆಲಸ ಮಾಡಿದ ಮೆಹಬೂಬ್, ಸೆಂಟ್ರಿಕ್ ಕೆಲಸ ಮಾಡಿದ ರಾಜೇಶ್, ರೂಫ್ ವರ್ಕ್ ಮಾಡಿದ ಮಧುಕರ್, ಕಚೇರಿ ಸಿಬ್ಬಂದಿ ಭವ್ಯ, ವಿಕ್ಷಿತ್, ಮೇಸ್ತ್ರಿ ಮಲ್ಲಪ್ಪರಿಗೆ ಚೆಕ್ ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ಪ್ರವೀಣ್ ನೆಲ್ಲಿಕಟ್ಟೆ ನಿರೂಪಿಸಿ ವಂದಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page