ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಚಿತ್ತೂರು, ಮೇ.೨೯: ಯಾವುದೇ ಯಕ್ಷಗಾನ ಮೇಳದ ಕಲಾವಿದರು ಹೊಸ ಪ್ರಸಂಗಗಳಿಗೆ ಸರಿಯಾದ ತಂಡವಾಗಿ, ಚರ್ಚಿಸಿ ಜೀವ ತುಂಬಿ ಅಭಿನಯಿಸಿದಾಗ ಆ ಪ್ರಸಂಗ ಯಶಸ್ವಿಯಾಗಲಿದೆ ಎಂಬುದಕ್ಕೆ ಈ ಬಾರಿಯ ಹಾಲಾಡಿ ಮೇಳದ ಪಂಜರ ಪಕ್ಷಿ ಯಕ್ಷಗಾನ ಪ್ರಸಂಗ ಸಾಕ್ಷಿ ಎಂದು ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ನುಡಿದರು. ಅವರು ಮಾರಣಕಟ್ಟೆ ಎಂ.ಎಸ್.ನಾಗರಾಜ ಮಂಜರ ಮನೆ ಸೌಪರ್ಣಿಕ ವಠಾರದಲ್ಲಿ ನಡೆದ ಹಾಲಾಡಿ ಮೇಳದ ಯಕ್ಷಗಾನ ಪ್ರದರ್ಶನದ ಸಂದರ್ಭ ಮೂವರು ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು.

ಕಲಾವಿದರು ನಿರಂತರ ಅಧ್ಯಯನ ಶೀಲರಾದಾಗ ಅವರಿಗೆ ಕಲಾ ಜೀವನದಲ್ಲಿ ಯಶಸ್ಸು ದೊರಕಲಿದೆ ಎಂದರು.
ವೇದಿಕೆಯಲ್ಲಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಎಂ.ಎಸ್.ಶ್ರೀಧರ ಮಂಜ, ಎಂ.ಎಸ್.ನಾಗರಾಜ ಮಂಜ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ನಿರಾಮಯ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಪೆರ್ಡೂರು ಮೇಳದ ಯಕ್ಷಗಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಉಪಸ್ಥಿತರಿದ್ದರು.
ಹಾಲಾಡಿ ಮೇಳದ ಹಾಸ್ಯ ಕಲಾವಿದರಾದ ಉಳ್ಳೂರು ಶಂಕರ ನಾಯ್ಕ್, ಬಸವ ಪೂಜಾರಿ ಚೌಕುಳಮಕ್ಕಿ ಹಾಗೂ ಸ್ತ್ರೀ ಪಾತ್ರಧಾರಿ ಸುಧೀರ್ ಉಪ್ಪೂರು ಅವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಮೂವರು ಸನ್ಮಾನಿತರು ಮಾತನಾಡಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಸಹೋದರರು ಯಕ್ಷಗಾನ ಕಲಾವಿದರ ಯೋಗ ಕ್ಷೇಮ ವಿಚಾರಿಸುತ್ತಾ ತಮ್ಮಿಂದಾದ ಸಹಕಾರ ನೀಡುತ್ತಾ ಬಂದಿದ್ದು ಅವರಿಗೆ ನಾವು ಕೃತಜ್ಞತೆ ಅರ್ಪಿಸಿಕೊಳ್ಳುತ್ತೇವೆ ಎಂದರು.
ಎಂ.ಎಸ್. ಶ್ರೀಧರ ಮಂಜ ಸ್ವಾಗತಿಸಿದ್ದು, ಎಂ.ಎಸ್.ನಾಗರಾಜ ಮಂಜ ವಂದಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ನಂತರ ‘ಪಂಜರ ಪಕ್ಷಿ’ ಯಕ್ಷಗಾನ ಪ್ರದರ್ಶನಗೊಂಡಿತು. ಯಕ್ಷಗಾನ ವೀಕ್ಷಿಸಲು ಸುಮಾರು 2,5೦೦ಕ್ಕೂ ಮಿಕ್ಕಿ ಪ್ರೇಕ್ಷಕರು ಸೇರಿದ್ದು ಕಂಡುಬಂತು.



