• May 10, 2026
  • Last Update May 7, 2026 4:06 pm
  • Brahmavara

ನಿಧನ : ಯಕ್ಷಗಾನ ಕಲಾವಿದ ಕೊಗ್ಗ ಆಚಾರ್ಯ

ನಿಧನ : ಯಕ್ಷಗಾನ ಕಲಾವಿದ ಕೊಗ್ಗ ಆಚಾರ್ಯ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕೊಲ್ಲೂರು, ಜ. ೧೦: ಹಿರಿಯ ಯಕ್ಷಗಾನ ಚಂಡೆ ವಾದಕ ಕೊಲ್ಲೂರು ಕೊಗ್ಗ ಆಚಾರ್ಯ (೮೦) ಜ.೭ ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.


ಯಕ್ಷಗಾನ ಮೇಳಗಳಲ್ಲಿ ೪೦ ವರ್ಷಗಳ ಕಾಲ ಚಂಡೆವಾದರಾಗಿರುವ ಅವರು ಕಮಲಶಿಲೆ, ಸೌಕೂರು, ಅಮೃತೇಶ್ವರಿ, ಮಾರಣಕಟ್ಟೆ, ಇಡಗುಂಜಿ, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಂಗಸ್ಥಳ ಯಕ್ಷಮಿತ್ರ ಕೂಟದ ರಂಗಸ್ಥಳ ಪ್ರಶಸ್ತಿ, ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ೨೦೨೨ನೇ ಸಾಲಿನ ಯಕ್ಷಸಿರಿ ಪ್ರಶಸ್ತಿ ಸೇರಿದಂತೆ ನಾನಾ ಕಡೆಗಳಲ್ಲಿ ಇವರನ್ನು ಗೌರವಿಸಲಾಗಿದೆ.

administrator

Related Articles

Leave a Reply

Your email address will not be published. Required fields are marked *

You cannot copy content of this page