udupimitra.in
  • July 21, 2026
  • Last Update July 20, 2026 4:42 pm
  • Brahmavara

ಬ್ರಹ್ಮಾವರ ಮಹಾಲಿಂಗೇಶ್ವರನಿಗೆ ಬೊಂಡಾಭಿಷೇಕ

ಬ್ರಹ್ಮಾವರ ಮಹಾಲಿಂಗೇಶ್ವರನಿಗೆ ಬೊಂಡಾಭಿಷೇಕ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಜು.೨೦: ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಜು.20ರಂದು ಬೊಂಡಾಭಿಷೇಕ (ಸೀಯಾಳ ಅಭಿಷೇಕ) ನಡೆಯಿತು.


ಪುರೋಹಿತರಾದ ಬೈಕಾಡಿ ರಮೇಶ್ ಅಡಿಗ ಪ್ರಾರ್ಥನೆ ನೆರವೇರಿಸುತ್ತಾ ಉತ್ತಮ ಮಳೆ, ಬೆಳೆಯಿಂದ ಲೋಕಕ್ಕೆ ಒಳಿತಾಗುವುದರೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಶೀಘ್ರ ನೆರವೇರುವಂತೆ ಪ್ರಾರ್ಥಿಸಿದರು..

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋವಿಂದರಾಜ್ ಹೆಗ್ಡೆ, ಪದ್ಮನಾಭ ವಾರಂಬಳ್ಳಿ (ಯಜಮಾನ ವಾರಂಬಳ್ಳಿ) ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯ ನಾಯರಿ, ಪದ್ಮನಾಭ ಕಾಂಚನ್, ಶೇಖರ ದೇವಾಡಿಗ, ಉಮೇಶ್ ಪೂಜಾರಿ, ಶ್ರೀಮತಿ ಇಂದಿರಾವತಿ, ಶ್ರೀಮತಿ ಸರಸ್ವತಿ ನಾಯ್ಕ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ವಿಶ್ವನಾಥ ಶೆಟ್ಟಿ ಮಟಪಾಡಿ ಹಾಗೂ ಸೂರ್ಯನಾರಾಯಣ ಗಾಣಿಗ, ಅರ್ಚಕರಾದ ಅನಂತಪದ್ಮನಾಭ ಭಟ್, ಪಶು ವೈದ್ಯ ರವೀಂದ್ರ ಹೆಬ್ಬಾರ್ ಚಾಂತಾರು,ಅಶೋಕ್ ಭಟ್ ಚಾಂತಾರು, ಶ್ರೀರಾಮ್ ಬಿಲ್ಡಿಂಗ್ ಮಾಲಕ ರಾಮಕೃಷ್ಣ ಶೆಟ್ಟಿ, ಕಂದಾಯ ಪರಿವೀಕ್ಷಕ ರಾಜು, ದಯಾನಂದ ಶೆಟ್ಟಿ ಹಾರಾಡಿ, ಹರೀಶ್, ನಿರಂಜನ್ ಶೆಟ್ಟಿ, ಅಶೋಕ್ ಶೆಟ್ಟಿ ಸಾಲಿಕೇರಿ, ವಿಠಲದಾಸ್ ಕಿಣಿ, ಅರ್ಚಕ ವೃಂದ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page