udupimitra.in
  • June 24, 2026
  • Last Update June 23, 2026 5:23 pm
  • Brahmavara

ಮಾರಣಕಟ್ಟೆ ನಾಗಮಂಡಲ; ಉಗ್ರಾಣ ಮಹೂರ್ತ

ಮಾರಣಕಟ್ಟೆ ನಾಗಮಂಡಲ; ಉಗ್ರಾಣ ಮಹೂರ್ತ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ದಿ :

ವಂಡ್ಸೆ, ಮಾ.4 : ಮಾರಣಕಟ್ಟೆ ಎಮ್.ಎಸ್. ಶ್ರೀಧರ ಮಂಜ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಎಂ.ಎಸ್.ನಾಗರಾಜ ಮಂಜ ಸಹೋದರರು ಮಾರ್ಚ್ ೧೯ರಂದು ನಡೆಸಲುದ್ದೇಶಿಸಿದ ಚತುಃಪವಿತ್ರ ನಾಗ ಮಂಡಲದ ಪೂರ್ವಭಾವಿಯಾಗಿ ಮಾ.4 ರಂದು ಮಂಜರ ಮನೆಯ ಅನುಗ್ರಹ ವಠಾರದಲ್ಲಿ ಉಗ್ರಾಣ ಮಹೂರ್ತ ನಡೆಯಿತು. ಈ ಸಂದರ್ಭ ಸೇವಾಕರ್ತರಾದ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಎಂ.ಎಸ್.ಶ್ರೀಧರ ಮಂಜ, ಶ್ರೀಮತಿ ಶೈಲಾ ಮತ್ತು ಎಂ.ಎಸ್.ನಾಗರಾಜ ಮಂಜ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ನಾರಾಯಣ ಮಂಜ, ವಿಘ್ನೇಶ್ವರ ಮಂಜ, ಶಂಕರ ಮಂಜ, ಮಹೇಶ್ ಮಂಜ, ಗಣೇಶ್ ಉಡುಪ, ಊರಿನ ಪ್ರಮುಖರಾದ ಡಾ.ಅತುಲ್‌ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ನಿವೃತ್ತ ಪ್ರಾಧ್ಯಾಪಕ ರಘುರಾಮ ಶೆಟ್ಟಿ ಊರ್‌ಬೈಲು, ಇಡೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ರವೀಂದ್ರ ಶೆಟ್ಟಿ, ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಆಚಾರ್ಯ, ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಗುತ್ತಿಗೆದಾರ ಸೀತಾರಾಮ ಮಡಿವಾಳ, ಆನಂದ ಹಾರ್ಡ್‌ವೇರ್ ಮಾಲಕ ಅನಿಲ್‌ಕುಮಾರ್ ಶೆಟ್ಟಿ, ಮಂಜರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಪುರೋಹಿತರಾದ ನೆಂಪು ನರಸಿಂಹ ಭಟ್, ಹರವರಿ ದಿನಕರ ಉಡುಪ ಹಾಗೂ ಅರ್ಚಕ ವೃಂದದವರು ಪೂಜಾ ವಿಧಿ ನೆರವೇರಿಸಿದರು.

administrator

Related Articles

Leave a Reply

Your email address will not be published. Required fields are marked *

You cannot copy content of this page