• March 26, 2026
  • Last Update March 24, 2026 3:28 pm
  • Brahmavara

ಬೆಣ್ಣೆಕುದ್ರು ದೇವಸ್ಥಾನದ ಹೊರೆಕಾಣಿಕೆಗೆ ನಾಡೋಜ ಜಿ.ಶಂಕರ್ ಚಾಲನೆ

ಬೆಣ್ಣೆಕುದ್ರು ದೇವಸ್ಥಾನದ ಹೊರೆಕಾಣಿಕೆಗೆ ನಾಡೋಜ ಜಿ.ಶಂಕರ್ ಚಾಲನೆ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಬ್ರಹ್ಮಾವರ, ಡಿ.೧೫ : ಬಾರಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಡಿ.೧೫ ರಿಂದ ೧೯ ವರೆಗೆ ನಡೆಯಲಿದ್ದು ಡಿ.೧೫ರಂದು ಹೊರೆಕಾಣಿಕೆಗೆ ಆಡಳಿತ ಮಂಡಳಿ ಅಧ್ಯಕ್ಷರಾದ ನಾಡೋಜ ಡಾ.ಜಿ ಶಂಕರ್ ಬಾರ್ಕೂರು ಕಲ್ಚಪ್ರದಲ್ಲಿ ಚಾಲನೆ ನೀಡಿದರು. ಕೀಲುಕುದುರೆ, ತಟ್ಟಿರಾಯ, ವಾದ್ಯ, ಗಾರುಡಿ ಗೊಂಬೆ, ಕುಣಿತ ಭಜನೆ, ಪೂರ್ಣ ಕುಂಭದ ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನದವರೆಗೆ ಹೊರೆಕಾಣಿಕೆಯನ್ನು ಕಂಡೊಯ್ಯಲಾಯಿತು.


ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಹೊರೆಕಾಣಿಕೆ ಸಲ್ಲಿಸಿದ ಭಕ್ತಾಧಿಗಳಿಗೆ ಆಡಳಿತ ಮಂಡಳಿ ಅಧ್ಯಕ್ಷರಾದ ನಾಡೋಜ ಜಿ.ಶಂಕರ್ ಹಾಗೂ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷರಾದ ಆನಂದ ಸಿ.ಕುಂದರ್ ಪ್ರಸಾದ ವಿತರಿಸಿದರು. ನಾಡೋಜ ಜಿ.ಶಂಕರ್ ಮಾತನಾಡಿ ಹೊರೆ ಕಾಣಿಕೆ ಸಲ್ಲಿಸಿದ ಭಕ್ತಾಧಿಗಳಿಗೆ ಕೃತಜ್ಞತೆ ಸಲ್ಲಿಸಿಕೊಂಡರು.


ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಬಾರಕೂರು ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್ ಬಾರ್ಕೂರು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್ ರಂಗನಕೇರಿ ಬಾರಕೂರು, ಮಲ್ಪೆ ಮೀನುಗಾರರ ಅಧ್ಯಕ್ಷ ನಾರಾಯಣ ಕರ್ಕೇರ, ಆಳ ಸಮುದ್ರ ಟ್ರಾಲ್ ಬೋಟ್ ಅಸೋಸಿಯೇನ್ ಮಲ್ಪೆ ಇದರ ಅಧ್ಯಕ್ಷ ಕರುಣಾಕರ ಸಾಲ್ಯಾನ್, ಬಗ್ವಾಡಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ,ಬಿಲ್ಲವ ಸಮಾಜ ಸೇವಾ ಅಧ್ಯಕ್ಷ ಸರ್ವೋತ್ತಮ ಪೂಜಾರಿ, ಮತ್ಸ್ಯೋದ್ಯಮಿ ರಮೇಶ್ ಕೋಟ್ಯಾನ್, ಮತ್ಸ್ಯೋದ್ಯಮಿ ಸೋಮನಾಥ ಕಾಂಚನ್, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ ಅಮೀನ್, ಉದ್ಯಮಿ ಶಿವ ಕರ್ಕೇರ ಸಾಲಿಗ್ರಾಮ, ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳು, ಸಂಯುಕ್ತ ಸಭಾದ ಪದಾಧಿಕಾರಿಗಳು, ವ್ಯಾಪ್ತಿಯ ಎಲ್ಲಾ ಗುರಿಕಾರರು, ಅನ್ನದಾನ ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು. ನಂತರ ಸಂಜೆ ೭.೦೦ ರಿಂದ ಶ್ರೀ ಅಮೃತೇಶ್ವರೀ ದಶವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

administrator

Related Articles

Leave a Reply

Your email address will not be published. Required fields are marked *

You cannot copy content of this page