• March 12, 2026
  • Last Update March 12, 2026 3:30 pm
  • Brahmavara

ಬ್ರಹ್ಮಾವರ : ಬಿಜೆಪಿ ವತಿಯಿಂದ ಮಾರ್ಚ್ 14 ಹಾಗೂ 15ರಂದು ಅಟಲ್ ಟ್ರೋಪಿ

ಬ್ರಹ್ಮಾವರ : ಬಿಜೆಪಿ ವತಿಯಿಂದ ಮಾರ್ಚ್ 14 ಹಾಗೂ 15ರಂದು ಅಟಲ್ ಟ್ರೋಪಿ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿ ಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ಮಾ.೧೨: ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ ಯುವ ಮೋರ್ಚಾ ವತಿಯಿಂದ ಮಾರ್ಚ್ 14 ಮತ್ತು 15 ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಟಲ್ ಟ್ರೋಫಿ ಹೆಸರಿನ ಕ್ರಿಕೆಟ್ ಪಂದ್ಯಾಟ ನಡೆಸಲಾಗುವುದು ಎಂದು ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ ಕುಲಾಲ್ ನುಡಿದರು. ಅವರು ಬ್ರಹ್ಮಾವರ ಹೋಟೆಲ್ ಗಜಾನನ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದರು.


ಪಕ್ಷ ಸಂಘಟನೆ ಮತ್ತು ಯುವಕರನ್ನು ಸಂಘಟಿಸುವ ಉದ್ದೇಶದಿಂದ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್.ಎ.ಸುವರ್ಣ ನೇತೃತ್ವದಲ್ಲಿ ಈ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ. ಉಡುಪಿ ಗ್ರಾಮಾಂತರದ 13 ಪಂಚಾಯತ್ ವ್ಯಾಪ್ತಿಯ ಯುವ ಕಾರ್ಯಕರ್ತರಿಗಾಗಿ ಪಂದ್ಯಾಟ ಆಯೋಜಿಸಿದ್ದು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಯುವಮೋರ್ಛಾ ಉಡುಪಿ ಜಿಲ್ಲಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಮಾತನಾಡಿ ಈ ಕ್ರಿಕೆಟ್ ಪಂದ್ಯಾಟವನ್ನು ಮಾರ್ಚ್ ೧೪ ಶನಿವಾರ ಬೆಳಿಗ್ಗೆ ೯ ಗಂಟೆಗೆ ಉದ್ಘಾಟಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಮಾಚ್೧೫ ಆದಿತ್ಯವಾರ ಸಂಜೆ ೫.೩೦ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಿದ್ದು ಸಮಾರಂಭದಲ್ಲಿ ಪ್ರಥಮ ಬಹುಮಾನವಾಗಿ ನಗದು ಮೊತ್ತ ರೂ.55,555 ಹಾಗೂ ಟ್ರೋಪಿ, ದ್ವಿತೀಯ ಬಹುಮಾನ ರೂ.33,333 ಹಾಗೂ ಟ್ರೋಪಿ ಮತ್ತ್ತು ಸರಣಿ ಶ್ರೇಷ್ಟ ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಗ್ರಾಮಾಂತರ ಬಿಜೆಪಿ ಯುವ ಮೋರ್ಛಾದ ಅಧ್ಯಕ್ಷ ಗೌತಮ್ ಅಗ್ರಹಾರ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಾನಂದ ನಾಯಕ್ ಬ್ರಹ್ಮಾವರ, ಯುವ ಮೋರ್ಛಾ ಮಂಡಲ ಕಾರ್ಯದರ್ಶಿ ಸುಶಾಂತ್ ಪೂಜಾರಿ, ಉಪಾಧ್ಯಕ್ಷರಾದ ಆಯುಷ್ ಹಾಗೂ ಸಚಿನ್ ಪೂಜಾರಿ, ಸಂಚಾಲಕ ಪ್ರದೀಪ್ ಕುಂದರ್ ಹಾಗೂ ಮಿಥುನ್ ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page