ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ,ಮಾ.31: ಇಲ್ಲಿನ ವಾರಂಬಳ್ಳಿ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಶಿಲಾಮಯ ಗುಡಿಯಾಗಿ ನವೀಕೃತಗೊಂಡಿದ್ದು ಶ್ರೀ ವೇಣುಗೋಪಾಲ ಕೃಷ್ಣದೇವರ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಹೋತ್ಸವ ಏಪ್ರಿಲ್ 12ರಂದು ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಅಡಿಗ ಹಾಗೂ ಬಿ ರಾಜರಾಮ ಸೋಮಯಾಜಿಯವರ ಮಾರ್ಗದರ್ಶನದಲ್ಲಿ ಸಂಪನ್ನಗೊಳ್ಳಲಿದೆ.

ಎ.11ರಂದು ಸಂಜೆ 4.00 ರಿಂದ ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ಎ.೧೨ರಂದು ಬೆಳಿಗ್ಗೆ ಬ್ರಹ್ಮಕಲಶ, ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣಾ ನಡೆಯಲಿದೆ. ೧೦:೪೫ ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ..
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್‌ಗೊಲ್ಲ ಅಧ್ಯಕ್ಷತೆಯನ್ನು ವಹಿಸಲಿದ್ದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಂಬಲಪಾಡಿ ಜನಾರ್ಧನ ದೇವಸ್ಥಾನದ ಬಿ ವಿಜಯ ಬಲ್ಲಾಳ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಬಿ. ರಾಮಗೊಲ್ಲ, ಉದ್ಯಮಿ ಬಿಜು ನಾಯರ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ನಿರ್ದೇಶಕ ನಾಗರಾಜ್ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಶ್ರೀ ವಿಶ್ವನಾಥ ಶಣೈ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ನ್ಯಾಯವಾದಿ ಸುಪ್ರಸಾದ್ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಎಸ್ ನಾರಾಯಣ, ಉಡುಪಿ ಉಡುಪಿ ಜಿಲ್ಲಾ ಗೊಲ್ಲ (ಯಾದವ) ಸಮಾಜದ ಅಧ್ಯಕ್ಷ ದಯಾನಂದ ಬಿ.ಆರ್ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದಲ್ಲಿ ದಾನಿಗಳಾದ ರಾಮಗೊಲ್ಲ, ಕರುಣಾಕರ ಗೊಲ್ಲ, ಗಣೇಶ ಬಸ್ರೂರು (ಶಿಲ್ಪಿ), ಶಂಕರ ಗೊಲ್ಲ, ಶ್ರೀಮತಿ ಸರಸ್ವತಿ ಟೀಚರ್, ಲಕ್ಷ್ಮೀನಾರಾಯಣ ಅಡಿಗ, ಬಿ.ರಾಜರಾಮ ಸೋಮಯಾಜಿ, ಇಂಜೀನಿಯರ್ ಶ್ರಿಧರ ಭಂಡಾರಿ, ಶ್ರೀಮತಿ ಶೈಲಾ ಮತ್ತು ಸತೀಶ ಯಾದವ್, ವಾಸ್ತು ಶಿಲ್ಪಿ ಗಣೇಶ್ ಹಿರಿಯಡಕ, ಪ್ರವರ್ಧನ ಬಿ.ಆರ್., ಶ್ರಿಧರ ಗೊಲ್ಲ ಬಿರ್ತಿ ಹಾಗೂ ಮಹಾ ಪೋಷಕರು ಮತ್ತು ಪೋಷಕರನ್ನು ಸನ್ಮಾನಿಸಲಾಗುವುದು



