ವರದಿ : ಚಿತ್ತೂರು ಪ್ರಭಾಕರ ಆಚಾರ್ಯ
ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಬ್ರಹ್ಮಾವರ, ೨೯: ಗುರಿಯನ್ನು ಸಾಧಿಸಲು ಒಗ್ಗಟ್ಟು ಮತ್ತು ಕಠಿಣ ಪರಿಶ್ರಮ ಅಗತ್ಯ ಆ ಕೆಲಸವನ್ನು ಬ್ರಹ್ಮಾವರ ಸೋಟ್ಸ್ ಕ್ಲಬ್ ಮಾಡಿ ತೋರಿಸಿ ಇತರರಿಗೆ ಮಾದರಿಯಾಗಿದೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು. ಅವರು ಮಾ.೨೯ರಂದು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್‌ನ ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆಯನ್ನು ಸಂಸ್ಥೆ ಮಾಡಿದೆ. ಗ್ರಾಮಾಂತರದ ಕ್ರೀಡಾಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ ಸಹಕಾರ ನೀಡಿದೆ. ಗ್ರಾಮಾಂತರ ಭಾಗದ ಓರ್ವ ಕ್ರಿಕೆಟ್ ಪಟುವನ್ನು ವಿಶ್ವಕ್ಕೆ ಪರಿಚಯಿಸುವಂತ ಕೆಲಸ ಬ್ರಹ್ಮಾವರ ಸೋಟ್ಸ್ ಕ್ಲಬ್‌ನಿಂದ ಆಗಲಿ ಎಂದು ಕರೆ ನೀಡಿದರು.

ಎಂ. ಚಂದ್ರಶೇಖರ ಹೆಗ್ಡೆ ಕ್ಲಬ್ ಹೌಸ್ ಉದ್ಘಾಟಿಸಿದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಕಾರ ಇಲ್ಲದೆ ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಸೋಟ್ಸ್ ಕ್ಲಬ್‌ನ್ನು ಕಟ್ಟಿಬೆಳೆಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ದೇಶದ ಜೀವನಾಡಿ ರೈಲ್ವೆ. ಕೊಂಕಣ ರೈಲ್ವೆಯನ್ನು ಭಾರತದ ರೈಲ್ವೆ ಯಲ್ಲಿ ವಿಲೀನ ಮಾಡಿದಾಗ ಸಿಂಗಲ್ ಹಳಿ ಹೋಗಿ ಹೆಚ್ಚಿನ ಹಳಿ ನಿರ್ಮಾಣಗೊಳ್ಳಲಿದೆ ಎಂದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಗೀತ, ಕಲೆ, ಕ್ರೀಡೆಯನ್ನು ಪ್ರೋತ್ಸಾಹಿದಬೇಕು. ಸ್ಫೋರ್ಟ್ಸ್ ಕ್ಲಬ್ ಬೆಳವಣಿಗೆಗೆ ಪ್ರಾಮಾಣಿಕ ಶ್ರಮ ಹಾಕಿರುವ ಚಂದ್ರಶೇಖರ ಹೆಗ್ಡೆಯವರ ಹೆಸರನ್ನು ಕ್ಲಬ್ ಹೌಸ್‌ಗೆ ಇಟ್ಟದ್ದು ಸ್ತುತ್ಯಾರ್ಹ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಘುಪತಿ ಭಟ್, ಕೋಟ ಮಣೂರು ಗೀತಾನಂದ ಫೌಂಡೇಶನ್ (ರಿ.) ಪ್ರವರ್ತಕ ಆನಂದ ಸಿ ಕುಂದರ್, ವಿಶೇಷ ಆಹ್ವಾನಿತರಾದ ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ|ಪ್ರವೀಣ್ ಕುಮಾರ್, ಬೈಲೂರಿನ ಶಂಕರನಾರಾಯಣ ಕ್ಯಾಶ್ಯೂಸ್ ನ ಹೆಚ್.ಶಶಿಧರ ಶೆಟ್ಟಿ, ಬೆಂಗಳೂರಿನ ಉದ್ಯಮಿ ಎಸ್.ಆರ್.ಗುಣಶೀಲ ರೆಡ್ಡಿ, ಎನ್.ಎನ್.ಟ್ರೇಡರ್ಸ್ ನ ಪೀಟರ್ ಡಿಸೋಜ ಹಾಗೂ ವಂಡಾರು ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಮಾಲಕ ಸಂಪತ್ ಶೆಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಎಂ.ಚಂದ್ರಶೇಖರ ಹೆಗ್ಡೆ, ಅಧ್ಯಕ್ಷ ಬಿಜು ಜಿ.ನಾಯರ್, ಕಾರ್ಯದರ್ಶಿ ಮೇಜರ್ ಜಿ.ಬಾಲಕೃಷ್ಣ ಶೆಟ್ಟಿ, ಸೋರ್ಟ್ಸ್ ಕ್ಲಬ್ ಖಜಾಂಚಿ ವಿಕ್ರಂ ಪ್ರಭು, ಗೌರವ ಕಾರ್ಯದರ್ಶಿ ಗ್ರೆಗೋರಿ ಡಿಸಿಲ್ವ, ಖಜಾಂಚಿ ವಿಕ್ರಮ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕ್ಲಬ್ ಹೌಸ್‌ನ ಸುಸಜ್ಜಿತವಾದ ಹವಾ ನಿಯಂತ್ರಿತ ರೂಮ್, ಜಿಮ್ನೇಶಿಯಂ, ಸ್ನೂಕರ್ ರೂಮ್, ರಿಕ್ರಿಯೇಶನ್ ರೂಮ್, ರೆಸ್ಟೋರೆಂಟ್, ಸ್ಟೀಮ್ ರೂಮ್‌ಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.

ಎಂ. ಚಂದ್ರಶೇಖರ ಹೆಗ್ಡೆ ನೇತೃತ್ವದಲ್ಲಿ ಪ್ರಾರಂಭಗೊಂಡ ಕ್ಲಬ್‌ನಲ್ಲಿ ಅಧ್ಯಕ್ಷರಾಗಿ ಡಾ| ಪ್ರವೀಣ್ ಕುಮಾರ್ ಶೆಟ್ಟಿ, ಮಡಾಮಕ್ಕಿ ಶಶಿಧರ ಶೆಟ್ಟಿ, ಡಾ| ಪ್ರಕಾಶ್ ತೋಳಾರ್, ಭರತ್ ಕುಮಾರ್ ಶೆಟ್ಟಿ ಮಹೇಶ್ ಶೆಟ್ಟಿ ಪ್ರಸ್ತುತ ಬಿಜು ಜಿ. ನಾಯರ್,ಗೌರವ ಕಾರ್ಯದರ್ಶಿಯಾಗಿ ಗ್ರೆಗರಿ ಡಿಸಿಲ್ವಾ ,ಕಾರ್ಯದರ್ಶಿ ಜಿ. ಬಾಲಕೃಷ್ಣ ಶೆಟ್ಟಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಸುಶೀಲಾ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರತಿಮಾ ಅರುಣ್ ಶೆಟ್ಟಿ ಪ್ರಾರ್ಥಿಸಿದರು. ಕೆ.ಸಿ ರಾಜೇಶ್ ನಿರೂಪಿಸಿದರು. ಕಾರ್ಯದರ್ಶಿ ಜಿ. ಬಾಲಕೃಷ್ಣ ಶೆಟ್ಟಿ ವಂದಿಸಿದರು.







